MG ZS EV: ದೇಶದ ಮೊದಲ ಇಂಟರ್ನೆಟ್ SUV MG ZS EV ಕಾರು ಬಿಡುಗಡೆ, 461 ಕೀ ಮೀ ಮೈಲೇಜ್.
MG ಮೋಟಾರ್ ಇಂಡಿಯಾ ಇಂದು ಹೊಸ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.
MG ZS EV Car: ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಕಾರುಗಳು ಬಿಡುಗಡೆಯಾಗಿ ಛಾಪು ಮೂಡಿಸುತ್ತಿವೆ. ಹೊಸ ಹೊಸ ರೀತಿಯ ಕಾರುಗಳು ಬಿಡುಗಡೆಯಾಗುವ ಮೂಲಕ ಜನಪ್ರಿಯತೆ ಪಡೆಯುತ್ತಿದೆ. ಇದೀಗ MG ಮೋಟಾರ್ ಇಂಡಿಯಾ ಇಂದು ಹೊಸ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.
MG ZS EV ಕಾರಿನ ಬೆಲೆ
MG ಮೋಟಾರ್ ಇಂಡಿಯಾ ಇಂದು ಹೊಸದಾಗಿ ಅಭಿವೃದ್ಧಿಪಡಿಸಿದ ZS EV ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ ಲೆವೆಲ್ 2 ಜೋಡಣೆಯೊಂದಿಗೆ ಬಿಡುಗಡೆ ಮಾಡಿದೆ.
ಇನ್ನು ಕಾರಿನ ಎಕ್ಸ್ ಶೋ ರೂಮ್ ಬೆಲೆ 27.89 ಲಕ್ಷ ರೂಪಾಯಿ ಆಗಿದೆ. ಈ ಹೊಸ ಕಾರು ವಿವಿಧ ಚಾಲನಾ ಪರಿಸ್ಥಿತಿಗಳಲ್ಲಿ ಸಹಾಯ, ನಿಯಂತ್ರಣ ಮತ್ತು ಸೌಕರ್ಯಯುತ ಪ್ರಯಾಣಕ್ಕೆ ಈ ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ ತುಂಬಾ ಸಹಕಾರಿಯಾಗಲಿದೆ. MG ZS EV ಇಂಟರ್ನೆಟ್ ಸಂಪರ್ಕ ಮತ್ತು ಸ್ವಾಯುತ್ತ ಸಾಮರ್ಥ್ಯಗಳನ್ನು ಸೇಜಿಸುವ ಮೂಲಕ ವಿದ್ಯುತ್ ಚಲನಶೀಲತೆಯ ವಿಕಾಸವನ್ನು ಪ್ರತಿನಿಧಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
MG ZS EV ಕಾರಿನ ವಿಶೇಷತೆ
MG ZS EV ಯ ADAS ಲೆವೆಲ್ 2 ತಂತ್ರಜ್ಞವೂ ಕಡಿಮೆ ಮಾಧ್ಯಮ ಮತ್ತು ಹೆಚ್ಚಿನ ಎಂಬ ಮೂರೂ ಹಂತದ ಸೂಕ್ಷ್ಮತೆಯ ಮೇಲೆ ಕಾರ್ಯನಿರ್ವಹಿಸುತ್ತದೆ. ಹಾಗೆಯೇ ಮೂರೂ ಹಂತದ ಎಚ್ಚರಿಕೆಯ ಹ್ಯಾಪ್ಟಿಕ್, ಆಡಿಯೋ ಮತ್ತು ದೃಶ್ಯ ವೈಶಿಷ್ಟ್ಯಗಳು ಪ್ರಯಾಣಿಕರ ಚಾಲನಾ ಅನುಭವ ಮತ್ತು ಸ್ರಾಕ್ಷತೆಯನ್ನು ಸುಧಾರಿಸಲು ಪ್ರಮುಖ ಪಾತ್ರ ವಹಿಸುವುದಾಗಿ ಕಂಪನಿ ಹೇಳಿದೆ.
MG ZS EV ಕಾರು 50 .3 kW ಸುಧಾರಿತ ಪ್ರಿಸ್ಮಾಟಿಕ್ ಬ್ಯಾಟರಿಯೊಂದಿಗೆ ಸಿಂಗಲ್ ಚಾರ್ಜ್ ನಲ್ಲಿ 461 ಕಿ. ಮೀ ರೇಂಜ್ ನೀಡುವುದಾಗಿ ಕಂಪನಿ ತಿಳಿಸಿದೆ. 8 ವರ್ಷಗಳ ಬ್ಯಾಟರಿ ವಾರಂಟಿಯೊಂದಿಗೆ ಬರುತ್ತದೆ. ಅಲ್ಲದೆ ZS EV ಕೇವಲ 60 ಪೈಸೆಗೆ ಒಂದು ಕಿ ಮೀ ಚಾಲನೆಯ ವೆಚ್ಚದೊಂದಿಗೆ ಪೆಟ್ರೋಲ್ ಚಾಲಿತ ವಾಹನಗಳಂತಲ್ಲದೆ ಇಂಧನ ವೆಚ್ಚವನ್ನು ಗಣನೀಯವಾಗಿ ಉಳಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.