Job Recruitment: ಹತ್ತನೇ ತರಗತಿ ಪಾಸ್ ಆದವರಿಗೆ ಬಂಪರ್ ಉದ್ಯೋಗ ಮತ್ತು ಭರ್ಜರಿ ಸಂಬಳ, ಸೇನೆಗೆ ಇಂದೇ ಅರ್ಜಿ ಸಲ್ಲಿಸಿ.

ಸೇನೆಯಲ್ಲಿ ಕಾರ್ಯ ನಿರ್ವಹಿಸಬೇಕೆಂಬ ಇಚ್ಛೆ ಇರುವವರು  ಈ ಅವಕಾಶವನ್ನು ಸದುಪಯೋಗಪಡಿಸಿಕೊಳಬಹುದು.

MES Job Recruitment: ಉದ್ಯೋಗ ಅವಕಾಶ ನಿರೀಕ್ಷೆಯಲ್ಲಿ ಪ್ರತಿಯೊಬ್ಬರು ಇರುತ್ತಾರೆ. ಹಾಗೆ ಓಬೊಬ್ಬರಿಗೆ ಒಂದೊಂದು ಉದ್ಯೋಗದಲ್ಲಿ ಆಸಕ್ತಿ ಇರುತ್ತದೆ. ತಮ್ಮ ಶಿಕ್ಷಣಕ್ಕೆ ತಕ್ಕಂತೆ ಉದ್ಯೋಗ ನಿರೀಕ್ಷೆಯಲ್ಲಿ ಇರುವುದು ಸಹಜ. ಹಾಗೆ 10  ನೇ ತರಗತಿ ಪಾಸ್ ಆದವರಿಗೆ ಒಂದು ಬಂಪರ್ ಆಫರ್ ಮುಂದಿದೆ.

ಸೇನೆಯಲ್ಲಿ ಕಾರ್ಯ ನಿರ್ವಹಿಸಬೇಕೆಂಬ ಇಚ್ಛೆ ಇರುವವರು  ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳಬಹುದು. ಭಾರತೀಯ ಸೇನೆಯ ಮಿಲಿಟರಿ ಎಂಜಿನಿಯರಿಂಗ್ ವಿಭಾಗದಲ್ಲಿ (MES) 41,000 ಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎನ್ನಲಾಗಿದೆ. ಸೇನೆಯಲ್ಲಿ ಕೆಲಸ ಮಾಡಬೇಕೆನ್ನುವವವರು ಅರ್ಜಿ ಹಾಕುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.

MES recruitment process
Image Credit: Careerpower

ಉದ್ಯೋಗ ನೇಮಕಾತಿಯ ಕುರಿತು ಮಾಧ್ಯಮ ವರದಿ ಹೀಗಿದೆ
ಎಂಜಿನಿಯರಿಂಗ್ ಶಿಕ್ಷಣ  ಮುಗಿಸಿದವರಿಗೆ  ಮಿಲಿಟರಿ ಎಂಜಿನಿಯರಿಂಗ್ ಸೇವೆಯಲ್ಲಿ ಖಾಲಿ ಇರುವ ಸ್ಥಾನಗಳ ನೇಮಕಾತಿಗೆ ಅರ್ಜಿ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಮಿಲಿಟರಿ ಎಂಜಿನಿಯರಿಂಗ್ ಸೇವೆಯು ಸದ್ಯಕ್ಕೆ ಖಾಲಿ ಹುದ್ದೆಯ ಬಗ್ಗೆ ಮಾತ್ರ ಮಾಹಿತಿಯನ್ನ ಒದಗಿಸಿದೆ. ಅರ್ಜಿಯ ಪ್ರಾರಂಭ, ಕೊನೆಯ ದಿನಾಂಕ ಮತ್ತು ಆಯ್ಕೆ ಪ್ರಕ್ರಿಯೆ ಸೇರಿದಂತೆ ಇತರ ಪ್ರಮುಖ ಮಾಹಿತಿಯನ್ನ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು.ಭಾರತೀಯ ಮಿಲಿಟರಿ ಸೇವೆಯಲ್ಲಿ (MES) ಮೇಲ್ವಿಚಾರಕ, ಡ್ರಾಫ್ಟ್ಸ್ಮನ್ ಮತ್ತು ಸ್ಟೋರ್ ಕೀಪರ್

ಹುದ್ದೆಗಳ ನೇಮಕಾತಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಹುದ್ದೆಗಳು ಮತ್ತು ಖಾಲಿ ಹುದ್ದೆಗಳ ವಿವರಗಳು ಈ ಕೆಳಗಿನಂತಿವೆ. ಮಿಲಿಟರಿ ಇಲಾಖೆಯು ಹುದ್ದೆ ನೇಮಕಾತಿಗೆ ಸಂಭಂದಿಸಿದಂತೆ ಅನೇಕ ಹುದ್ದೆಗಳನ್ನು ಭರ್ತಿ ಮಾಡುವ ಯೋಜನೆ ಹೊಂದಿದ್ದು ಅವುಗಳು ಹೀಗಿದೆ, ಆರ್ಕಿಟೆಕ್ಟ್ ಕೇಡರ್ ಗ್ರೂಪ್ 44, ಬ್ಯಾರಕ್ ಮತ್ತು ಸ್ಟೋರ್ ಆಫೀಸರ್ 120, ಮೇಲ್ವಿಚಾರಕ (ಬ್ಯಾರಕ್ & ಸ್ಟೋರ್) 534, ಡ್ರಾಫ್ಟ್ಸ್ಮನ್ 944, ಸ್ಟೋರ್ ಕೀಪರ್ 2026, ಮಲ್ಟಿ-ಟಾಸ್ಕಿಂಗ್ ಸಿಬ್ಬಂದಿ 11316, ಮೆಟ್: 27920, ಒಟ್ಟ : 41822 ಇದ್ದು 10  ನೇ ತರಗತಿ ಪಾಸಾದವರಿಗೆ ಬಂಪರ್ ಆಫರ್ ಎಂದೇ ಹೇಳಬಹುದು.

MES recruitment process
Image Credit: Nitmeghalaya

MES ನೇಮಕಾತಿ ಪ್ರಕ್ರಿಯೆ ಹೇಗಿರುತ್ತದೆ ?
ಮಿಲಿಟರಿ ಎಂಜಿನಿಯರಿಂಗ್ ಸೇವೆ ಹೊರಡಿಸಿದ ಕಿರು ಅಧಿಸೂಚನೆಯ ಪ್ರಕಾರ ನೇಮಕಾತಿ ಪ್ರಕ್ರಿಯೆ  ಲಿಖಿತ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ಸಂದರ್ಶನ ಮತ್ತು ದಾಖಲೆಗಳ ಪರಿಶೀಲನೆಯ ಮೂಲಕ ಅಭ್ಯರ್ಥಿಗಳನ್ನ ಆಯ್ಕೆ ಮಾಡಲಾಗುತ್ತದೆ.

Join Nadunudi News WhatsApp Group

MES ನೇಮಕಾತಿಗೆ ಬೇಕಾಗಿರುವ  ಅರ್ಹತೆಗಳಾವುವು ?
ನಾವು ಪ್ರಾರಂಭದಲ್ಲಿ ತಿಳಿಸಿದಂತೆ ಎಂಇಎಸ್ ಸೇರಲು 10/12ನೇ ತರಗತಿ ಉತ್ತೀರ್ಣರಾಗಿರಬೇಕು. ಹಾಗು ಅರ್ಹತೆಗೆ ಸಂಬಂಧಿಸಿದ ಇನ್ನು ಹೆಚ್ಚುವರಿ ಮಾಹಿತಿ ಪೂರ್ಣ ಅಧಿಸೂಚನೆಯಲ್ಲಿ ಲಭ್ಯವಿರುತ್ತದೆ.

MES Job Recruitment 2023
Image Credit: Curajrecruitment

ಉದ್ಯೋಗ ನೇಮಕಾತಿಗೆ  ಸಂಭಂದಿಸಿದ ಪರೀಕ್ಷೆಯನ್ನು ಯಾರು ನಡೆಸುತ್ತಾರೆ
ಉದ್ಯೋಗ ನೇಮಕಾತಿ ಪ್ರಕ್ರಿಯೆಯನ್ನ ಸ್ಟಾಫ್ ಸೆಲೆಕ್ಷನ್ ಕಮಿಷನ್ ಅಂದರೆ ಎಸ್‌ಎಸ್ಸಿ ಅಥವಾ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ನಡೆಸುತ್ತದೆ.ಮಿಲಿಟರಿ ಎಂಜಿನಿಯರಿಂಗ್ ಸೇವೆಯು ಭಾರತೀಯ ಸೇನೆಯ ಎಂಜಿನಿಯರ್ಸ್ ಕಾರ್ಪ್ಸ್’ ನ ಪ್ರಮುಖ ಭಾಗವಾಗಿರುತ್ತದೆ. ಇದು ಕಾರ್ಯತಂತ್ರದ ಮತ್ತು ಕಾರ್ಯಾಚರಣೆಯ ಮೂಲಸೌಕರ್ಯವನ್ನ ಒದಗಿಸುತ್ತದೆ.

ಇದು ಭಾರತದ ಅತಿದೊಡ್ಡ ನಿರ್ಮಾಣ ಮತ್ತು ನಿರ್ವಹಣಾ ಸಂಸ್ಥೆಗಳಲ್ಲಿ ಒಂದಾಗಿದ್ದು, ದೇಶದ ಅತ್ಯಂತ ಹಳೆಯ ರಕ್ಷಣಾ ಮೂಲಸೌಕರ್ಯ ಹಾಗು ಅಭಿವೃದ್ಧಿ ಸಂಸ್ಥೆಗಳಲ್ಲಿ ಒಂದಾಗಿದೆ. ಸೇನೆಯಲ್ಲಿ ಉದ್ಯೋಗ ಪಡೆದುಕೊಳ್ಳುವುದು ತುಂಬ ಕಷ್ಟದ ವಿಚಾರ. ಒಮ್ಮೆ ಸೇನೆಯಲ್ಲಿ ಹುದ್ದೆಗೆ ಸೇರಿಕೊಂಡರೆ ದೇಶಕ್ಕಾಗಿ ದುಡಿಯುತ್ತಿರುವುದಾಗಿ ಹೆಮ್ಮೆ ಆಗುತ್ತದೆ ಹಾಗಾಗಿ ಆಸಕ್ತಿ ಇದ್ದವರು ಹುದ್ದೆಯ ಬಗ್ಗೆ ಗಮನಹರಿಸಬಹುದು.

Join Nadunudi News WhatsApp Group