Bank Minimum Balance: ಬ್ಯಾಂಕ್ ಖಾತೆ ಇದ್ದವರಿಗೆ ಮಹತ್ವದ ಮಾಹಿತಿ, ಎಚ್ಚರ ತಪ್ಪಿದರೆ ಕಟ್ಟಬೇಕು ದಂಡ.
Minimum Balance In Bank Account : ಸಾಮಾನ್ಯವಾಗಿ ಎಲ್ಲರು ವಿವಿಧ ಬ್ಯಾಂಕ್ ಗಳಲ್ಲಿ ಖಾತೆಗಳನ್ನು ತೆರೆದಿರುತ್ತಾರೆ. ಇನ್ನು ಬ್ಯಾಂಕ್ ನಲ್ಲಿ ಖಾತೆ ತೆರೆಯಲು ಎಷ್ಟು ಹಣವನ್ನು ಪಾವತಿಸಬೇಕು ಅಥವಾ ಕಥೆಯಲ್ಲಿ ಹಣ ಇಲ್ಲದಿದ್ದರೆ ಎಷ್ಟು ಶುಲ್ಕವನ್ನು ಪಾವತಿಸಬೇಕು ಎನ್ನುವ ಬಗ್ಗೆ ಯಾರಿಗೂ ಮಾಹಿತಿ ತಿಳಿದಿಲ್ಲ. ಈ ಬಗ್ಗೆ ಇದೀಗ ಹೊಸ ಸುದ್ದಿಯೊಂದು ಹರಡಿದೆ.
SMS ಅಲರ್ಟ್, ಡೆಬಿಟ್ ಕಾರ್ಡ್ ಶುಲ್ಕಗಳು, ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಉಳಿಸದಿದ್ದರೆ ದಂಡದ ರೂಪದ ಶುಲ್ಕಗಳು ಸೇರಿ ವಿವಿಧ ಶುಲ್ಕಗಳಿವೆ.
ಈ ಬಗ್ಗೆ ತಿಳಿಯದೆ ಎಷ್ಟೋ ಗ್ರಾಹಕರು ದಂಡ ಪಾವತಿಸುತ್ತಲೇ ಇರುತ್ತಾರೆ. ಕೆಲವು ಪ್ರಮುಖ ಬ್ಯಾಂಕ್ ಗಳಲ್ಲಿನ ಸರಾಸರಿ ಮಾಸಿಕ ಬ್ಯಾಲೆನ್ಸ್ ಅಂದರೆ ಕನಿಷ್ಠ ಬ್ಯಾಲೆನ್ಸ್ ನಿಯಮಗಳ ಬಗ್ಗೆ ತಿಳಿದುಕೊಳ್ಳೋಣ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI Bank)
ಪ್ರಸ್ತುತ ಎಸ ಬಿಐ ನಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸುವ ಅಗತ್ಯವಿಲ್ಲ. ಆದರೆ ಮಾಸಿಕ ಸರಾಸರಿ ಬ್ಯಾಲೆನ್ಸ್ 1 ಲಕ್ಷ ರೂ. ಗಳನ್ನೂ ಕಾಯ್ದುಕೊಳ್ಳುವವರು ಕೆಲವು ಪ್ರಯೋಜನಗಳನ್ನು ಹೊಂದಿರುತ್ತಾರೆ.
ಅಂತವರು ಪ್ರತಿ ತಿಂಗಳು ಎಷ್ಟು ಹಣವನ್ನು ಬೇಕಾದರೂ ಡ್ರಾ ಮಾಡಿಕೊಳ್ಳಬಹುದು. ನೀವು 1 ಲಕ್ಷಕ್ಕಿಂತ ಕಡಿಮೆ ಮೊತ್ತವನ್ನು ಹೊಂದಿದ್ದರೆ, ನಿಮಗೆ ನೀಡಲಾದ ಮಿತಿಯಲ್ಲಿ ಹೆಚ್ಚಿನ ಹಣವನ್ನು ವಿಥ್ ಡ್ರಾ ಮಾಡಿದರೆ ಪ್ರತಿ ವಹಿವಾಟಿಗೆ ರೂ. 21 + GST ಪಾವತಿಸಬೇಕಾಗುತ್ತದೆ.
ಹೆಚ್ ಡಿ ಎಫ್ ಸಿ ಬ್ಯಾಂಕ್ (HDFC Bank)
HDFC ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಹೊಂದಿದವ ಗ್ರಾಹಕರು ನಗರ ಮತ್ತು ಮೆಟ್ರೋ ಪ್ರದೇಶಗಳಲ್ಲಿ ರೂ. 10000 ಸೆಮಿ ಅರ್ಬನ್ ಪ್ರದೇಶಗಳಲ್ಲಿ ರೂ.5000 ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ರೂ. 2500 ಸರಾಸರಿ ತ್ರೈಮಾಸಿಕ ಬ್ಯಾಲೆನ್ಸ್ ಇರುವಂತೆ ನೋಡಿಕೊಳ್ಳಬೇಕು ಇಲ್ಲದಿದ್ದರೆ ದಂಡ ತೆರಬೇಕಾಗುತ್ತದೆ. ಈ ಶುಲ್ಕಗಳು 150 ರಿಂದ 600 ರೂವರೆಗೆ ಇರುತ್ತದೆ.
ಐಸಿಐಸಿ ಬ್ಯಾಂಕ್ (ICIC Bank)
ICIC ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಹೊಂದಿದ ಗ್ರಾಹಕರು ನಗರ ಮತ್ತು ಮೆಟ್ರೋ ಪ್ರದೇಶಗಳಲ್ಲಿ ರೂ. 10000 ಸೆಮಿ ಅರ್ಬನ್ ಪ್ರದೇಶಗಳಲ್ಲಿ ರೂ.5000 ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ರೂ. 2000 ಸರಾಸರಿ ತ್ರೈಮಾಸಿಕ ಬ್ಯಾಲೆನ್ಸ್ ಇರುವಂತೆ ನೋಡಿಕೊಳ್ಳಬೇಕು ಇಲ್ಲದಿದ್ದರೆ ದಂಡ ತೆರಬೇಕಾಗುತ್ತದೆ. ಈ ಶುಲ್ಕಗಳು ಶೇ. 6 ರಷ್ಟು ಅಥವಾ 500 ರೂವರೆಗೆ ಇರುತ್ತದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ (Panjab National Bank)
ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಹೊಂದಿದವ ಗ್ರಾಹಕರು ನಗರ ಮತ್ತು ಮೆಟ್ರೋ ಪ್ರದೇಶಗಳಲ್ಲಿ ರೂ. 20000 ಸೆಮಿ ಅರ್ಬನ್ ಪ್ರದೇಶಗಳಲ್ಲಿ ರೂ.5000 ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ರೂ. 2000 ಸರಾಸರಿ ತ್ರೈಮಾಸಿಕ ಬ್ಯಾಲೆನ್ಸ್ ಇರುವಂತೆ ನೋಡಿಕೊಳ್ಳಬೇಕು ಇಲ್ಲದಿದ್ದರೆ ದಂಡ ತೆರಬೇಕಾಗುತ್ತದೆ. ಈ ಶುಲ್ಕಗಳು 400 ರಿಂದ 600 ರೂವರೆಗೆ ಇರುತ್ತದೆ.
ಕೋಟಕ್ ಮಹಿಂದ್ರಾ ಬ್ಯಾಂಕ್ (Kotak Mahindra Bank)
ಕೋಟಕ್ ಮಹಿಂದ್ರಾ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಹೊಂದಿದವ ಗ್ರಾಹಕರು ನಗರ ಮತ್ತು ಮೆಟ್ರೋ ಪ್ರದೇಶಗಳಲ್ಲಿ ರೂ. 10000 ಸೆಮಿ ಅರ್ಬನ್ ಪ್ರದೇಶಗಳಲ್ಲಿ ರೂ.5000 ಬ್ಯಾಲೆನ್ಸ್ ಇರುವಂತೆ ನೋಡಿಕೊಳ್ಳಬೇಕು ಇಲ್ಲದಿದ್ದರೆ ದಂಡ ತೆರಬೇಕಾಗುತ್ತದೆ. ಈ ಶುಲ್ಕಗಳು ಶೇ. 6 ರಷ್ಟು ಇರುತ್ತದೆ.