Meghana Raj: ಸ್ಪಂದನ ಮನೆಯ ಹತ್ತಿರ ಬಂದು ವಿಶೇಷ ಮನವಿ ಮಾಡಿದ ಮೇಘನಾ ರಾಜ್
ಸ್ಪಂದನ ಅವರ ಅಂತಿಮ ದರ್ಶನದ ಬಳಿಕ ಮೇಘನಾ ರಾಜ್ ಮಾಧ್ಯಮದ ಮುಂದೆ ಮನವಿ ಮಾಡಿಕೊಂಡಿದ್ದಾರೆ.
Meghana Raj About Spandana Death: ಸ್ಪಂದನ (Spandana Vijay Raghavendra) ಅವರ ಅನಿರೀಕ್ಷಿತ ಮರಣ ಎಲ್ಲರಿಗು ಆಘಾತ ನೀಡಿದೆ. ಅತಿ ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತದಿಂದ ಮೃತಪಟ್ಟಿರುವ ಸ್ಪಂದನ ಅವರ ಸಾವಿಗೆ ಎಲ್ಲರು ಸಂತಾಪ ಸೂಚಿಸುತ್ತಿದ್ದಾರೆ. ಇನ್ನು ಸ್ಪಂದನ ಅವರ ಸಾವಿನ ನೋವಿನಿಂದಾಗಿ ವಿಜಯ್ ರಾಘವೇಂದ್ರ (Vijay Raghavendra) ಅವರು ಕಂಗಾಲಾಗಿದ್ದಾರೆ.
ಸ್ಪಂದನ ಅವರು ವಿದೇಶದಲ್ಲಿ ಮರಣ ಹೊಂದಿದ ಕಾರಣ ಥೈಲ್ಯಾಂಡ್ ನಲ್ಲಿ ಸ್ಪಂದನ ಅವರ ಮರಣೋತ್ತರ ಪರೀಕ್ಷೆ ನಡೆದಿದೆ.ಇನ್ನು ನಿನ್ನೆ ಸಂಜೆ ಥಾಯ್ ಪ್ಲೈಟ್ ನಲ್ಲಿ ಸ್ಪಂದನ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲಾಗಿದೆ.
ಇಂದು ಮಧ್ಯಾಹ್ನದವರೆಗೆ ಸ್ಪಂದನ ಅವರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಅಂತಿಮ ದರ್ಶನದ ಬಳಿಕ ಶ್ರೀರಾಮ್ ಪುರದ ಹರಿಶ್ಚಂದ್ರ ಘಾಟ್ (Harishchandra Ghat) ನಲ್ಲಿ ಅಂತ್ಯಕ್ರಿಯೆ ನಡೆಯುವ ಬಗ್ಗೆ ಮಾಹಿತಿ ಲಭಿಸಿದೆ. ಸ್ಪಂದನ ಅವರ ಅಂತಿಮ ದರ್ಶನಕ್ಕೆ ಸಾಕಷ್ಟು ನಟ ನಟಿಯರು ಗಣ್ಯರು ಆಗಮಿಸಿದ್ದರು. ವಿಜಯ್ ಹಾಗೂ ಸ್ಪಂದನ ಕುಟುಂಬಕ್ಕೆ ಎಲ್ಲರು ಸಾಂತ್ವನ ನೀಡುತ್ತಿದ್ದಾರೆ.
ಸ್ಪಂದನ ಅಂತಿಮ ದರ್ಶನಕ್ಕೆ ಬಂದ ನಟಿ ಮೇಘನಾ ರಾಜ್
ಇನ್ನು ಸ್ಪಂದನ ಅವರ ಅಕಾಲಿಕ ಮರಣದ ಸುದ್ದಿ ಕೇಳುತ್ತಿದ್ದಂತೆ ಅವರ ಸಾವಿನ ಹಿಂದಿನ ಕಾರಣದ ಬಗ್ಗೆ ಸಾಕಷ್ಟು ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಸ್ಪಂದನ ಅವರ ಸಾವಿಗೆ ಹಲವಾರು ಕಾರಣಗಳು ವೈರಲ್ ಆಗಿದ್ದವು.
ಲೋ ಬಿಪಿಯಿಂದ ಸ್ಪಂದನ ಮೃತಪಟ್ಟಿರುವುದಾಗಿ ಕುಟುಂಬದವರು ಮಾಹಿತಿ ನೀಡಿದ್ದರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಸ್ಪಂದನ ಅವರ ಸಾವಿನ ಸುದ್ದಿಗಳು ನಾನಾ ರೀತಿಯಲ್ಲಿ ವೈರಲ್ ಆಗಿದ್ದವು. ಇದೀಗ ಸ್ಪಂದನ ಅಂತಿಮ ದರ್ಶನಕ್ಕೆ ನಟಿ ಮೇಘನಾ ರಾಜ್ (Meghana Raj) ಆಗಮಿಸಿದ್ದು ಈ ವೇಳೆ ಸ್ಪಂದನ ಸಾವಿನ ಸುಳ್ಳು ಸುದ್ದಿಗಳ ಬಗ್ಗೆ ಮಾತನಾಡಿದ್ದಾರೆ.
ಸ್ಪಂದನ ಸಾವಿನ ಕುರಿತಂತೆ ಕಣ್ಣೀರು ಹಾಕುತ್ತ ಮನವಿ ಮಾಡಿಕೊಂಡ ಮೇಘನಾ ರಾಜ್
ಸ್ಪಂದನ ಅವರ ಅಂತಿಮ ದರ್ಶನಕ್ಕೆ ನಟಿ ಮೇಘನಾ ರಾಜ್ ಕೂಡ ಆಗಮಿಸಿದ್ದರು. ವಿಜಯ್ ಹಾಗು ಸ್ಪಂದನ ಕುಟುಂಬಕ್ಕೆ ನಟಿ ಮೇಘನಾ ರಾಜ್ ಸಾಂತ್ವನ ನೀಡಿದ್ದಾರೆ. ಸ್ಪಂದನ ಅವರ ಅಂತಿಮ ದರ್ಶನದ ಬಳಿಕ ಮೇಘನಾ ರಾಜ್ ಮಾಧ್ಯಮದ ಮುಂದೆ ಮನವಿ ಮಾಡಿಕೊಂಡಿದ್ದಾರೆ. ” ಸ್ಪಂದನ ಹಾಗು ರಾಘು ಅನ್ಯೋನ್ಯವಾಗಿದ್ದರು. ರಾಘು ಸ್ಪಂದನ ನಮ್ಮ ಕುಟುಂಬಕ್ಕೆ ಬಹಳ ಆತ್ಮೀಯರಾಗಿದ್ದಾರೆ. ಸ್ಪಂದನ ಅವರಿಗೆ ಏನು ನಡೆದಿದೆ, ಏನು ಆಗಿದೆ ಎನ್ನುವುದು ಅವರ ಕುಟುಂಬಕ್ಕೆ ತಿಳಿದಿರುತ್ತದೆ.
ಸ್ಪಂದನ ಬಗ್ಗೆ ಅಪಪ್ರಚಾರ ಮಾಡಬೇಡಿ. ಆಕೆಗೆ ಮರ್ಯಾದೆ ಕೊಡಿ. ಸೋಶಿಯಲ್ ಮೀಡಿಯಾದಲ್ಲಿ ಇಲ್ಲದೆ ಇರುವ ಸುದ್ದಿಗಳನ್ನು ಹರಡಬೇಡಿ. ಅವರ ಕುಟುಂಬಕ್ಕೆ ಸ್ಪೇಸ್ ಕೊಡಿ. ರಾಘು ಹಾಗೂ ಸ್ಪಂದನ ನನ್ನ ಫ್ಯಾಮಿಲಿ ರೀತಿ. ನಾವು ಇರೋ ಪರಿಸ್ಥಿಯಲ್ಲಿ ಇನ್ನೊಂದು ಕುಟುಂಬವನ್ನು ಹಾಗೆ ನೋಡೋಕೆ ಆಗೋದಿಲ್ಲ.ನಮ್ಮ ಕುಟುಂಬನೇ ಅವರು. ನನ್ನ ಕುಟುಂಬಕ್ಕೆ ಆಗಿರೋ ನೋವಿದು” ಎಂದಿದ್ದಾರೆ.ಈ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿಗಳನ್ನು ಹರಬೇಡಿ ಎಂದು ನಟಿ ಮೇಘನಾ ರಾಜ್ ಮನವಿ ಮಾಡಿಕೊಂಡಿದ್ದಾರೆ.