Pradeep Eshwar: ಬಿಗ್ ಬಾಸ್ ನಿಂದ ಬರುವ ಹಣ ಪ್ರದೀಪ್ ಈಶ್ವರ್ ಏನು ಮಾಡುತ್ತಾರೆ ಗೊತ್ತಾ…? ಪ್ರದೀಪ್ ಈಶ್ವರ್ ಹೇಳಿದ್ದೇನು.
MLA ಪ್ರದೀಪ್ ಈಶ್ವರ್ ಬಿಗ್ ಬಾಸ್ ಮನೆಯ ಎಂಟ್ರಿಗೆ ಕಾರಣವೇನು...?
MLA Pradeep Eshwar In Bigg Boss Season 10: ಸದ್ಯ ಎಲ್ಲೆಡೆ Bigg Boss Season 10 ಭರ್ಜರಿ ಸದ್ದು ಮಾಡುತ್ತಿದೆ. ಕಳೆದ ಭಾನುವಾರ ಗ್ರಾಂಡ್ ಪ್ರೀಮಿಯಂ ನೊಂದಿಗೆ ಆರಂಭಗೊಂಡ Bigg Boss Season 10 ಇದೀಗ ಎರಡು ದಿನಗಳನ್ನು ಪೂರೈಸಿದೆ. ದೊಡ್ಮನೆಗೆ ಈಗಾಗಲೇ 17 ಸ್ಪರ್ದಿಗಳು ಎಂಟ್ರಿ ಕೊಟ್ಟಿದ್ದಾರೆ.
ಕಿರುತೆರೆಯ ಸ್ಟಾರ್ಸ್, ಸಿನಿ ರಂಗದ ಕಲಾವಿದರಿಂದ ಹಿಡಿದು ಒಟ್ಟಾಗಿ 17 ಪ್ರತಿಭಾನ್ವಿತ ಕಾಲವಿದರು ದೊಡ್ಮನೆಗೆ ಎಂಟ್ರಿ ಕೊಟ್ಟಿದಾರೆ. ಸದ್ಯ ಎಲ್ಲೆಡೆ Bigg Boss Season 10 ಡೇ ಹವಾ ಎನ್ನಬಹುದು. ಸದ್ಯ Bigg Boss Season 10 ಆರಂಭಗೊಂಡ 2 ನೇ ದಿನವೇ ಬಹುದೊಡ್ಡ ಸಂಚಲನ ಮೂಡಿಸಿದೆ.
ದೊಡ್ಮನೆಗೆ MLA ಪ್ರದೀಪ್ ಈಶ್ವರ್ ಎಂಟ್ರಿ
ರಾಜ್ಯದ ಜನತೆಗೆ ಬಿಗ್ ಆರಂಭಗೊಂಡ ಎರಡನೇ ದಿನವೇ ಬಿಗ್ ಶಾಕ್ ನೀಡಿದೆ. ಚಿಕ್ಕಬಳ್ಳಾಪುರ ಶಾಸಕರಾದ Pradeep Eshwar ಸದ್ಯ Bigg Boss Season 10 ರ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. MLA ಪ್ರದೀಪ್ ಈಶ್ವರ್ ಎಂಟ್ರಿ ಬಿಗ್ ಇಡೀ ರಾಜ್ಯಕ್ಕೆ ಶಾಕ್ ನೀಡಿದೆ ಎನ್ನಬಹುದು. ಅಷ್ಟಕ್ಕೂ MLA ಸ್ಥಾನದಲ್ಲಿದ್ದ ಪ್ರದೀಪ್ ಈಶ್ವರ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು ಯಾಕೆ? ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡುತ್ತಿದೆ.
ಶಾಸಕರಾದ ಪ್ರದೀಪ್ ಈಶ್ವರ್ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದರೆ ಕ್ಷೇತ್ರದ ಜನರ ಸಮಸ್ಯೆಯನ್ನು ಯಾರು ಕೇಳುತ್ತಾರೆ? ಎಂಬೆಲ್ಲ ಪ್ರಶ್ನೆಗಳು ಸದ್ಯ ಹೆಚ್ಚುತ್ತಿದೆ. ಇದೀಗ ಮೂಲಗಳಿಂದ ತಿಳಿದುಬಂದ ಮಾಹಿತಿಯ ಪ್ರಕಾರ MLA ಪ್ರದೀಪ್ ಈಶ್ವರ್ ಬಿಗ್ ಬಾಸ್ ಮನೆಯ ಎಂಟ್ರಿಗೆ ಬಹುದೊಡ್ಡ ಕಾರಣ ಇದೆ ಎನ್ನಲಾಗುತ್ತಿದೆ.
ಬಿಗ್ ಬಾಸ್ ನಿಂದ ಬರುವ ಹಣವ ಪ್ರದೀಪ್ ಈಶ್ವರ್ ಏನು ಮಾಡುತ್ತಾರೆ ಗೊತ್ತಾ…?
ಸದ್ಯ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರೋ ಪ್ರದೀಪ್ ಈಶ್ವರ್ ಮನೆಯಲ್ಲಿ ಎಷ್ಟು ದಿನ ಇರ್ತಾರೆ ಎನ್ನುವುದೇ ಎಲ್ಲರಿಗು ಪ್ರಶ್ನೆಯಾಗಿದೆ. 100 ದಿನ ಇರಬೇಕಿದ್ದರು ಬಿಗ್ ಬಾಸ್ ನೀಡುವ ಎಲ್ಲ ಟಾಸ್ಕ್ ಅನ್ನು ಮಾಡಬೇಕಾಗುತ್ತದೆ. ಇನ್ನು ಶಾಸಕರಾದ ಪ್ರದೀಪ್ ಈಶ್ವರ್ ಬಿಗ್ ಬಾಸ್ ಮನೆಯಲ್ಲಿದ್ದರೆ MLA ಆಗಿ ನಿರ್ವಹಿಸಬೇಕಾದ ಜವಾಬ್ದಾರಿ ಸಾಕಷ್ಟಿವೆ.
ಇನ್ನು ಪ್ರದೀಪ್ ಈಶ್ವರ್ ಬಿಗ್ ಬಾಸ್ ಮನೆಗೆ ಹೋಗಲು ಅನಾಥ ಮಕ್ಕಳೇ ಕಾರಣ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ. ಬಿಗ್ ಬಾಸ್ ಮನೆಯಲ್ಲಿದ್ದುಕೊಂಡು ಬರುವ ಹಣದಿಂದ ಅನಾಥ ಮಕ್ಕಳಿಗೆ ಕೊಡಲು ಪ್ರದೀಪ್ ಈಶ್ವರ್ ನಿರ್ಧರಿಸಿದ್ದಾರೆ ಎನ್ನುವ ಮಾಹಿತಿ ಇದೆ.