ವಾಸ್ತುಶಾಸ್ತ್ರದ ಪ್ರಕಾರ ಮಲಗುವ ಕೋಣೆಯ ಈ ದಿಕ್ಕಿನಲ್ಲಿ ಕನ್ನಡಿ ಇದ್ದರೆ ಆಯುಷ್ಯ ಕಡಿಮೆಯಾಗುತ್ತದೆ, ಯಾವ ದಿಕ್ಕು ನೋಡಿ.
ಕನ್ನಡಿ ನೋಡುವುದು ಸಾಮಾನ್ಯವಾಗಿ ನಾವು ಹಿಂದಿನಿಂದ ರೂಡಿಯಲ್ಲಿ ಮಾಡಿಕೊಂಡು ಬಂದ ಒಂದು ಪದ್ಧತಿ ಎಂದು ಹೇಳಬಹುದು. ಪ್ರತಿದಿನ ಕನ್ನಡಿ ನೋಡಿಕೊಂಡು ನಾವು ರೆಡಿ ಆಗುತ್ತೇವೆ. ಇನ್ನು ಮನೆಯಲ್ಲಿ ಹೆಚ್ಚು ಹೆಣ್ಣು ಮಕ್ಕಳಿದ್ದರೆ ಪ್ರತಿಯೊಂದು ಕೋಣೆಯಲ್ಲಿ ಕೂಡ ಕನ್ನಡಿ ಇರುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ. ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ನಾವು ಮನೆಯಲ್ಲಿ ಮಲಗುವ ಕೋಣೆಯಲ್ಲಿ ಕನ್ನಡಿಯನ್ನ ಇಟ್ಟುಕೊಳ್ಳುತ್ತೇವೆ ಮತ್ತು ಕೆಲವರಿಗೆ ಬೆಳಿಗ್ಗೆ ಎದ್ದ ತಕ್ಷಣ ಕನ್ನಡಿ ನೋಡುವ ಹವ್ಯಾಸ ಇದೆ ಎಂದು ಹೇಳಬಹುದು. ಸ್ನೇಹಿತರೆ ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ಕನ್ನಡಿಗೆ ಬಹಳ ವಿಶೇಷವಾದ ಸ್ಥಾನಮಾನವನ್ನ ಕೊಡಲಾಗಿದೆ ಮತ್ತು ನಾವು ಮನೆಯಲ್ಲಿ ಕನ್ನಡಿ ಇಡುವ ಸ್ಥಾನ ನಮ್ಮ ಆರ್ಥಿಕ ಪರಿಸ್ಥಿತಿಯನ್ನ ನಿರ್ಧಾರ ಮಾಡುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ.
ಸ್ನೇಹಿತರೆ ಮನೆಯಲ್ಲಿ ಮಲಗುವ ಕೋಣೆಯಲ್ಲಿ ಕನ್ನಡಿ ಇದ್ದು ಆ ಕನ್ನಡಿ ಈ ದಿಕ್ಕಿನಲ್ಲಿ ಇದ್ದರೆ ನಮ್ಮ ಆರ್ಥಿಕ ಪರಿಸ್ಥಿತಿ ತೀರಾ ಹದಗೆಡುವುದರ ಜೊತೆಗೆ ಇದು ನಮ್ಮ ಬಡತನಕ್ಕೆ ಕೂಡ ಕಾರಣವಾಗುತ್ತದೆ ಎಂದು ಹೇಳುತ್ತಿದೆ ವಾಸ್ತುಶಾಸ್ತ್ರ. ಹಾಗಾದರೆ ಮಲಗುವ ಕೋಣೆಯಲ್ಲಿ ಕನ್ನಡಿ ಯಾವ ದಿಕ್ಕಿನಲ್ಲಿ ಇದ್ದರೆ ನಮಗೆ ಸಮಸ್ಯೆ ಉಂಟಾಗುತ್ತದೆ ಮತ್ತು ಯಾವ ದಿಕ್ಕಿನಲ್ಲಿ ಕನ್ನಡಿ ಇದ್ದರೆ ಒಳ್ಳೆಯದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ವಾಸ್ತು ಪ್ರಕಾರ ಕನ್ನಡಿಯನ್ನು ನಿಖರವಾಗಿ ಹಾಸಿಗೆಯ ಮುಂದೆ ಇಡಬಾರದು. ಒಂದೊಮ್ಮೆ ನೀವು ಈಗಾಗಲೇ ಈ ಸ್ಥಳದಲ್ಲಿ ಕನ್ನಡಿ ಸ್ಥಾಪಿಸಿದ್ದರೆ ತಕ್ಷಣವೇ ಅದನ್ನುತೆಗೆದುಹಾಕಬೇಕು. ಹಾಸಿಗೆಯ ಮುಂಭಾಗದಲ್ಲಿರುವ ಕನ್ನಡಿಯು ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ ಮತ್ತು ಅದು ನಿಮ್ಮ ಆರ್ಥಿಕ ಪರಿಶೀತಿಯನ್ನ ಇನ್ನಷ್ಟು ಹದಗೆಡುವಂತೆ ಮಾಡುತ್ತದೆ. ಇನ್ನು ಮಲಗುವ ಕೋಣೆಯ ಡ್ರೆಸ್ಸಿಂಗ್ ಟೇಬಲ್ ಮೇಲೆ, ಕೋಣೆಯ ಕಿಟಕಿ ಅಥವಾ ಬಾಗಿಲಿನ ಮುಂದೆ ಕನ್ನಡಿಯನ್ನು ಇಡಬಾರದು. ಏಕೆಂದರೆ ಹೊರಗಿನ ಬೆಳಕು ಬೆಳಕಿನೊಂದಿಗೆ ಡಿಕ್ಕಿ ಹೊಡೆದು ನಕಾರಾತ್ಮಕ ಶಕ್ತಿಯನ್ನು ಉತ್ಪಾದಿಸುತ್ತದೆ ಮತ್ತು ಇದರಿಂದ ಮನೆಯ ಜನರ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಹೇಳಲಾಗುತ್ತದೆ.
ಇನ್ನು ಕೆಲವು ಮನೆಗಳಲ್ಲಿ ಮಲಗುವ ಕೋಣೆಯಲ್ಲಿ ಬಾಗಿಲಿಗೆ ಅಂಟಿನ್ಸ್ ಕನ್ನಡಿಯನ್ನ ಜೋಡಿಸಿರಲಾಗುತ್ತದೆ ಮತ್ತು ಇದು ಅಶುಭ ಮತ್ತು ಇದು ನಿಮ್ಮ ಮನೆಯ ಆರ್ಥಿಕ ಪರಿಸ್ಥಿತಿ ಹದಗೆಡುವಂತೆ ಮಾಡುತ್ತದೆ. ಇನ್ನು ವಾಸ್ತು ಪ್ರಕಾರ ಕೋಣೆಯ ಬಾಗಿಲು ಈಶಾನ್ಯ ಮೂಲೆಯಲ್ಲಿದ್ದರೆ ಕನ್ನಡಿಯನ್ನು ಅಳವಡಿಸಬಹುದು. ಇದಲ್ಲದೆ ಮನೆಯಲ್ಲಿ ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನಲ್ಲಿ ಕನ್ನಡಿಯನ್ನು ಇಡಬಾರದು. ಏಕೆಂದರೆ ಇದು ಅಪಶ್ರುತಿ ಅಥವಾ ಸಂಕಟವನ್ನು ಹೆಚ್ಚಿಸುತ್ತದೆ. ಮಲಗುವ ಕೋಣೆಯಲ್ಲಿ ಯಾವುದೇ ಕನ್ನಡಿ ಇಡುವಾಗ ವಿಶೇಷ ಕಾಳಜಿ ವಹಿಸಬೇಕು. ಮಲಗುವಾಗ ದೇಹದ ಯಾವ ಭಾಗವೂ ಕನ್ನಡಿಯಲ್ಲಿ ಕಾಣಿಸದ ರೀತಿಯಲ್ಲಿ ಕೋಣೆಯಲ್ಲಿ ಕನ್ನಡಿಯನ್ನು ಇಡಬೇಕು. ಇಲ್ಲದಿದ್ದರೆ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುವ ಅಪಾಯವಿದೆ ಎಂದೂ ಸಹ ಹೇಳಲಾಗುತ್ತದೆ. ಸ್ನೇಹಿತರೆ ಕನ್ನಡಿಯ ಕುರಿತಂತೆ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.