Mobile Blast: ಹೋಟೆಲ್ ನಲ್ಲಿ ಕೂತಿದ್ದ ತಾತನ ಜೇಬಿನಲ್ಲಿದ್ದ ಮೊಬೈಲ್ ಸ್ಫೋಟ, ವಿಡಿಯೋ ವೈರಲ್.
ತಾತನ ಜೇಬಿನಲ್ಲಿ ಇದ್ದ ಮೊಬೈಲ್ ಇದ್ದಕ್ಕಿದ್ದ ಹಾಗೆ ಸ್ಪೋಟವಾಗಿದೆ, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Mobile Explosion: ಸಾಮಾನ್ಯವಾಗಿ ಎಲ್ಲರು ಮೊಬೈಲ್ ಫೋನ್ (Mobile Phone) ಗಳನ್ನೂ ಬಳಸುತ್ತಾರೆ. ಅತಿಯಾದ ಮೊಬೈಲ್ ಫೋನ್ ಬಳಕೆಯು ಬಳಕೆದಾರರ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ದಿನದಿಂದ ದಿನಕ್ಕೆ ಮೊಬೈಲ್ ಫೋನ್ ಬಳಕೆದಾರರು ಹೆಚ್ಚಾಗುತ್ತಿದ್ದಾರೆ.
ಮೊಬೈಲ್ ಫೋನ್ ಬಳಕೆ ಸಾಕಷ್ಟು ಅಡ್ಡ ಪರಿಣಾಮಗಳನ್ನು ಬೀರುತ್ತದೆ. ಹೆಚ್ಚು ಕಾಲ ಮೊಬೈಲ್ ಬಳಸುದರಿಂದ ಮೊಬೈಲ್ ಹೆಚ್ಚು ಬಿಸಿಯಾಗಿ ಸ್ಪೋಟಗೊಳ್ಳುವ (Smartphone Burst) ಸಂಭವನೀಯತೆ ಕೂಡ ಹೆಚ್ಚಿದೆ. ಇನ್ನು ಕೇರಳದಲ್ಲಿ ಈ ರೀತಿಯ ಪ್ರಕರಣ ಬೆಳಕಿಗೆ ಬಂದಿದೆ.
ಹೋಟೆಲ್ ನಲ್ಲಿ ಕೂತಿದ್ದ ತಾತನ ಜೇಬಿನಲ್ಲಿದ್ದ ಇದ್ದ ಮೊಬೈಲ್ ಸ್ಫೋಟ
ಕೇರಳದಲ್ಲಿ ಮೊಬೈಲ್ ಸ್ಪೋಟಗೊಂಡ ಪ್ರಕರಣ ಬೆಳಕಿಗೆ ಬಂದಿದೆ. ಕೇರಳದ ತ್ರಿಶೂರು ಜಿಲ್ಲೆಯಲ್ಲಿ ವೃದ್ಧರ ಜೇಬಿನಲ್ಲಿದ್ದ ಮೊಬೈಲ್ ಸ್ಪೋಟಗೊಂಡಿದೆ. ಹೋಟೆಲ್ ನಲ್ಲಿ ಕುಳಿತು ಟಿ ಕುಡಿಯುತ್ತಿದ್ದ ಸಮಯದಲ್ಲಿ ಈ ಅವಘಡ ಸಂಭವಿಸಿದೆ. ವೃದ್ಧರ ಸಮಯಪ್ರಜ್ಞೆಯಿಂದಾಗಿ ಅಪಾಯದಿಂದ ಪಾರಾಗಿದ್ದಾರೆ. ಒಂದು ಸಾವಿರ ರೂ. ಮೌಲ್ಯದ ಫೀಚರ್ ಫೋನ್ ಇದಾಗಿದೆ. ಇದು ಕೇರಳದಲ್ಲಿ ಸ್ಪೋಟಗೊಂಡ ಮೂರನೇ ಮೊಬೈಲ್ ಪ್ರಕರಣವಾಗಿದೆ.
ಮೊಬೈಲ್ ಫೋನ್ ಗಳು ಸ್ಪೋಟಗೊಳ್ಳಲು ಕಾರಣಗಳು
ಮೊಬೈಲ್ ಫೋನ್ ಗಳನ್ನೂ ಬಳಸುವ ಮುನ್ನ ಸಾಕಷ್ಟು ಕಾಳಜಿಯನ್ನು ವಹಿಸಬೇಕು. ಫೋನ್ ಬಳಸಿದ ನಂತರ ಉಪಯೋಗಿಸಿದ ಎಲ್ಲ ಅಪ್ಲಿಕೇಶನ್ ಗಳನ್ನೂ ಮುಚ್ಚಬೇಕು. ಫೋನ್ ಬಳಸದೆ ಇದ್ದ ಸಮಯದಲ್ಲಿ ಬ್ಯಾಕ್ ಗ್ರೌಂಡ್ ನಲ್ಲಿ ಅನೇಕ ಅಪ್ಲಿಕೇಶನ್ ಗಳು ಚಾಲನೆಯಲ್ಲಿರುತ್ತದೆ. ಬ್ಯಾಕ್ ಗ್ರೌಂಡ್ ನಲ್ಲಿ ಅಪ್ಲಿಕೇಶನ್ ಗಳು ರನ್ ಆಗುವ ಕಾರಣ ಫೋನ್ ಬೇಗನೆ ಬಿಸಿಯಾಗುತ್ತವೆ.
ಮೊಬೈಲ್ ಫೋನ್ ಗಳನ್ನೂ ಬಳಸುವಾಗ ಸ್ಕ್ರಿನ್ ಟೈಮ್ ಔಟ್ ಸೆಟ್ ಮಾಡುಕೊಳ್ಳುವುದು ಅಗತ್ಯ. ಈ ಸೆಟ್ಟಿಂಗ್ ನಿಮ್ಮ ಫೋನ್ ಬೇಗ ಬಿಸಿಯಾಗುವುದನ್ನು ತಡೆಯುತ್ತದೆ.ಸಾಫ್ಟ್ ವೆರ್ ಸಮಸ್ಯೆಯಿಂದಾಗಿ ಮೊಬೈಲ್ ಫೋನ್ ಗಳು ಅತಿಯಾಗಿ ಬಿಸಿಯಾಗುತ್ತವೆ. ಫೋನ್ ಅನ್ನು ಹೆಚ್ಚು ಚಾರ್ಜ್ ಮಾಡುವುದರಿಂದ ಕೂಡ ಮೊಬೈಲ್ ಫೋನ್ ಗಳು ಸ್ಪೋಟಗೊಳ್ಳುವ ಸಾಧ್ಯತೆ ಇರುತ್ತದೆ.