MG Car: 570 Km ಮೈಲೇಜ್ ಕೊಡುವ ಈ ಕಾರಿಗೆ ಸಕತ್ ಡಿಮ್ಯಾಂಡ್, ಒಂದೇ ದಿನದಲ್ಲಿ ಲಕ್ಷಕ್ಕೂ ಅಧಿಕ ಬುಕಿಂಗ್.
ಇನ್ನೊಂದು ಹೊಸ ಮಾದರಿಯ ಕಾರ್ ಅನ್ನು ಕಡಿಮೆ ಬೆಲೆಗೆ ಬಿಡುಗಡೆ ಮಾಡಿದ MG
MG Cyberster Electric Car: ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ (Electric Vehicle) ಮೇಲಿನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಹೊಸ ಹೊಸ ರೀತಿಯ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡುತ್ತಿದೆ.
ಇದೀಗ ಎಂಜಿ ಮೋಟಾರ್ (MG Motors) ಕಂಪನಿಯು ಹೊಸ ಮಾದರಿಯ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆ ಮಾಡಿದೆ. ಹಳೆಯ ಮಾದರಿಯ ಕಾರ್ ಗಿಂತ ಈ ಎಂಜಿ ಮೋಟಾರ್ ಕಂಪನಿಯ ಎಲೆಕ್ಟ್ರಿಕ್ ಕಾರ್ ನಲ್ಲಿ ನೂತನ ಸುಧಾರಿತ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ.
ಎಂಜಿ ಸೈಬರ್ ಸ್ಟರ್ ಎಲೆಕ್ಟ್ರಿಕ್ ಕಾರ್ (MG Cyberster Electric Car)
ಮಾರುಕಟ್ಟೆಯಲ್ಲಿ ಇದೀಗ ಎಂಜಿ ಕಂಪನಿಯ ಸೈಬರ್ ಸ್ಟರ್ ಎಲೆಕ್ಟ್ರಿಕ್ ಕಾರ್ ಬಾರಿ ಸಂಚಲನ ಮೂಡಿಸಲಿದೆ. ಈ ನೂತನ ಮಾದರಿಯ ಸೈಬರ್ ಸ್ಟರ್ ಎಲೆಕ್ಟ್ರಿಕ್ ಕಾರ್ ಡ್ಯುಯಲ್ ಬ್ಯಾಟರಿ ಪ್ಯಾಕ್ ಅಪ್ ನಲ್ಲಿ ಬರಲಿದೆ. ಮುಂದಿನ ವರ್ಷದಲ್ಲಿ ಈ ಕಾರ್ ಮಾರಾಟ ಪ್ರಾರಂಭವಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಕಂಪನಿಯು ಈ ಹೊಚ್ಚ ಹೊಸ ಸೈಬರ್ ಸ್ಟರ್ ಎಲೆಕ್ಟ್ರಿಕ್ ಕಾರ್ ನ ಫೀಚರ್ ಬಗ್ಗೆ ಮಾಹಿತಿ ಬಹಿರಂಗಪಡಿಸಿದೆ.
ಒಂದೇ ಚಾರ್ಜ್ ನಲ್ಲಿ ಬರೋಬ್ಬರಿ 570 ಕಿಲೋಮೀಟರ್ ರೇಂಜ್
ಈ ಎಲೆಕ್ಟ್ರಿಕ್ ಮಾದರಿಯಲ್ಲಿ ಅಳವಡಿಸಲಾದ ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್ ಎಲ್ಲಾ ಚಾಕೆಯಾಗಳಿಗೂ ಶಕ್ತಿ ನೀಡಲಿದೆ. ಈ ಸೆಟಪ್ ನಲ್ಲಿ 528 bhp ಗರಿಷ್ಟ ಪವರ್ ಮತ್ತು 725 ಗರಿಷ್ಟ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಕಾರ್ 3.2 ಸೆಕೆಂಡುಗಳಲ್ಲಿ 0 ರಿಂದ 100 ಕಿಲೋಮೀಟರ್ ಗಳಷ್ಟು ತನ್ನ ವೇಗವನ್ನು ಹೆಚ್ಚಿಸಿಕೊಳ್ಳುತ್ತದೆ. ಇನ್ನು ಈ ಕಾರ್ ಅನ್ನು ವೇಗದ ಚಾರ್ಜಿಂಗ್ ನ ಮೂಲಕ ಕೇವಲ 3 ಗಂಟೆಗಳಲ್ಲಿ ಚಾರ್ಜ್ ಮಾಡಿಕೊಳ್ಳಬಹುದಾಗಿದೆ.
ಈ ನೂತನ ಎಂಜಿ ಸೈಬರ್ ಸ್ಟರ್ ಎಲೆಕ್ಟ್ರಿಕ್ ಕಾರ್ ನಲ್ಲಿ 77 kwh ಲಿಥಿಯಂ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಿದ್ದು, ಈ ಕಾರ್ ಒಂದೇ ಚಾರ್ಜ್ ನಲ್ಲಿ ಬರೋಬ್ಬರಿ 570 ಕಿಲೋಮೀಟರ್ ರೇಂಜ್ ನೀಡಲಿದೆ. ಈ ನೂತನ ಮಾದರಿಯ ಎಂಜಿ ಸೈಬರ್ ಸ್ಟರ್ ಎಲೆಕ್ಟ್ರಿಕ್ ಕಾರ್ ಮಾರುಕಟ್ಟೆಯಲ್ಲಿ 55 ಲಕ್ಷ ಬೆಲೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಅತಿ ಹೆಚ್ಚಿನ ಮೈಲೇಜ್ ನೀಡುವ ಈ ಎಂಜಿ ಸೈಬರ್ ಸ್ಟರ್ ಎಲೆಕ್ಟ್ರಿಕ್ ಕಾರ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಇನ್ನಿತರ ಕಾರ್ ಗಳಿಗೆ ಬಾರಿ ಪೈಪೋಟಿ ನೀಡಲಿದೆ. ಸಧ್ಯದಲೇ ಈ ಎಲೆಕ್ಟ್ರಿಕ್ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.