Ads By Google

ಅನಿರುದ್ ರನ್ನು ಧಾರಾವಾಹಿಯಿಂದ ಹೊರಹಾಕಿದ ಬೆನ್ನಲ್ಲೇ ವೈರಲ್ ಆಗಿದೆ ಮೇಘ ಶೆಟ್ಟಿ ಮಾಡಿದ್ದು.

anirud jot joteyali india
Ads By Google

ಸದ್ಯ ಕನ್ನಡದ ಹೆಸರಾಂತ ಹಾಗೂ ಕಿರುತೆರಯ ಟಾಪ್ ಧಾರಾವಾಹಿ ಜೊತೆಜೊತೆಯಲಿ ಹೆಸರಿನಂತೆ ಯಶಸ್ಸು ಟಿ ಆರ್ ಪಿ ಜನಪ್ರಿಯತೆ ಎಲ್ಲವೂ ಕೂಡ ಕಲಾವಿದರ ಜೊತೆಜೊತೆಗೇ ಮೂರು ವರ್ಷ ಸಾಗುತ್ತಾ ಬಂತು. ಹೌದು ಆದರೆ ಇದೀಗ ಅದ್ಯಾಕೋ ಕಲಾವಿದರು ಹಾಗೂ ಧಾರಾವಾಹಿ ತಂಡದ ನಡುವಿನ ವೈಮನಸ್ಸು ಬೀದಿಗೆ ಬಿದ್ದಿದ್ದು ಧಾರಾವಾಹಿಯಿಂದ ಅನಿರುದ್ಧ್ ರನ್ನು ಹೊರ ಹಾಕಲಾಗಿದೆ.

ಇನ್ನು ಈ ಬಗ್ಗೆ ಇದೀಗ ನಟಿ ಮೇಘಾ ಶೆಟ್ಟಿ ಅಲಿಯಾಸ್ ಅನು ಸಿರಿಮನೆ ಮೊದಲ ರಿಯಾಕ್ಷನ್ ನೀಡಿದ್ದು ಸತತ ಮೂರು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಜೊತೆಜೊತೆಯಲಿ ಧಾರಾವಾಹಿ ಕುರಿತಂತೆ ಬಿಸಿಬಿಸಿ ಚರ್ಚೆಯಾಗುತ್ತಲೇ ಇದ್ದು ಹಲವಾರು ಜನರಿಂದ ಹಲವಾರು ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಸದ್ಯ ಈ ಬಗ್ಗೆ ಇದೀಗ ಧಾರಾವಾಹಿ ತಂಡದ ಅನು ಸಿರಿಮನೆ ಪ್ರತಿಕ್ರಿಯಿಸಿ ಅನಿರುದ್ಧ್ ಅವರ ಬಗ್ಗೆ ಮಾತನಾಡಿದ್ದು ಜೊತೆಜೊತೆಯಲಿ ಧಾರಾವಾಹಿಯ ಕುರಿತು ಮೂರು ದಿನಗಳಿಂದ ಹರಿದಾಡಿದ್ದ ಸುದ್ದಿ ಧಾರಾವಾಹಿ ಪ್ರಾರಂಭವಾದಾಗ ಯಾವ ರೀತಿ ಸೆನ್ಸೇಷನ್ ಉಂಟು ಮಾಡಿತ್ತೋ ಅದೇ ರೀತಿಯಾಗಿ ಅನಿರುದ್ಧ್ ಅವರನ್ನು ಹೊರ ಹಾಕಿದ ವಿಚಾರ ಕೂಡ ದೊಡ್ಡ ಸುದ್ದಿಯಾಯಿತು. ಹೌದು ಇದಕ್ಕೆ ಕಾರಣ ಯಾವುದೇ ಬಲವಾದ ಕಾರಣವಿಲ್ಲದೇ ಒಬ್ಬ ಕಲಾವಿದನನ್ನು ಧಾರಾವಾಹಿಯಿಂದ ಅಷ್ಟು ಸುಲಭವಾಗಿ ಕೈಬಿಡುವಂತಿಲ್ಲ.

ಅದರಲ್ಲೂ ಕೂಡ ಅನಿರುದ್ಧ್ ಸಿನಿಮಾದಿಂದ ಹೆಸರು ಮಾಡಿ ಬಂದವರು ಅನ್ನೋ ಕಾರಣ ಒಂದು ಕಡೆಯಾದರೆ. ಮತ್ತೊಂದು ಕಡೆ ಸಾಹಸಸಿಂಹ ವಿಷ್ಣುವರ್ಧನ್ ರವರ ಅಳಿಯ ಅನ್ನೋದು ಮತ್ತೊಂದು ಕಾರಣವೂ ಇದೆ. ಇನ್ನು ಇದೇ ಕಾರಣಕ್ಕೆ ಧಾರಾವಾಹಿ ನಿರೀಕ್ಷೆಗಿಂತ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದ್ದು ಎಂದರೆ ತಪ್ಪಾಗಲಾರದು.

ಆದರೆ ಸ್ವತಃ ಧಾರಾವಾಹಿ ತಂಡ ಹೇಳುವಂತೆ ಅನಿರುದ್ಧ್ ಅವರು ಧಾರಾವಾಹಿ ತಂಡಕ್ಕೆ ಕೊರೊನಾ ಸಮಯದಿಂದಲೂ ಕೂಡ ಕಿರಿಕಿರಿ ನೀಡಲು ಶುರು ಮಾಡಿದ್ದು ಸ್ಟಾರ್ ಗಿರಿ ಬಂದೊಡನೆ ಅವರ ನಡವಳಿಕೆಯೂ ಬದಲಾಯಿತಂತೆ. ಮಾತಿನಲ್ಲಿ ಹೇಳುವಂತೆ ಅವರು ನಡೆದುಕೊಳ್ಳುವ ರೀತಿ ಇಲ್ಲ. ಪ್ರತಿದಿನ ಒಂಭತ್ತು ಗಂಟೆ ಕೆಲಸದ ಸಮಯದಲ್ಲಿ ಮೂರ್ನಾಲ್ಕು ಗಂಟೆ ಚರ್ಚೆ ಮಾಡಿಯೇ ಸಮಯ ವ್ಯರ್ಥ ಮಾಡುತ್ತಿದ್ದು ಅಷ್ಟೇ ಅಲ್ಲದೇ ಇದರಿಂದಾಗಿ ನಿರ್ಮಾಪಕರಿಗೆ ಸಾಕಷ್ಟು ನಷ್ಟ ಉಂಟಾಗಿದ್ದೂ ಇದೆಯಂತೆ.

ಮೊದಲೆಲ್ಲಾ ಬಹಳ ಸರಳವಾಗಿ ರಸ್ತೆ ಬದಿಯಲ್ಲೇ ಕೂತು ಒಟ್ಟಿಗೆ ಊಟ ಮಾಡುತ್ತಿದ್ದ ಅನಿರುದ್ಧ್ ರವರು ನಂತರದಲ್ಲಿ ರಾಮೋಜಿ ಫಿಲಂ ಸಿಟಿಯಲ್ಲಿ ಚಿತ್ರೀಕರಣ ನಡೆದಾಗ ಅವರೊಬ್ಬರ ಊಟದ ಖರ್ಚೇ ಎರಡು ಲಕ್ಷ ರೂಪಾಯಿ ಆಯಿತಂತೆ. ಇನ್ನು ಚಿತ್ರೀಕರಣದ ಸಮಯದಲ್ಲಿ ನಿರ್ದೇಶಕರಿಗೆ ಬೈದು ಮೊನ್ನೆ ಧಾರಾವಾಹಿಯಿಂದ ಹೊರ ಬಂದಿದ್ದು
ಆದರೆ ಇಷ್ಟೂ ದಿನ ಸಹಿಸಿದ ಧಾರಾವಾಹಿ ತಂಡ ಮತ್ತೆ ಅನಿರುದ್ಧ್ ಅವರನ್ನು ಸಹಿಸೋದು ಸಾಧ್ಯವಿಲ್ಲ ಎಂಬ ಕಾರಣಕ್ಕೆ ವಾಹಿನಿಯ ಅನುಮತಿ ಪಡೆದು ಅವರನ್ನು ಧಾರಾವಾಹಿಯಿಂದ ಹೊರಗೆ ಕಳುಹಿಸಲಾಗಿದೆ.

ವಾಹಿನಿಯ ಫಿಕ್ಷನ್ ಮುಖ್ಯಸ್ಥರೂ ಸಹ ಮಾತನಾಡಿ ಅನಿರುದ್ಧ್ ಅವರ ನಡವಳಿಕೆ ಬರುಬರುತ್ತಾ ಬದಲಾಗಿದ್ದು ಒಂದು ವರ್ಷಕ್ಕೆ ನಲವತ್ತು ಪರ್ಸೆಂಟ್ ಸಂಭಾವನೆಯ ಹಣ ಹೆಚ್ಚಿಸಿಕೊಂಡರು. ಸೆಟ್ ನಲ್ಲಿ ಕೂಗಾಡೋದು ಇವರಿಂದ ಹಲವಾರು ಮಂದಿ ಕೆಲಸ ಬಿಟ್ಟರು. ಈ ಹಿಂದೆಯೂ ಸಾಕಷ್ಟು ಬಾರಿ ಚಿತ್ರೀಕರಣದಿಂದ ಹೊರ ನಡೆದು ಅವರನ್ನು ಸಮಾಧಾನ ಮಾಡಿ ಕರೆತಂದ ಉದಾಹರಣೆಯೂ ಇದ್ದು ಈಗ ಅದು ಸಾಧ್ಯವಾಗದ ಕಾರಣ ಅವರನ್ನು ಕೈಬಿಡಲಾಗುತ್ತಿದೆ ಎಂದರು.

ಇತ್ತ ಅನಿರುದ್ಧ್ ಅವರ ಪ್ರಕಾರ ನಾನು ಕೂಗಾಡಿದ್ದು ನಿಜ. ಬೈದಿದ್ದು ನಿಜ ಆದರೆ ಅದೆಲ್ಲವೂ ಸ್ಕ್ರಿಪ್ಟ್ ಗಾಗಿ ಮಾತ್ರ. ಹೌದು ಧಾರಾವಾಹಿ ಚೆನ್ನಾಗಿ ಬರಲಿ ಎನ್ನುವ ಕಾರಣಕ್ಕೆ ಮಾತ್ರ ಎಂದಿದ್ದರು. ಇನ್ನು ಇತ್ತ ಕಿರುತೆರೆ ನಿರ್ಮಾಪಕರ ಸಂಘದವರೂ ಸಹ ಒಗ್ಗಟ್ಟಾಗಿ ಅನಿರುದ್ಧ್ ಅವರನ್ನು ಇನ್ನು ಎರಡು ವರ್ಷಗಳ ಕಾಲ ಯಾರೂ ಸಹ ಯಾವ ಧಾರಾವಾಹಿಗೂ ತೆಗೆದುಕೊಳ್ಳಬಾರದು ಎಂದು ನಿರ್ಧಾರ ಮಾಡಿರುವುದಾಗಿ ತಿಳಿಸಿದ್ದು ಸದ್ಯ ಇದೀಗ ಈ ಬಗ್ಗೆ ಅನು ಸಿರಿಮನೆ ಸಹ ಪ್ರತಿಕ್ರಿಯೆ ನೀಡಿ ಮಾತನಾಡಿದ್ದಾರೆ.

ಹೌದು ನಾನು ಎರಡು ದಿನಗಳಿಂದ ನ್ಯೂಸ್ ಗಳನ್ನೇ ನೋಡಿಲ್ಲ. ಅದರಿಂದ ನನಗೆ ಯಾವ ವಿಚಾರವೂ ಗೊತ್ತಿಲ್ಲ.ಸೆಟ್ ನಲ್ಲೊ ಗಲಾಟೆ ನಡೆದಿದ್ದು ನಿಜ. ಆದರೆ ಅದೆಲ್ಲವೂ ಮಾತುಕತೆಯಿಂದ ಸತಿಹೋಗುತ್ತದೆ ಎಂದು ಅಂದುಕೊಂಡಿದ್ದೆ. ಆದರೆ ಇಷ್ಟು ದೊಡ್ಡ ಮಟ್ಟಕ್ಕೆ ಇದು ಆಗುತ್ತದೆ ಎಂದುಕೊಂಡಿರಲಿಲ್ಲ. ಈ ಹಿಂದೆಯೂ ಕೂಡ ಸಾಕಷ್ಟು ಬಾರಿ ಗಲಾಟೆ ಆಗಿತ್ತು ಅದೆಲ್ಲವೂ ಸಂದಾನದ ಮೂಲಕ ಸರಿ ಹೋಗಿತ್ತು. ಇದು ಹಾಗೆ ಆಗುತ್ತದೆ ಎಂದುಕೊಂಡಿದ್ದೆವು ಎಂದಿದ್ದಾರೆ.

ಇನ್ನು ಈ ಹಿಂದೆ ಮೇಘಾ ಶೆಟ್ಟಿ ಅವರೂ ಕೂಡ ಚಿತ್ರೀಕರಣದ ವೇಳೆ ಕಿರಿಕ್ ಮಾಡಿಕೊಂಡು ಧಾರಾವಾಹಿಯಿಂದ ಹೊರ ಹೋಗಿದ್ದರು. ಆ ಬಳಿಕ ಅವರೇ ಧಾರಾವಾಹಿ ತಂಡವನ್ನು ಕ್ಷಮೆ ಕೇಳಿ ಮರಳಿ ಬಂದಿದ್ದು ಧಾರಾವಾಹಿ ತಂಡ ಹೇಳುವಂತೆ ಮೇಘಾ ಶೆಟ್ಟಿ ಅವರ ನಡವಳಿಕೆ ಬದಲಾಗಲೂ ಸಹ ಅನಿರುದ್ಧ್ ಅವರೇ ಕಾರಣವಂತೆ.

ಅದೇ ಕಾರಣಕ್ಕೆ ಮೇಘಾ ಶೆಟ್ಟಿ ಅವರನ್ನು ಆಗ ಕೈಬಿಟ್ಟು ಮರಳಿ ಸೇರಿಸಿಕೊಂಡಿದ್ದು ಸದ್ಯ ಇದೀಗ ಅನಿರುದ್ಧ್ ಅವರನ್ನು ಕೈ ಬಿಡೋದು ಮಾತ್ರವಲ್ಲ ಸಂಪೂರ್ಣವಾಗಿ ಎರಡು ವರ್ಷಗಳ ಕಾಲ ಕಿರುತೆರೆಯಿಂದಲೇ ದೂರ ಇಡುವ ನಿರ್ಧಾರ ಮಾಡಿದ್ದಾರೆ. ಇನ್ನು ಧಾರಾವಾಹಿ ತಂಡದ ಈ ನಿರ್ಧಾರವನ್ನು ಸಾಕಷ್ಟು ಜನ ಸರಿ. ಅವರಿಗೆ ಅಹಂಕಾರ ಇದ್ದರೆ ಇದು ಪಾಠವಾಗಲಿ ಎಂದರೆ ಮತ್ತೆ ಕೆಲವರು ಆರ್ಯವರ್ಧನ್ ಪಾತ್ರಕ್ಕೆ ಅಮಿರುದ್ಧ್ ಅವರೇ ಮುಂದುವರೆಯಬೇಕು ಎಂದಿದ್ದಾರೆ.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field