Meghana Raj: ಎರಡನೆಯ ಮದುವೆಯ ಬಗ್ಗೆ ಕ್ಲಾರಿಟಿ ನೀಡಿದ ಮೇಘನಾ ರಾಜ್, ಎಲ್ಲ ಪ್ರಶ್ನೆಗೂ ಉತ್ತರ.

ತಮ್ಮ ಎರಡನೇ ಮದುವೆಯ ವೈರಲ್ ಸುದ್ದಿಗಳಿಗೆ ಖಡಕ್ ಉತ್ತರ ನೀಡಿದ ಮೇಘನಾ ರಾಜ್.

Meghana Raj About Second Marriage: ನಟಿ ಮೇಘನಾ ರಾಜ್ (Meghana Raj) ಇತ್ತೀಚಿಗೆ ಹೆಚ್ಚು ಸುದ್ದಿಯಲ್ಲಿದ್ದಾರೆ. ತತ್ಸಮ ತದ್ಭವ ಸಿನಿಮಾ ಸಂದರ್ಶನದ ವೇಳೆ ನಟಿ ಮೇಘನಾ ರಾಜ್ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ನಟಿ ಮೇಘನಾ ರಾಜ್ ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಯ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಟಿಯಾಗಿದ್ದಾರೆ. ಸರ್ಜಾ ಕುಟುಂಬದ ಸೊಸೆಯಾದ ನಟಿ ಮೇಘನಾ ರಾಜ್ ಚಿತ್ರರಂಗದಲ್ಲಿಯೂ ಸಹ ತನ್ನದೇ ಆದ ಹೆಸರು ಮಾಡಿದ್ದಾರೆ ಎನ್ನಬಹುದು.

Meghana Raj About Second Marriage.
Image Credit: Timesofindia

ನಟಿ ಮೇಘನಾ ರಾಜ್
ನಟಿ ಮೇಘನಾ ರಾಜ್ ಪತಿ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡ ಮೇಲೆ ಒಬ್ಬಂಟಿಯಾಗಿ ತಮ್ಮ ಫ್ಯಾಮಿಲಿ ಜೊತೆ ಜೀವ ನಡೆಸುತ್ತಿದ್ದಾರೆ. ಅದರಲ್ಲೂ ಮೇಘನಾ ರಾಜ್ ಅವರಿಗೆ ಅವರ ಮಗ ರಾಯನ್ ರಾಜ್ ಅವರೇ ಎಲ್ಲಾ ಅಂತ ಹೇಳಿಕೊಂಡಿದ್ದು ಉಂಟು. ಚಿರಂಜೀವಿ ಸರ್ಜಾ ಅವರು ವಿಧಿವಶರಾದ ನಂತರ ನಟಿ ಮೇಘನಾ ರಾಜ್ ತಮ್ಮ ಮಗನ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ.

ಎರಡನೇ ಮದುವೆ ಆಗುವುದರ ಬಗ್ಗೆ ಹೇಳಿಕೊಂಡ ನಟಿ ಮೇಘನಾ
ಇತ್ತೀಚಿಗೆ ನಟಿ ಮೇಘನಾ ರಾಜ್ ಧ್ರುವ ಸರ್ಜಾ ಜೊತೆಗಿನ ಭಾಂಧವ್ಯದ ಬಗ್ಗೆ ಹೇಳಿಕೊಂಡಿದ್ದರು. ಅಲ್ಲದೆ ತಮ್ಮ ಫ್ಯಾಮಿಲಿಗೂ ಹಾಗು ಸರ್ಜಾ ಫ್ಯಾಮಿಲಿ ಬಗ್ಗೆ ಮಾತನಾಡಿದ್ದರು. ಇದೀಗ ನಟಿ ಮೇಘನಾ ರಾಜ್ ಮೊದಲ ಬಾರಿಗೆ ತಮ್ಮ ಎರಡನೇ ಮದುವೆ ಬಗ್ಗೆ ಮಾತನಾಡಿದ್ದಾರೆ.

Meghana Raj Latest Update.
Image Credit: Bollywoodshaadis

ಚಿರಂಜೀವಿ ಸರ್ಜಾ ಅವರು ಅಗಲಿದ ಬಳಿಕ ಅಭಿಮಾನಿಗಳು ಮೇಘನಾ ರಾಜ್ ಅವರ ಎರಡನೇ ಮದುವೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪಿಸಿ ಪಿಸು ಅಂತ ಮಾತನಾಡಿಕೊಳ್ಳುತ್ತಿದ್ದಾರೆ. ನಟಿ ಮೇಘನಾ ಇಂತಹ ಪ್ರಶ್ನೆಗಳಿಗೆ ಉತ್ತರಿಸದೆ ಮೌನವಾಗಿಯೇ ಉಳಿದುಬಿಟ್ಟಿದ್ದರು. ಇದೀಗ ಸಂದರ್ಶನ ಒಂದರಲ್ಲಿ ನಟಿ ಮೇಘನಾ ತಮ್ಮ ಎರಡನೇ ಮದುವೆಯ ಬಗ್ಗೆ ತಮಗೆ ಇರುವ ಅಭಿಪ್ರಾಯದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

Join Nadunudi News WhatsApp Group

ಎರಡನೇ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ ನಟಿ ಮೇಘನಾ ರಾಜ್
ನಟಿ ಮೇಘನಾ ರಾಜ್ ಅವರಿಗೆ ಸಂದರ್ಶನದಲ್ಲಿ ನಿರೂಪಕಿ ಸಿಂಗಲ್ ಪೇರೆಂಟ್ ಆಗಿ ಇರುತ್ತೀರಾ ಅಥವಾ ಎರಡನೇ ಮದುವೆ ಆಗುತ್ತೀರಾ ಅಂತ ಕೇಳಿದ್ದಾರೆ. ಅದಕ್ಕೆ ನಟಿ ಮೇಘನಾ ನಾನು ಎರಡನೇ ಮದುವೆ ಬಗ್ಗೆ ಯೋಚನೆ ಸಹ ಮಾಡಿಲ್ಲ. ಅಂತಹ ಯೋಚನೆ ನನಗೆ ಬರಲೇ ಇಲ್ಲ. ನನ್ನ ಪ್ರಿಯೋರಿಟಿ ಏನಿದ್ದರೂ ನನ್ನ ಮಗ ರಾಯನ್ ಸರ್ಜಾ ಅಷ್ಟೇ.

Meghana Raj About Chiru.
Image Credit: Indiatimes

ಎರಡನೇ ಮದುವೆ ಬಗ್ಗೆ ಮಾತೆ ಇಲ್ಲ. ಇನ್ನು ಜನರು ನನ್ನ ಬಳಿ ಬಂದು ಈ ಪ್ರಶ್ನೆಯನ್ನು ಕೇಳಿಲ್ಲ. ಆದರೆ ನಾನು ಎರಡನೇ ಮದುವೆ ಬಗ್ಗೆ ಯೋಚನೆ ಮಾಡಲ್ಲ. ಅಂತಹ ಒಂದು ಕಾನ್ಸೆಪ್ಟ್ ನನ್ನ ಜೀವನದಲ್ಲೇ ಇಲ್ಲ ಅಂತ ನಟಿ ಮೇಘನಾ ಎರಡನೇ ಮದುವೆ ಬಗ್ಗೆ ನೇರವಾಗಿ ಉತ್ತರ ನೀಡಿದ್ದಾರೆ.

Join Nadunudi News WhatsApp Group