WhatsApp Ban: ಬ್ಯಾನ್ ಆಗಲಿದೆ ಇಂತಹ ಜನರ ವಾಟ್ಸಾಪ್ ಖಾತೆ, ನಿಮ್ಮ ವಾಟ್ಸಾಪ್ ಖಾತೆ ಕೂಡ ಇರಬಹುದು ಚೆಕ್ ಮಾಡಿ.
ಅಕ್ರಮ ಎನಿಸಿದ 72 ಲಕ್ಷ ವಾಟ್ಸಾಪ್ ಖಾತೆಯನ್ನು ನಿಷ್ಕ್ರಿಯ ಗೊಳಿಸಿದ ಮೆಟಾ.
WhatsApp Account Ban: ಮೊಬೈಲ್ ಬಳಸುವ ಎಲ್ಲಾ ಜನರು ಹೆಚ್ಚಾಗಿ ಬಳಸುವ ಅಪ್ಲಿಕೇಶನ್ ಎಂದರೆ ಅದು ವಾಟ್ಸಪ್ (WhatsApp) ಮಾತ್ರ. ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರ ತನಕ WhatsApp ಬಳಕೆ ಮಾಡುತ್ತಾರೆ ಎಂದರೆ ತಪ್ಪಾಗಲ್ಲ. ಸಂದೇಶವನ್ನ ಕಳುಹಿಸಲು, ಕರೆ ಮಾಡಲು ಮತ್ತು ವಿಡಿಯೋ ಕರೆ ಮಾಡಲು ಜನರು ಹೆಚ್ಚಾಗಿ ಬಳಸುವುದು ವಾಟ್ಸಾಪ್.
ಜನರಿಗೆ ಹಲವು ವರ್ಷಗಳಿಂದ ಬಹಳ ಒಳ್ಳೆಯ ಸೇವೆಯನ್ನ ಒದಗಿಸಿಕೊಂಡು ಬಂದಿರುವ WhatsApp ಈಗಾಗಲೇ ಹಲವು ಯೋಜನೆಗಳನ್ನ ಜಾರಿಗೆ ತರುವುದರ ಮೂಲಕ ಜನರ ವಿಶ್ವಾಸವನ್ನ ಗಳಿಸಿಕೊಂಡಿದೆ. ತಂತ್ರಜ್ಜಾನ ಮುಂದುವರೆದಂತೆ ಅದನ್ನ ದುರುಪಯೋಗ ಮಾಡಿಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಲೇ ಇರುತ್ತದೆ. ಕೆಲವು ಜನರು ವಾಟ್ಸಾಪ್ ಅನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದು ಅದಕ್ಕೆ ಕಡಿವಾಣ ಹಾಕುವ ಸಲುವಾಗಿ ಈಗ ವಾಟ್ಸಾಪ್ ಖಾತೆಯನ್ನ ನಿಷ್ಕ್ರಿಯ ಮಾಡಿದೆ.
ನಿಮ ಖಾತೆಯ ಬಗ್ಗೆ ಎಚ್ಚರ ಅಗತ್ಯ
WhatsApp ಖಾತೆಯಿಂದ ಆಗುವ ವಂಚನೆಯನ್ನು ತಪ್ಪಿಸುವ ಸಲುವಾಗಿ ವಾಟ್ಸಾಪ್ ಖಾತೆಗಳನ್ನು ಬ್ಯಾನ್ ಮಾಡಲಾಗುತ್ತದೆ. ಇದೀಗ ಮೆಟಾ ಮಾಲೀಕತ್ವದ ವಾಟ್ಸಾಪ್ ಐಟಿ ನಿಯಮಗಳಿಗೆ ಪೂರಕವಾಗಿ ಅಕ್ರಮ ಎನಿಸಿದ ಖಾತೆಗಳನ್ನು ನಿಷ್ಕ್ರಿಯಗೊಳಿಸಿದೆ. ಹಾಗಾಗಿ ನೀವು ನಿಮ್ಮ ಖಾತೆ ಐಟಿ ನಿಯಮಕ್ಕೆ ಪೂರಕವಾಗಿದೆಯೇ ಇಲ್ಲವೇ ಎಂಬುದನ್ನು ಚೆಕ್ ಮಾಡಿಕೊಳ್ಳುದು ಅಗತ್ಯವಾಗಿದೆ. ಇಲ್ಲವಾದರೆ ನಿಮ್ಮ ಖಾತೆಗಳು ಸಹ ನಿಷ್ಕ್ರಿಯವಾಗುದು ಖಚಿತ.
72 ಲಕ್ಷ ಖಾತೆ ಸ್ಥಗಿತ
ಭಾರತೀಯ ವಾಟ್ಸಾಪ್ ಖಾತೆಯನ್ನು +91 ಕೋಡ್ ಮೂಲಕ ಗುರುತಿಸಲಾಗುತ್ತದೆ. ಇದಕ್ಕೆ ವಿರುದ್ಧವಾದ ಕೋಡ್ ಗಳ ಖಾತೆಯನ್ನು ಬ್ಯಾನ್ ಮಾಡಲಾಗಿದೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ 71,11,000 ವಾಟ್ಸಾಪ್ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿದೆ.
ಬಳಕೆದಾರರಿಂದ ಯಾವುದೇ ವರದಿ ಬರುವ ಮುನ್ನವೇ 25,71,000 ಖಾತೆಗಳನ್ನು ಪೂರ್ವಭಾವಿಯಾಗಿ ನಿಷೇಧ ಮಾಡಲಾಗಿದೆ. ಸೆಪ್ಟೆಂಬರ್ನಲ್ಲಿ ಅಕೌಂಟ್ ಸಪೂರ್ಟ್ 1031, ನಿಷೇಧ ಮೇಲ್ಮನವಿ 7396, ಇತರ ಸಪೋರ್ಟ್ 1518, ಪ್ರಾಡಕ್ಟ್ ಸಪೋರ್ಟ್ 370 ಮತ್ತು ಸುರಕ್ಷತೆ 127 ಸೇರಿದಂತೆ 10,442 ಬಳಕೆದಾರರ ವರದಿಗಳನ್ನು ವಾಟ್ಸಾಪ್ ಸ್ವೀಕರಿಸಿದೆ.
ಇನ್ಸ್ಟಾಗ್ರಾಮ್ ಸರ್ವರ್ ಬಂದ್
ಹೌದು ಗುರುವಾರ ಸಂಜೆ ವಿಶ್ವದಾದ್ಯಂತ ಇನ್ಸ್ಟಾಗ್ರಾಮ್ ಬಳಕೆದಾರರು ಸರ್ವರ್ ಸಮಸ್ಯೆಯನ್ನು ಎದುರಿಸಿದ್ದಾರೆ. ಸಂಜೆ 7 ಗಂಟೆಯಿಂದ ಆರಂಭವಾದ ಈ ಸಮಸ್ಯೆಗೆ ಬಳಕೆದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶ್ವದಾದ್ಯಂತ ಸಾವಿರಾರು ಬಳಕೆದಾರರು ಮತ್ತು ಭಾರತದಲ್ಲಿ 150 ಕ್ಕೂ ಹೆಚ್ಚು ಬಳಕೆದಾರರು ಸಮಸ್ಯೆ ಅನ್ನು ಎದುರಿಸಿದ್ದಾರೆ ಎಂದು ವರದಿ ಆಗಿದೆ. ಇನ್ಸ್ಟಾಗ್ರಾಮ್ ಬಳಕೆದಾರರು ಎಕ್ಸ್ ನಲ್ಲಿ ಸಮಸ್ಯೆ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.