MGNREGA Poultry Shed Subsidy Karnataka: ಗ್ರಾಮೀಣ ಭಾಗದ ರೈತರಿಗೆ ಕೃಷಿ ಒಂದೇ ಆದಾಯದ ಮೂಲವಾಗಬಾರದು ಎಂಬ ದೃಷ್ಟಿಯಿಂದ ಸರ್ಕಾರವು ಉಪ ಕಸುಬುಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ನೀವು ನಿಮ್ಮ ಜಮೀನಿನಲ್ಲಿ ಸಣ್ಣ ಮಟ್ಟದ ಕೋಳಿ ಸಾಕಾಣಿಕೆ ಆರಂಭಿಸಲು ಹಣದ ಕೊರತೆ ಎದುರಿಸುತ್ತಿದ್ದೀರಾ? ಹಾಗಿದ್ದರೆ ನಿಮಗೊಂದು ಸಿಹಿ ಸುದ್ದಿ ಇದೆ. ನಿಮ್ಮ ಸ್ವಂತ ಊರಿನ ಗ್ರಾಮ ಪಂಚಾಯಿತಿಯಲ್ಲೇ ಕುಳಿತು ಬರೋಬ್ಬರಿ ₹60,000 ಹಣವನ್ನು ಉಚಿತವಾಗಿ ಪಡೆಯುವ ಅವಕಾಶವೊಂದು ನಿಮಗಾಗಿ ಕಾಯುತ್ತಿದೆ!
ಏನಿದು ನರೇಗಾ ಕೋಳಿ ಶೆಡ್ ಯೋಜನೆ?
ಯಾರು ಅರ್ಹರು? (Eligibility Criteria)
- ಅರ್ಜಿದಾರರು ಕರ್ನಾಟಕದ ಗ್ರಾಮೀಣ ಭಾಗದ ನಿವಾಸಿಯಾಗಿರಬೇಕು.
- ಕುಟುಂಬದ ಹೆಸರಿನಲ್ಲಿ ಬಿಪಿಎಲ್ (BPL) ಕಾರ್ಡ್ ಇರುವುದು ಕಡ್ಡಾಯ.
- ಅರ್ಜಿದಾರರ ಬಳಿಕ ನರೇಗಾ ಜಾಬ್ ಕಾರ್ಡ್ (Job Card) ಇರಲೇಬೇಕು.
- ಶೆಡ್ ನಿರ್ಮಾಣಕ್ಕೆ ಬೇಕಾದ ಕನಿಷ್ಠ ಜಾಗ ಅಥವಾ ಸ್ವಂತ ಜಮೀನು ಇರಬೇಕು.
| ವಿವರ | ಮಾಹಿತಿ |
|---|---|
| ಒಟ್ಟು ಸಹಾಯಧನ | ₹ 60,000/- |
| ಅರ್ಜಿ ಸಲ್ಲಿಸುವ ಸ್ಥಳ | ಸ್ಥಳೀಯ ಗ್ರಾಮ ಪಂಚಾಯಿತಿ |
| ಅಗತ್ಯ ದಾಖಲೆ | ಜಾಬ್ ಕಾರ್ಡ್, ಆಧಾರ್, ಬ್ಯಾಂಕ್ ಪಾಸ್ಬುಕ್ |
| ನಿರ್ಮಾಣದ ವಿಧ | ವೈಯಕ್ತಿಕ ಕಾಮಗಾರಿ |
ಅರ್ಜಿ ಸಲ್ಲಿಸುವ ಹಂತ ಹಂತದ ಪ್ರಕ್ರಿಯೆ
- ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ: ಮೊದಲು ನಿಮ್ಮೂರಿನ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ಅಲ್ಲಿನ ‘ಗ್ರಾಮ ಕಾಯಕ ಮಿತ್ರ’ ಅಥವಾ PDO ಅವರನ್ನು ಭೇಟಿ ಮಾಡಿ.
- ಕ್ರಿಯಾ ಯೋಜನೆ (Action Plan): ನಿಮ್ಮ ಹೆಸರು ಮುಂದಿನ ವರ್ಷದ ಕ್ರಿಯಾ ಯೋಜನೆಯಲ್ಲಿ ಸೇರ್ಪಡೆಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಕ್ರಿಯಾ ಯೋಜನೆಯಲ್ಲಿ ಹೆಸರಿದ್ದರೆ ಮಾತ್ರ ಹಣ ಬಿಡುಗಡೆಯಾಗುತ್ತದೆ.
- ದಾಖಲೆಗಳ ಸಲ್ಲಿಕೆ: ನಿಗದಿತ ಅರ್ಜಿ ನಮೂನೆಯೊಂದಿಗೆ ಜಾಬ್ ಕಾರ್ಡ್ ಪ್ರತಿ, ಆಧಾರ್ ಕಾರ್ಡ್, ಮತ್ತು ಜಾಗದ ದಾಖಲೆಗಳನ್ನು ಸಲ್ಲಿಸಿ.
- ಪಶು ವೈದ್ಯಾಧಿಕಾರಿಯ ದೃಢೀಕರಣ: ಕೆಲವು ಸಂದರ್ಭಗಳಲ್ಲಿ ಸ್ಥಳೀಯ ಸರ್ಕಾರಿ ಪಶು ವೈದ್ಯಾಧಿಕಾರಿಗಳಿಂದ “ಇಲ್ಲಿ ಕೋಳಿ ಸಾಕಾಣಿಕೆ ಮಾಡಲು ಪೂರಕ ವಾತಾವರಣವಿದೆ” ಎಂಬ ದೃಢೀಕರಣ ಪತ್ರ ಬೇಕಾಗಬಹುದು.
ಹಣ ಹೇಗೆ ಬಿಡುಗಡೆಯಾಗುತ್ತದೆ?
- ಕೂಲಿ ವೆಚ್ಚ: ಶೆಡ್ ಕಟ್ಟಲು ನೀವು ಕೆಲಸಗಾರರನ್ನು ಬಳಸಿ ಅಥವಾ ನೀವೇ ಕೆಲಸ ಮಾಡಿದಾಗ, ಆ ದಿನಗಳ ಕೂಲಿ ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗುತ್ತದೆ.
- ಸಾಮಗ್ರಿ ವೆಚ್ಚ: ಶೀಟ್, ಜಾಲರಿ ಮತ್ತು ಕಂಬಗಳ ಖರೀದಿಯ ಬಿಲ್ ನೀಡಿದ ನಂತರ ಆ ಮೊತ್ತವನ್ನು ಸರ್ಕಾರ ಪಾವತಿಸುತ್ತದೆ.
ಗಮನಿಸಿ: ಕಾಮಗಾರಿ ಪ್ರಾರಂಭಿಸುವ ಮೊದಲು, ಮಧ್ಯದಲ್ಲಿ ಮತ್ತು ಪೂರ್ಣಗೊಂಡ ನಂತರ “NMMS App” ಮೂಲಕ ಫೋಟೋ ತೆಗೆದು ಅಪ್ಲೋಡ್ ಮಾಡುವುದು ಕಡ್ಡಾಯ. ಇಲ್ಲದಿದ್ದರೆ ಹಣ ಸ್ಥಗಿತಗೊಳ್ಳಬಹುದು.

