ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಇತರೆ ದೇಶಗಳಿಗೆ ಹೋಲಿಕೆ ಮಾಡಿದರೆ ಕೆಲವು ವಸ್ತುಗಳ ಬೆಲೆ ಕಡಿಮೆ ಎಂದು ಹೇಳಬಹುದು. ಹೌದು ನಮ್ಮ ದೇಶದಲ್ಲಿ ಹಾಲನ್ನ ಹೇರಳ ಪ್ರಮಾಣದಲ್ಲಿ ಉತ್ಪಾದನೆ ಮಾಡಲಾಗುತ್ತದೆ ಮತ್ತು ಇನ್ನೂ ಹೆಚ್ಚಾಗಿ ಹೇಳಬೇಕು ಅಂದರೆ ಪ್ರತಿಯೊಬ್ಬ ರೈತನ ಮನೆಯಲ್ಲಿ ಹಾಲು ಉತ್ಪಾದನೆ ಮಾಡಲಾಗುತ್ತದೆ ಎಂದು ಹೇಳಬಹುದು. ಗೋಮಾತೆಯನ್ನ ಪೂಜಿಸುವ ದೇಶ ನಮ್ಮದು ಮತ್ತು ಗೋವುಗಳು ನಮಗೆ ಹೇರಳ ಪ್ರಮಾಣದಲ್ಲಿ ಹಾಲನ್ನ ಕೊಡುತ್ತದೆ ಎಂದು ಹೇಳಬಹುದು. ಇನ್ನು ಪಾಕಿಸ್ತಾನ ದೇಶ ಸದ್ಯ ದಿನಗಳಲ್ಲಿ ಬಹಳ ಆರ್ಥಿಕ ನಷ್ಟವನ್ನ ಅನುಭವಿಸುತ್ತಿದೆ ಮತ್ತು ಅಲ್ಲಿನ ಜನರು ಬಹಳ ಕಷ್ಟದಲ್ಲಿ ಜೀವನವನ್ನ ಮಾಡುತ್ತಿದ್ದಾರೆ.
ಸದ್ಯ ಪಾಕಿಸ್ತಾನದಲ್ಲಿ ಹಣದುಬ್ಬರದ ಸಮಸ್ಯೆ ಉಂಟಾಗಿದ್ದು ಅಲ್ಲಿ ಜನರು ಪ್ರತ್ನಿತ್ಯ ಬಳಸುವ ವಸ್ತುಗಳ ಬೆಲೆ ಬಹಳ ಜಾಸ್ತಿಯಾಗಿದೆ ಎಂದು ಹೇಳಬಹುದು. ನಮ್ಮ ದೇಶದಲ್ಲಿ ಒಂದು ಲೀಟರ್ ಶುದ್ಧ ಹಸುವಿನ ಹಾಲಿನ ಬೆಲೆ 44 ರೂಪಾಯಿ ಆಗಿದೆ, ಆದರೆ ಪಾಕಿಸ್ತಾನದಲ್ಲಿ ಒಂದು ಲೀಟರ್ ಹಾಲಿನ ಬೆಲೆಯನ್ನ ಕೇಳಿದರೆ ನಿಮ್ಮ ತಲೆ ತಿರುಗುತ್ತದೆ ಎಂದು ಹೇಳಬಹುದು. ಹಾಗಾದರೆ ಪಾಕಿಸ್ತಾನದಲ್ಲಿ ಒಂದು ಲೀಟರ್ ಹಾಲಿನ ಬೆಲೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ಹೌದು ಸ್ನೇಹಿತರೆ ಪಾಕಿಸ್ತಾನದಲ್ಲಿ ಹಣದುಬ್ಬರದ ಸಮಸ್ಯೆ ಉಂಟಾಗಿದ್ದು ಸದ್ಯ ಅಲ್ಲಿ ಪ್ರತಿಯೊಂದು ವಸ್ತುವಿನ ಬೆಲೆ ಗಗನಕ್ಕೆ ಏರಿದೆ ಎಂದು ಹೇಳಬಹುದು. ಕುಡಿಯುವ ನೀರಿನಿಂದ ಹಿಡಿದು ಪ್ರತಿಯೊಬ್ಬನದು ವಸ್ತುವಿನ ಬೆಲೆ ಬಹಳ ಏರಿಕೆ ಆಗಿದೆ. ಸದ್ಯ ಪಾಕಿಸ್ತಾನದಲ್ಲಿ ಹಾಲಿನ ಬೆಲೆ ಬಹಳ ಜಾಸ್ತಿ ಆಗಿದ್ದು ಒಂದು ಲೀಟರ್ ಹಾಲಿನ ಬೆಲೆ ಬರೋಬ್ಬರಿ 130 ರೂಪಾಯಿ ಆಗಿದೆ ಎಂದು ಹೇಳಬಹುದು. ನಮ್ಮ ದೇಶಕ್ಕೆ ಹೋಲಿಕೆ ಮಾಡಿದರೆ ಪಾಕಿಸ್ತಾನದಲ್ಲಿ ಹಾಲಿನ ಬೆಲೆ ಮೂರುಪಟ್ಟು ಜಾಸ್ತಿಯಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ.
ಹಾಲು ಮಾತ್ರವಲ್ಲದೆ ಸಕ್ಕರೆ, ಸಿಲಿಂಡರ್, ಚಹಾ ಮತ್ತು ಕಾಫಿ ಪುಡಿ ಹಾಗೆ ಬಹುತೇಕ ಜನರು ಪ್ರತಿನಿತ್ಯ ಬಳಕೆ ಮಾಡುವ ಪ್ರತಿಯೊಂದು ವಸ್ತುವಿನ ಬೆಲೆ ಗಗನಕ್ಕೆ ಏರಿದೆ. ಹಾಲು, ಸಕ್ಕರೆ ಮತ್ತು ಸಿಲಿಂಡರ್ ಬೆಲೆ ಏರಿಕೆ ಆದಕಾರಣ ಪಾಕಿಸ್ತಾನದಲ್ಲಿ ಒಂದು ಕಪ್ ಚಹಾದ ಬೆಲೆ ಬರೋಬ್ಬರಿ 50 ರೂಪಾಯಿ ಆಗಿದೆ. ಸದ್ಯ ಅಲ್ಲಿನ ಜನರು ಬಹಳ ಆರ್ಥಿಕ ಸಮಸ್ಯೆಯನ್ನ ಅನುಭವಿಸುತ್ತಿದ್ದು ಸರ್ಕಾರಕ್ಕೆ ಜನರು ಶಾಪವನ್ನ ಹಾಕುತ್ತಿದ್ದಾರೆ. ಪಾಕಿಸ್ತಾನದ ದೇಶ ಸದ್ಯ ಹಣದುಬ್ಬರದ ಸಮಸ್ಯೆಯನ್ನ ಅನುಭವಿಸುತ್ತಿದ್ದು ದೇಶ ಸಾಲದಲ್ಲಿ ಮುಳುಗಿದೆ ಎಂದು ಹೇಳಿರೆ ತಪ್ಪಾಗಲ್ಲ. ಸ್ನೇಹಿತರೆ ಪಾಕಿಸ್ತಾನದಲ್ಲಿನ ಹಾಲಿನ ಬೆಲೆಯ ಬಗ್ಗೆ ಅಭಿಪ್ರಾಯ ಹೇಳಿ.