Aadhaar Facility: ಆಧಾರ್ ಕಾರ್ಡ್ ಇದ್ದವರಿಗೆ ಈ 8 ಸೇವೆಗಳು ಉಚಿತವಾಗಿ ಸಿಗಲಿದೆ, ಮೊಬೈಲ್ ನಂಬರ್ ಲಿಂಕ್ ಕೂಡ ಅಗತ್ಯವಿಲ್ಲ.

ಆಧಾರ್ ಕಾರ್ಡ್ ಅನ್ನು ಮೊಬೈಲ್ ಸಂಖ್ಯೆಗೆ ನೋಂದಾಯಿಸದಿದ್ದರು ಈ 8 ಸೇವೆಯನ್ನು ಪಡೆಯಬಹುದು, ಕೇಂದ್ರದ ನಿರ್ಧಾರ.

Mobile Number Link To Aadhaar Card: ದೇಶದಲ್ಲಿ Aadhaar Card ಎಷ್ಟು ಮುಖ್ಯ ದಾಖಲೆ ಎನ್ನುವ ಬಗ್ಗೆ ಈಗಾಗಲೇ ಎಲ್ಲರಿಗು ತಿಳಿದೇ ಇದೆ. ಆಧಾರ್ ಕಾರ್ಡ್ ಅನ್ನು ವ್ಯಕ್ತಿಯ ಇನ್ನಿತರ ವೈಯಕ್ತಿಕ ದಾಖಲೆಯೊಂದಿಗೆ ಲಿಂಕ್ ಮಾಡುವಂತೆ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. Ration card, ಪಾನ್ Card, Bank Account ಸೇರಿದಂತೆ ಇನ್ನಿತರ ಮುಖ್ಯ ದಾಖಲೆಗಳಿಗೆ ಆಧಾರ್ ಲಿಂಕ್ ಕಡ್ಡಾಯ ಎನ್ನುವುದು ಎಲ್ಲರಿಗು ತಿಳಿದಿರುವ ವಿಚಾರ.

Mobile Number Link To Aadhaar Card
Image Credit: Squareyards

ಆಧಾರ್ ಕಾರ್ಡ್ ಹೊಂದಿರುವವರಿಗೆ ಮಹತ್ವದ ಮಾಹಿತಿ
ಇನ್ನು ಈಗಾಗಲೇ ಕೇಂದ್ರವು Aadhaar Card ಗೆ Mobile Number ಅನ್ನು ನೋಂದಾಯಿಸುವಂತೆ ಮಾಹಿತಿ ನೀಡಿದೆ. ಕೇಂದ್ರದ ಸೂಚನೆಯಾನಂತೆ ಜನರು ತಮ್ಮ ಆಧಾರ್ ನಲ್ಲಿ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿಕೊಂಡಿದ್ದಾರೆ.

ಇನ್ನು ಆಧಾರ್ ನಲ್ಲಿ ಮೊಬೈಲ್ ಸಂಖ್ಯೆ ನೋಂದಣಿ ಆಗದಿದ್ದರೆ ಸರ್ಕಾರ ಕೆಲ ಪ್ರಯೋಜನ ಅಂತವರಿಗೆ ಲಭ್ಯವಾಗದಂತೆ ಮಾಡಿದೆ ಎನ್ನಬಹುದು. ಆದಾಗ್ಯೂ ನೀವು ನಿಮ್ಮ ಮೊಬೈಲ್ ನಂಬರ್ ಅನ್ನು ಆಧಾರ್ ಕಾರ್ಡ್ ಗೆ ನೋಂದಣಿ ಮಾಡದಿದ್ದರೆ ಈ 8 ಸೇವೆಯನ್ನು ಸುಲಭವಾಗಿ ಪಡೆಯಬಹುದು.

Aadhaar Facility
Image Credit: News 18

ಆಧಾರ್ ಕಾರ್ಡ್ ಅನ್ನು ಮೊಬೈಲ್ ಸಂಖ್ಯೆಗೆ ನೋಂದಾಯಿಸದಿದ್ದರು ಈ 8 ಸೇವೆಯನ್ನು ಪಡೆಯಬಹುದು
1. ಆಧಾರ್‌ ನ ಅಧಿಕೃತ ವೆಬ್‌ ಸೈಟ್‌ ಗೆ ಭೇಟಿ ನೀಡುವ ಮೂಲಕ ನೀವು ವ್ಯಾಲೆಟ್ ಗಾತ್ರದ ಆಧಾರ್ PVC ಕಾರ್ಡ್ ಅನ್ನು ಆನ್‌ ಲೈನ್‌ ನಲ್ಲಿ ಆರ್ಡರ್ ಮಾಡಬಹುದು. ಈ ಕಾರ್ಡ್ PVC ಯಿಂದ ಮಾಡಲ್ಪಟ್ಟಿದೆ ಮತ್ತು ಹೊಲೊಗ್ರಾಮ್ ಅನ್ನು ಹೊಂದಿದೆ.

2. ನೀವು ಮೊಬೈಲ್ ಸಂಖ್ಯೆಯನ್ನು ಆಧಾರ್ ನೊಂದಿಗೆ ನೋಂದಣಿ ಮಾಡದಿದ್ದರೆ, ಆಧಾರ್ PVC ಕಾರ್ಡ್ ಅನ್ನು ಆರ್ಡರ್ ಮಾಡಬಹುದು ಮತ್ತು ಅದರ ಸ್ಥಿತಿಯನ್ನು ಪರಿಶೀಲಿಸಬಹುದು.

Join Nadunudi News WhatsApp Group

3. ಆಧಾರ್ ನೋಂದಣಿ ಸ್ಥಿತಿ ಮತ್ತು ವಿಳಾಸ ಅಥವಾ ಇತರ ವಿವರಗಳಲ್ಲಿ ಯಾವುದೇ ನವೀಕರಣವನ್ನು ಪರಿಶೀಲಿಸಬಹುದು.

4. UIDAI ವೆಬ್‌ ಸೈಟ್‌ ನಲ್ಲಿ ರಾಜ್ಯ ಮತ್ತು ಪಿನ್ ಕೋಡ್ ಅನ್ನು ನಮೂದಿಸುವ ಮೂಲಕ ನಿಮ್ಮ ಹತ್ತಿರದ ಆಧಾರ್ ಸೇವಾ ಕೇಂದ್ರಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದು.

Aadhar Card Latest Update
Image Credit: Zeebiz

5. ಆಧಾರ್ ಕಾರ್ಡ್‌ ನೊಂದಿಗೆ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯಿಲ್ಲದಿದ್ದರೂ ನೋಂದಣಿ ಅಥವಾ ನವೀಕರಣಕ್ಕಾಗಿ ನೇಮಕಾತಿಯನ್ನು ಬುಕ್ ಮಾಡಬಹುದು.

6. ಆಧಾರ್ ಕಾರ್ಡ್ ಹೊಂದಿರುವವರು ತಮ್ಮ ಹೊಸ ವಿಳಾಸವನ್ನು ಪರಿಶೀಲಿಸಲು UIDAI ಗೆ ವಿನಂತಿಸಬಹುದು. ಅರ್ಜಿದಾರರ ಹೊಸ ವಿಳಾಸವನ್ನು ಪರಿಶೀಲಿಸಿದ ನಂತರ UIDAI ವಿಳಾಸವನ್ನು ನವೀಕರಿಸುತ್ತದೆ.

7. ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಯಾವುದೇ ಸಮಸ್ಯೆಗೆ ನೀವು UIDAI ವೆಬ್‌ ಸೈಟ್ ಅಥವಾ ಟೋಲ್ ಫ್ರೀ ಸಂಖ್ಯೆ 1947 ಅಥವಾ ಇಮೇಲ್ ಮೂಲಕ ದೂರು ಸಲ್ಲಿಸಬಹುದು.

8. ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ದೂರುಗಳ ಸ್ಥಿತಿಯನ್ನು UIDAI ವೆಬ್‌ ಸೈಟ್‌ ನಲ್ಲಿ ನೀವು ಸುಲಭವಾಗಿ ಪಡೆಯಬಹುದು.

Join Nadunudi News WhatsApp Group