Minor Driving Fine New Traffic Rules: ದೇಶದಲ್ಲಿ ಇತ್ತೀಚಿಗೆ ಅನೇಕ ಹೊಸ ಹೊಸ ನಿಯಮಗಳನ್ನ ಜಾರಿಗೆ ತರಲಾಗುತ್ತಿದೆ. ಕಠಿಣ ಸಂಚಾರ ನಿಯಮಗಳ ನಡುವೆ ನಿಯಮ ಉಲ್ಲಂಘನೆ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳು ಹೆಚ್ಚಾಗಿ ವಾಹನ ಚಾಲನೆ ಮಾಡುತ್ತಿರುವುದು ಕಂಡುಬಂದಿದೆ. ಇದಕ್ಕೆ ಸಂಚಾರಿ ಪೊಲೀಸರು ಅನೇಕ ಹೊಸ ಹೊಸ ಕಾನೂನುಗಳನ್ನ ಜಾರಿಗೆ ತಂದಿದ್ದಾರೆ. ಇದೀಗ ನಾವು ಅಪ್ರಾಪ್ತ ವಯಸ್ಸಿನ ಮಕ್ಕಳು ವಾಹನ ಚಾಲನೆ ಮಾಡಿದರೆ ಪೋಷಕರು ಏನೆಲ್ಲ ನಷ್ಟ ಅನುಭವಿಸಬೇಕಾಗುತ್ತದೆ ಮತ್ತು ಹೊಸ ನಿಯಮ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಅಪ್ರಾಪ್ತರ ವಾಹನ ಚಲನೆಯ ಪರಿಣಾಮ
ಭಾರತದಲ್ಲಿ ಅಪ್ರಾಪ್ತ ವಯಸ್ಕರ ವಾಹನ ಚಾಲನೆ ಕಾನೂನು ಬಾಹಿರವಾಗಿದೆ. ಹಾಗೆ ತಿದ್ದುಪಡಿ ಮಾಡಿದ ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಪೋಷಕರು ಅಥವಾ ಮಾಲೀಕರಿಗೆ 25,000 ರೂಪಾಯಿ ವರೆಗೆ ದಂಡ, ಸಂಭಾವ್ಯ ಜೈಲು ಶಿಕ್ಷೆ, ವಾಹನ ನೋಂದಣಿ ಅಮಾನತು ಮತ್ತು ಅಪ್ರಾಪ್ತ ವಯಸ್ಕರ ಪರವಾನಗಿ ಅರ್ಹತೆಯನ್ನು 25 ವರ್ಷ ವಯಸ್ಸಿನವರೆಗೆ ವಿಳಂಬ ಮಾಡುವುದು ಸೇರಿದಂತೆ ಕಠಿಣ ಶಿಕ್ಷೆಗಳನ್ನು ಜಾರಿಗೆ ತರಲಾಗಿದೆ.
ಹೊಸ ನಿಯಮದ ಹಿನ್ನಲೆ
ಚಿಕ್ಕಮಗಳೂರಿನಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬ ಬೈಕ್ ಚಾಲನೆ ಮಾಡುತ್ತಿರುವುದನ್ನು ಗಮನಿಸಿದ ಸಂಚಾರಿ ಪೊಲೀಸರು ಪ್ರಕರಣವನ್ನು ದಾಖಲು ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಮಕ್ಕಳಿಗೆ ವಾಹನ ನೀಡಿದ್ದು ಪೋಷಕರ ತಪ್ಪು ಮತ್ತು ಇನ್ನುಮುಂದೆ ಪೋಷಕರು ತಮ್ಮ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ನೀಡಬಾರದು ಎಂದು ಆದೇಶವನ್ನು ಹೊರಡಿಸಿತು. ಕರ್ನಾಟಕದಲ್ಲಿ ಸಾಕಷ್ಟು ಇಂತಹ ಪ್ರಕರಣಗಳು ಹಲವಾರು ಬೆಳಕಿಗೆ ಬಂದಿದೆ.
ಭಾರತೀಯ ಮೋಟಾರು ವಾಹನ ಕಾಯ್ದೆ 2019 ಹೇಳುವುದೇನು ನೋಡಿ
ಭಾರತೀಯ ಮೋಟಾರು ವಾಹನ ಕಾಯ್ದೆ 2019 ರ ಸಂಶೋಧನೆಯ ಸೆಕ್ಷನ್ 199A ಪ್ರಕಾರ, ಅಪ್ರಾಪ್ತರು ವಾಹನ ಚಾಲನೆ ಮಾಡಿದರೆ ವಾಹನ ಮಾಲೀಕ ಅಥವಾ ಪೋಷಕರಿಗೆ ರೂ.25,000 ದಂಡ ಮತ್ತು ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಹಾಗೆ ವಾಹನ ನೋಂದಣಿಯನ್ನು ರದ್ದು ಮಾಡಲಾಗುತ್ತದೆ. ರಸ್ತೆ ಅಪಘಾತವನ್ನು ತಡೆಯುವ ಉದ್ದೇಶದಿಂದ ಈ ನಿಯಮವನ್ನು ಜಾರಿಗೆ ತರಲಾಗಿದೆ.
ನಿಯಮಗಳ ಪ್ರಮುಖ ಅಂಶಗಳು
- 18 ವರ್ಷ ತುಂಬುವವರೆಗೆ ಮಕ್ಕಳಿಗೆ ವಾಹನ ಚಾಲನೆಗೆ ಅವಕಾಶ ಇಲ್ಲ
- ಮಕ್ಕಳಿಗೆ ರಸ್ತೆ ಸುರಕ್ಷತೆ ಬಗ್ಗೆ ತಿಳಿವಳಿಕೆ ನೀಡಬೇಕು
- ಕಾನೂನು ಉಲ್ಲಂಘನೆ ಮೇಲೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು
- ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಇದು ಅಗತ್ಯವಾಗಿದೆ.
- ಅಪ್ರಾಪ್ತ ಮಕ್ಕಳು ವಾಹನ ಚಾಲನೆ ಮಾಡಿದರೆ ಅಪಘಾತ ವಿಮೆ ಲಭ್ಯವಾಗುದಿಲ್ಲ. ಇದರಿಂದ ಆರ್ಥಿಕ ಹೊರೆ ಹೆಚ್ಚು.
- ಅಪ್ರಾಪ್ತ ವಯಸ್ಕರು, ಇತರ ರಸ್ತೆ ಬಳಕೆದಾರರನ್ನು ರಕ್ಷಿಸಲು ಮತ್ತು ಅಪಘಾತಗಳನ್ನು ತಡೆಗಟ್ಟಲು ಈ ನಿಯಮವನ್ನು ಜಾರಿಗೆ ತರಲಾಗಿದೆ.
ಅಪ್ರಾಪ್ತ ವಯಸ್ಸಿನ ವಾಹನ ಚಾಲನೆಯು ಯುವ ಚಾಲಕರು ಮತ್ತು ಇತರ ರಸ್ತೆ ಬಳಕೆದಾರರ ಜೀವಕ್ಕೆ ಅಪಾಯ ಉಂಟುಮಾಡುವ ಗಂಭೀರ ಸಮಸ್ಯೆಯಾಗಿದೆ. ಅಪ್ರಾಪ್ತ ವಯಸ್ಸಿನ ವಾಹನ ಚಾಲನೆಯನ್ನು ತಡೆಯಲು, ಕಾನೂನುಬದ್ಧ ಚಾಲನಾ ವಯಸ್ಸನ್ನು ಜಾರಿಗೊಳಿಸುವುದು ಮತ್ತು ಅಪರಾಧಿಗಳ ಮೇಲೆ ದಂಡಗಳನ್ನು ವಿಧಿಸುವುದು ಮುಖ್ಯವಾಗಿದೆ. ಹಾಗಾಗಿ ಪೋಷಕಕರು ತಮ್ಮ ಮಕ್ಕಳಿಗೆ ಇದರ ಬಗ್ಗೆ ತಿಳುವಳಿಕೆಯನ್ನು ನೀಡಬೇಕು.
ವಿಶೇಷ ಸೂಚನೆ: ನಾಡುನುಡಿ ಮಾದ್ಯಮದಲ್ಲಿ ಯಾವುದೇ ಸುಳ್ಳುಸುದ್ದಿ ಪ್ರಕಟಿಸಲಾಗುವುದಿಲ್ಲ. ಇದು ಸಂಚಾರ ನಿಯಮದ ಅಡಿಯಲ್ಲಿ ಬರುತ್ತದೆ ಅನ್ನುವುದನ್ನು ಪ್ರತಿಯೊಬ್ಬರೂ ಗಮನಿಸಬೇಕು.

