Meghana Raj: ಎರಡನೇ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ ಮೇಘನಾ ರಾಜ್, ಎಲ್ಲ ಪ್ರಶ್ನೆಗೂ ಕ್ಲಾರಿಟಿ ಕೊಟ್ಟ ಮೇಘನಾ ರಾಜ್.
ನಟಿ ಮೇಘನಾ ರಾಜ್ ಅವರು ಎರಡನೆಯ ಮದುವೆಯ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.
Meghana Raj Second Marriage: ಸ್ಯಾಂಡಲ್ ವುಡ್ ನ ಸ್ಟಾರ್ ನಟಿ ಮೇಘನಾ ರಾಜ್ (Meghana Raj) ಅವರು ಆಗಾಗ ತಮ್ಮ ಮದುವೆಯ ವಿಚಾರವಾಗಿ ಸುದ್ದಿಯಾಗುತ್ತಾರೆ. ಇನ್ನು ನಟಿ ಸಾಕಷ್ಟು ವರ್ಷಗಳ ನಂತರ ಚಿತ್ರರಂಗಕ್ಕೆ ಮರಳಿರುವ ಕಾರಣ ಅಭಿಮಾನಿಗಳು ಖುಷಿಯಲ್ಲಿದ್ದಾರೆ. ನಟಿ ಮೇಘನಾ ರಾಜ್ ಇದೀಗ ತತ್ಸಮ ತದ್ಭವ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ.
ನಟಿ ವಿವಾಹದ ಬಳಿಕ ಚಿತ್ರರಂಗದಿಂದ ದೂರ ಇದ್ದಿದ್ದರು. ಇನ್ನು ಮೇಘನಾ ರಾಜ್ ಅಭಿನಯದ ಚಿತ್ರ ಇನ್ನೇನು ಸದ್ಯದಲ್ಲೇ ತೆರೆ ಕಾಣಲಿದೆ. ಚಿತ್ರೀಕರಣದಲ್ಲಿ ಬ್ಯುಸಿ ಆಗಿರುವ ನಟಿ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆ ಸಂವಾದ ನಡೆಸುತ್ತಲೇ ಇರುತ್ತಾರೆ.
ನಟಿ ಮೇಘನಾ ರಾಜ್ ಎರಡನೇ ಮದುವೆಯ ಬಗ್ಗೆ ಸುದ್ದಿ ವೈರಲ್
ಕನ್ನಡದ ಸ್ಟಾರ್ ನಟರಾದ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ ಮದುವೆಯಾಗಿ ಸ್ಯಾಂಡಲ್ ವುಡ್ ನ ಬೆಸ್ಟ್ ಜೋಡಿಯಾಗಿದ್ದರು. ಆದರೆ ಚಿರು ಅತಿ ಚಿಕ್ಕ ವಯಸ್ಸಿನಲ್ಲಿಯೇ ಅಕಾಲಿಕ ಮರಣ ಹೊಂದಿದ್ದಾರೆ. ಚಿರು ಮರಣ ಹೊಂದಿದ ಸಮಯದಲ್ಲಿ ನಟಿ ಮೇಘನಾ ರಾಜ್ ಗರ್ಭಿಣಿಯಾಗಿದ್ದರು. ಇನ್ನು ಪತಿಯ ಅಗಲಿಕೆಯ ನೋವಿನಲ್ಲಿದ್ದ ನಟಿ ಚಿತ್ರರಂಗದಿಂದ ದೂರವಾಗಿ ತಮ್ಮ ಮಗನ ಆರೈಕೆಯಲ್ಲಿ ಸಮಯ ಕಳೆಯುತ್ತಿದ್ದರು.
ಇನ್ನು ಚಿರು ನಿಧನರಾದ ಸ್ವಲ್ಪ ಸಮಯದಲ್ಲೇ ನಟಿ ಮೇಘನಾ ರಾಜ್ ಎರಡನೇ ಮದುವೆಯ ಬಗ್ಗೆ ನಾನಾ ರೀತಿಯ ಸುದ್ದಿಗಳು ವೈರಲ್ ಆಗಿದ್ದವು. ಸಾಕಷ್ಟು ಬಾರಿ ಮೇಘನಾ ರಾಜ್ ತಮ್ಮ ಎರಡನೇ ಮದುವೆಯ ಬಗ್ಗೆ ಸ್ಪಷ್ಟನೆ ನೀಡಿದ್ದರು. ಆದರು ಸಹ ಆಗಾಗ ನಟಿಯ ಎರಡನೆಯ ಮದುವೆಯ ವಿಚಾರವಾಗಿ ಸುದ್ದಿಯಾಗುತ್ತಾರೆ. ಇದೀಗ ನಟಿ ಮೇಘನಾ ರಾಜ್ ತಮ್ಮ ಎರಡನೇ ಮದುವೆಯ ವಿಚಾರದ ಬಗ್ಗೆ ಕ್ಲಾರಿಟಿ ನೀಡಿ ವೈರಲ್ ಸುದ್ದಿಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.
ಎರಡನೆಯ ಮದುವೆಯ ಬಗ್ಗೆ ನಟಿ ಮೇಘನಾ ರಾಜ್ ಕ್ಲಾರಿಟಿ
“ನನಗೆ ಎರಡನೇ ಮದುವೆಯ ಬಗ್ಗೆ ಯಾವುದೇ ರೀತಿಯ ಆಲೋಚನೆ ಇಲ್ಲ. ಎರಡನೇ ಮದುವೆಯ ಆಯ್ಕೆ ಇದೆ ಎನ್ನುವ ಬಗ್ಗೆ ನನಗೆ ಯೋಚನೆ ಕೂಡ ಇಲ್ಲ. ನನ್ನ ಜೊತೆ ಈ ವಿಚಾರದ ಬಗ್ಗೆ ಯಾರು ಚರ್ಚೆ ಮಾಡಿಲ್ಲ. ಎರಡನೇ ಮದುವೆ ಬಗ್ಗೆ ಯೋಚನೆ ಮಾಡಿಲ್ಲ, ಮಾಡೋದು ಇಲ್ಲ.
ಒಂದು ವಿಚಾರದಲ್ಲಿ ನಾನು ತುಂಬಾ ಕ್ಲಿಯರ್ ಆಗಿದ್ದೇನೆ. ನನ್ನ ಜೀವನದಲ್ಲಿ ನನಗೆ ನನ್ನ ಮಗ ಮುಖ್ಯನಾಗುತ್ತಾನೆ. ನನ್ನ ಗಮನ ಇರುವುದು ಅವನ ಮೇಲೆ ಮಾತ್ರಾ. ಇದಕ್ಕಿಂತ ಸಿಂಪಲ್ ಆಗಿ ಏನು ಹೇಳಲು ಆಗುವುದಿಲ್ಲ. ನನ್ನ ಜೀವನ ಇರುವುದು ರಾಯನ್ ರಾಜ್ ಸರ್ಜನಿಗಾಗಿ. ನನ್ನ ಜೀವನದಲ್ಲಿ ಮಗನ ಹೊರತು ನನಗೆ ಯಾವುದೇ ಮುಖ್ಯವಲ್ಲ. ನನ್ನ ಮಗನೆ ನನ್ನ ಓನ್ ಆಂಡ್ ಆಲ್” ಎಂದು ನಟಿ ಮಾತನಾಡಿದ್ದಾರೆ. ಈ ಮೂಲಕ ತಮ್ಮ ಎರಡನೇ ಮದುವೆಯ ವಿಚಾರಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ.