Dhruva Sarja: ಮುಲಾಜಿಲ್ಲದೆ ಮಾಧ್ಯಮ ಮುಂದೆ ಧ್ರುವ ಸರ್ಜಾ ಇಂತಹ ವ್ಯಕ್ತಿ ತಿಳಿಸಿದ ಮೇಘನಾ, ಅವನು ಇನ್ನು ಎಳಸು.
ಮಾಧ್ಯಮದ ಮುಂದೆ ಧ್ರುವ ಸರ್ಜಾ ಇಂತಹ ವ್ಯಕ್ತಿ ಎಂದು ತಿಳಿಸಿದ ಮೇಘನಾ ರಾಜ್.
Meghana Raj About Dhruva Sarja: ಜನಪ್ರಿಯ ನಟಿಯಾದ ಮೇಘನಾ ರಾಜ್ (Meghana Raj) ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ನಟಿ ಮೇಘನಾ ರಾಜ್ ತಮ್ಮ ನಟನೆಯ ಮೂಲಕ ಬಹಳಷ್ಟು ಖ್ಯಾತಿ ಗಳಿಸಿದ್ದರು. ಇದೀಗ ಮೇಘನಾ ಅವರು ತತ್ಸಮ ತದ್ಭವ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ನಟಿ ಯೂಟ್ಯೂಬ್ ಸಂದರ್ಶನದಲ್ಲಿ ಕೆಲವು ವಿಚಾರವನ್ನು ಹಂಚಿಕೊಂಡಿದ್ದಾರೆ.
ನಟಿ ಮೇಘನಾ ರಾಜ್ ಸಂದರ್ಶನದಲ್ಲಿ ಚಿರಂಜೀವಿ ಸರ್ಜಾ ಅವರ ಕೊನೆಯ ಸಿನಿಮಾವಾದ ರಾಜಮಾರ್ತಾಂಡ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ ಸಂದರ್ಶನದಲ್ಲಿ ನಟಿ ಮೇಘನಾ ರಾಜ್ ಅವರಿಗೆ ಕುಟುಂಬದ ಬಗ್ಗೆ ಸಹ ಕೇಳಲಾಗಿದೆ. ಈ ಸಂದರ್ಭದಲ್ಲಿ ನಟಿ ಮೇಘನಾ ರಾಜ್ ಅವರು ಧ್ರುವ ಸರ್ಜಾ (Dhruva Sarja) ಬಗ್ಗೆ ಹೆಚ್ಚು ಮಾತನಾಡಿದ್ದಾರೆ.
ರಾಜ ಮಾರ್ತಾಂಡ ಸಿನಿಮಾದ ಬಗ್ಗೆ ಮಾತನಾಡಿದ ನಟಿ ಮೇಘನಾ ರಾಜ್
ರಾಜ ಮಾರ್ತಾಂಡ ಸಿನಿಮಾದಲ್ಲಿ ರಾಯನ್ ಸರ್ಜಾ ಕಾಣಿಸಿಕೊಳ್ಳುತ್ತಿದ್ದಾನೆ. ಟ್ರೈಲರ್ ಮಾತ್ರವಲ್ಲ ಇಡೀ ಸಿನಿಮಾಗೆ ಧ್ರುವ ಸರ್ಜಾ ಡಬ್ಬಿಂಗ್ ಮಾಡಿದ್ದಾರೆ. ನನ್ನ ಕಡೆಯಿಂದ ಸಿನಿಮಾಗೆ ಯಾವ ರೀತಿಯ ಕಂಟ್ರಿಬ್ಯುಟ್ ಮಾಡುತ್ತಿರುವೆ ಎಂದರೆ ಸಿನಿಮಾ ಪ್ರಚಾರದಿಂದ ಹಿಡಿದು ರಿಲೀಸ್ ವರೆಗೂ ನನ್ನ ಸಂಪೂರ್ಣ ಬೆಂಬಲ ಸಿಗುತ್ತದೆ. ಹೀಗಾಗಿ ರಾಜ ಮಾರ್ತಾಂಡ ನನ್ನ ಸಿನಿಮಾ ಅಂತ ಹೇಳುವುದರಲ್ಲಿ ತಪ್ಪಿಲ್ಲ ಎಂದು ಮೇಘನಾ ರಾಜ್ ಮಾತನಾಡಿದ್ದಾರೆ.
ಧ್ರುವನಿಗೆ ಎಳಸು ಎಂದ ನಟಿ ಮೇಘನಾ ರಾಜ್
ರಾಜ ಮಾರ್ತಾಂಡ ಸಿನಿಮಾ ಡಬ್ಬಿಂಗ್ ಮಾಡುವುದಕ್ಕೆ ಧ್ರುವ ಸರ್ಜಾ ತುಂಬಾನೇ ಕಷ್ಟ ಪಡುತ್ತಿದ್ದ. ಅವನಿಗೆ ಡಬ್ಬಿಂಗ್ ಮಾಡಲು ಆಗುತ್ತಿರಲಿಲ್ಲ. ಚಿರು ಮತ್ತು ಧ್ರುವ ಬಾಂಡ್ ತುಂಬಾನೇ ಸ್ಟ್ರಾಂಗ್ ಆಗಿತ್ತು. ತಂದೆ ತಾಯಿಗಿಂತ ಜಾಸ್ತಿ ಪ್ರೀತಿಕೊಟ್ಟು ಧ್ರುವ ಸರ್ಜಾನ ನೋಡಿಕೊಳ್ಳುತ್ತಿದ್ದರು ಹೀಗಾಗಿ ಅಣ್ಣ ಅಂದರೆ ಅಷ್ಟು ಪ್ರೀತಿ ಧ್ರುವ ಸರ್ಜಾ ಅವರಿಗೆ ಇದೆ ಎಂದು ನಟಿ ಮೇಘನಾ ರಾಜ್ ಹೇಳಿದ್ದಾರೆ. ಫಿಸಿಕಲಿ ಅಣ್ಣನ ವಿಡಿಯೋ ಎದುರು ನಿಂತುಕೊಂಡು ಡಬ್ಬಿಂಗ್ ಮಾಡುವುದಕ್ಕೆ ಸಾಧ್ಯವೇ ಇಲ್ಲ.
ಮನೆಯಲ್ಲಿ ನಮಗೆ ಧ್ರುವ ಸಿನಿಮಾ ನೋಡುವಷ್ಟು ಶಕ್ತಿ ಇರಲಿಲ್ಲ. ಹೀಗಿರುವಾಗ ಡಬ್ಬಿಂಗ್ ಕಷ್ಟ. ಧ್ರುವ ಹೇಳಿರುವುದು ನಿಜವೇ ಶಿವಣ್ಣ ಅವರಿಗೆ ಜೀವನ ಎಕ್ಸ್ಪೀರಿಯನ್ಸ್ ಇದೆ. ದ್ರುವ ಸರ್ಜಗಿಂತ ತುಂಬಾ ಸೀನಿಯರ್, ವರ್ಷ ಕಳೆಯುತ್ತಿದ್ದಂತೆ ಆ ಒಂದು ಶಕ್ತಿನ ಪಡೆದುಕೊಂಡು ಬಂದಿದ್ದಾರೆ. ಆದರೆ ಧ್ರುವ ಇನ್ನು ಎಳಸು ಅಷ್ಟು ಶಕ್ತಿ ಇನ್ನು ಬಂದಿಲ್ಲ, ನೋಡಲು ಕಟ್ಟುಮಸ್ತು ರಫ್ ಆಗಿರಬಹುದು ಆದರೆ ಇಲ್ಲ ಪಾಪ ರಾಯನ್ ಮತ್ತು ಧ್ರುವನಿಗೂ ವ್ಯತ್ಯಾಸವೇ ಇಲ್ಲ ಎಂದು ಮೇಘನಾ ರಾಜ್ ಹೇಳಿದ್ದಾರೆ.
ಯಾಕೆ ಇಲ್ಲಿ ಶಿವಣ್ಣನ ಹೆಸರು ಬಂದಿದೆ ಎಂದರೆ ಶಂಕರ್ ನಾಗ್ ಅಗಲಿದಾಗ ಅನಂತ್ ನಾಗ್ ಕೂಡ ಇದೆ ಪರಿಸ್ಥಿತಿ ಎದುರಿಸಿದರು. ಪುನೀತ್ ರಾಜ್ ಕುಮಾರ್ ಅಗಲಿದಾಗ ಶಿವಣ್ಣ ಕೂಡ ಇದೆ ಸ್ಥಾನದಲ್ಲಿದ್ದರು ಎಂದು ನಟಿ ಮೇಘನಾ ರಾಜ್ ಹೇಳಿದ್ದಾರೆ. ಇನ್ನು ನಟಿ ಮೇಘನಾ ರಾಜ್ ಸರ್ಜಾ ಕುಟುಂಬ ಹಾಗು ಸುಂದರ್ ರಾಜ್ ಕುಟುಂಬದ ನಡುವೆ ಇರುವ ಬಾಂಡಿಂಗ್ ಬಗ್ಗೆ ಸಹ ಮಾತನಾಡಿದ್ದಾರೆ.