MG ZS EV: 1 Km ಪ್ರಯಾಣಿಸಲು ಕೇವಲ 60 ಪೈಸೆ ಖರ್ಚು, 460 Km ಮೈಲೇಜ್ ಕೊಡುವ MG ಕಾರಿನ ಮೇಲೆ 2 ಲಕ್ಷ ಡಿಸ್ಕೌಂಟ್.

MG Motor ಇದೀಗ ತನ್ನ ಜನಪ್ರಿಯ ZS EV ಬೆಲೆಯಲ್ಲಿ ಭರ್ಜರಿ ಇಳಿಕೆ ಮಾಡಿದೆ.

MG ZS EV Price Down: ಭಾರತೀಯ ಆಟೋ ವಲಯದಲ್ಲಿ ವಿವಿಧ ಪ್ರತಿಷ್ಠಿತ ಕಂಪನಿಗಳ ಕಾರ್ ಗಳು ಹೆಚ್ಚಿನ ಸೇಲ್ ಕಾಣುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಈಗಾಗಲೇ MG Motor ಕಂಪನಿ ತನ್ನ ಪೆಟ್ರೋಲ್ ಹಾಗೂ ಎಲೆಕ್ಟ್ರಿಕ್ ರೂಪಾಂತರದ ಕಾರ್ ಗಳನ್ನೂ ಪರಿಚಯಿಸಿವೆ. ಈಗಾಗಲೇ ಮಾರುಕ್ತತೆಯಲ್ಲಿ MG Motor ಕಂಪನಿಯು ತನ್ನ ಜನಪ್ರಿಯ ZS EV ಯನ್ನು ಪರಿಚಯಿಸಿದೆ.

ಪ್ರೀಮಿಯಂ ವಿಭಾಗದಲ್ಲಿ ಈ EV ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ. ಸದ್ಯ MG Motor ಇದೀಗ ತನ್ನ ಜನಪ್ರಿಯ ZS EV ಬೆಲೆಯಲ್ಲಿ ಭರ್ಜರಿ ಇಳಿಕೆ ಮಾಡಿದೆ. ZS EV ಖರೀದಿಗೆ ಕಂಪನಿಯು ಬಂಪರ್ ಆಫರ್ ಅನ್ನು ನೀಡಿದೆ. ಹೆಚ್ಚಿನ ಮೈಲೇಜ್ ನೀಡುವ ಈ ಕಾರ್ ನ ಬೆಲೆಯಲ್ಲಿ ಎಷ್ಟು ಇಳಿಕೆಯಾಗಿದೆ….? ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

MG ZS EV Price Down
Image Credit: Autocarindia

MG ZS EV ಕಾರಿನ ಬೆಲೆ
MG ಮೋಟಾರ್ ಇಂಡಿಯಾ ಹೊಸದಾಗಿ ಅಭಿವೃದ್ಧಿಪಡಿಸಿದ ZS EV ಯಲ್ಲಿ ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ ಲೆವೆಲ್ 2 ಜೋಡಣೆಯೊಂದಿಗೆ ಬಿಡುಗಡೆ ಮಾಡಿದೆ. ಈ ಹೊಸ ಕಾರು ವಿವಿಧ ಚಾಲನಾ ಪರಿಸ್ಥಿತಿಗಳಲ್ಲಿ ಸಹಾಯ, ನಿಯಂತ್ರಣ ಮತ್ತು ಸೌಕರ್ಯಯುತ ಪ್ರಯಾಣಕ್ಕೆ ಈ ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ ತುಂಬಾ ಸಹಕಾರಿಯಾಗಲಿದೆ. MG ZS EV ಇಂಟರ್ನೆಟ್ ಸಂಪರ್ಕ ಮತ್ತು ಸ್ವಾಯುತ್ತ ಸಾಮರ್ಥ್ಯಗಳನ್ನು ಸೇಜಿಸುವ ಮೂಲಕ ವಿದ್ಯುತ್ ಚಲನಶೀಲತೆಯ ವಿಕಾಸವನ್ನು ಪ್ರತಿನಿಧಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

MG ZS EV ಯ ADAS ಲೆವೆಲ್ 2 ತಂತ್ರಜ್ಞವೂ ಕಡಿಮೆ ಮಾಧ್ಯಮ ಮತ್ತು ಹೆಚ್ಚಿನ ಎಂಬ ಮೂರೂ ಹಂತದ ಸೂಕ್ಷ್ಮತೆಯ ಮೇಲೆ ಕಾರ್ಯನಿರ್ವಹಿಸುತ್ತದೆ. ಹಾಗೆಯೇ ಮೂರೂ ಹಂತದ ಎಚ್ಚರಿಕೆಯ ಹ್ಯಾಪ್ಟಿಕ್, ಆಡಿಯೋ ಮತ್ತು ದೃಶ್ಯ ವೈಶಿಷ್ಟ್ಯಗಳು ಪ್ರಯಾಣಿಕರ ಚಾಲನಾ ಅನುಭವ ಮತ್ತು ಸ್ರಾಕ್ಷತೆಯನ್ನು ಸುಧಾರಿಸಲು ಪ್ರಮುಖ ಪಾತ್ರ ವಹಿಸುವುದಾಗಿ ಕಂಪನಿ ಹೇಳಿದೆ.

MG ZS EV Car Mileage
Image Credit: Indiatoday

MG ZS EV ಕಾರಿನ ಮೈಲೇಜ್ ಎಷ್ಟಿದೆ ಗೊತ್ತಾ..?
MG ZS EV ಕಾರು 50.3 kW ಸುಧಾರಿತ ಪ್ರಿಸ್ಮಾಟಿಕ್ ಬ್ಯಾಟರಿಯೊಂದಿಗೆ ಸಿಂಗಲ್ ಚಾರ್ಜ್ ನಲ್ಲಿ 461 ಕಿ. ಮೀ ರೇಂಜ್ ನೀಡುವುದಾಗಿ ಕಂಪನಿ ತಿಳಿಸಿದೆ. 8 ವರ್ಷಗಳ ಬ್ಯಾಟರಿ ವಾರಂಟಿಯೊಂದಿಗೆ ಬರುತ್ತದೆ. ಅಲ್ಲದೆ ZS EV ಕೇವಲ 60 ಪೈಸೆಗೆ ಒಂದು ಕಿ ಮೀ ಚಾಲನೆಯ ವೆಚ್ಚದೊಂದಿಗೆ ಇಂಧನ ವೆಚ್ಚವನ್ನು ಈ EV ಉಳಿಸಲಿದೆ. 10.1 inch touch screen infotainment system, wireless charger, 7 inch digital instrument cluster, 6 airbags, ABS with EBD, electronic stability control, hill descent control ವೈಶಿಷ್ಟ್ಯವನ್ನು ಈ EV ಯಲ್ಲಿ ನೋಡಬಹುದಾಗಿದೆ.

Join Nadunudi News WhatsApp Group

MG ZS EV ಕಾರ್ ಬೆಲೆಯಲ್ಲಿ ಭರ್ಜರಿ ಇಳಿಕೆ
ಇನ್ನು ಕಾರಿನ ಎಕ್ಸ್ ಶೋ ರೂಮ್ ಬೆಲೆ 22 .88 ರಿಂದ 25 .90 ಲಕ್ಷ ಬೆಲೆಯನ್ನು ನಿಗದಿಪಡಿಸಲ್ಗಿದೆ. ಸದ್ಯ ಕಂಪನಿಯು ಈ ಕಾರ್ ನ ಬೆಲೆಯಲ್ಲಿ 50 ಸಾವಿರದಿಂದ ಬರೋಬ್ಬರಿ 2 .30 ಲಕ್ಷದ ತನಕ ಇಳಿಕೆ ಮಾಡುವುದಾಗಿ ಕಂಪನಿ ಘೋಷಿಸಿದೆ. ಸದ್ಯ ಎಕ್ಸೈಟ್ ವೆರಿಯಂಟ್ ಬೆಲೆ ರೂ. 23.38 ಲಕ್ಷದಿಂದ ರೂ.22.80 ಲಕ್ಷದ ವರೆಗೆ ಮತ್ತು ವಿಶೇಷ ರೂಪಾಂತರದ ಬೆಲೆಯನ್ನು ರೂ. 27.30 ಲಕ್ಷದಿಂದ ರೂ. 25 ಲಕ್ಷ ಕಡಿತಗೊಳಿಸಲಾಗಿದೆ. ಅಲ್ಲದೆ, ವಿಶೇಷವಾದ ಪ್ರೊ ರೂಪಾಂತರದ ಬೆಲೆ ರೂ. 27.90 ಲಕ್ಷ ರೂ. 25.90 ಲಕ್ಷಕ್ಕೆ ಇಳಿಕೆ ಮಾಡಲಾಗಿದೆ.

Join Nadunudi News WhatsApp Group