Data Leak: ಮೊಬೈಲ್ ಬಳಸುವವರಿಗೆ ಕೇಂದ್ರದಿಂದ ಎಚ್ಚರಿಕೆ, ಈ ಸೆಟಿಂಗ್ ಆಫ್ ಮಾಡದಿದ್ದರೆ ನಿಮ್ಮ ವಯಕ್ತಿಕ ಮಾಹಿತಿ ಸೋರಿಕೆ.
ಮೊಬೈಲ್ ಬಳಸುವವರು ಕೆಲವು ಸೆಟ್ಟಿಂಗ್ ಆಫ್ ಮಾಡದೆ ಇದ್ದರೆ ಡೇಟಾ ಸೋರಿಕೆ ಆಗುತ್ತದೆ.
Mobile Scam Alert: ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಮೊಬೈಲ್ (Mobile)ಬಳಸದ ಜನರಿಲ್ಲ ಎಂದು ಹೇಳಬಹುದು . ಹೌದು ಚಿಕ್ಕ ಮಕ್ಕಳಿಂದ ಎಲ್ಲಾ ವರ್ಗದ ಜನರು ಮೊಬೈಲ್ ಬಳಕೆ ಮಾಡೇ ಮಾಡುತ್ತಾರೆ. ಹಿಂದಿನ ಕಾಲದಲ್ಲಿ ಮೊಬೈಲ್ ಅನ್ನು ಕರೆ ಸ್ವೀಕಾರ ಮಾಡಲು ಮತ್ತು ಕರೆ ಮಾಡಲು ಬಳಸಿದರೆ ಈಗಿನ ಕಾಲದಲ್ಲಿ ಮೊಬೈಲ್ ಅನ್ನು ಹಲವು ಕೆಲಸಗಳಿಗೆ ಬಳಸಲಾಗುತ್ತಿದೆ.
ಈ ಭೂಮಿ ಮೇಲೆ ಹೇಗೆ ಮೊಬೈಲ್ ಬಳಸುವವರ ಸಂಖ್ಯೆ ಏರಿಕೆ ಆಗಿದೆಯೋ ಅದೇ ರೀತಿಯಲ್ಲಿ ವಂಚನೆ ಮಾಡುವವರ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚಳ ಆಗುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ.
ಸೋರಿಕೆಯಾಗುತ್ತಿದೆ ಜನರ ಡೇಟಾ
ಹೌದು ಮೊಬೈಲ್ ನಲ್ಲಿ ಹೆಚ್ಚು ಹೆಚ್ಚು ಸಾಮಾಜಿಕ ಜಾಲತಾಣ ತಮ್ಮ ಇತರೆ ಅಪ್ಲಿಕೇಶನ್ ಬಳಸುವ ಕಾರಣ ಜನರು ಡೇಟಾ ಸೋರಿಕೆ ಆಗುತ್ತಿರುವುದನ್ನ ನಾವು ಗಮನಿಸಬಹುದು. ಹೌದು ವಂಚಕರು ಜನರಿಗೆ ತಿಳಿಯದ ರೀತಿಯಲ್ಲಿ ಜನರ ಬ್ಯಾಂಕ್ ಮಾಹಿತಿ ಮತ್ತು ಇತರೆ ವಯಕ್ತಿದ ಡೇಟಾ ಕದಿಯುವ ಕೆಲಸ ಮಾಡುತ್ತಿದ್ದು ಸದ್ಯ ಕೇಂದ್ರ ಸರ್ಕಾರದ ಜನರಿಗೆ ಎಚ್ಚರಿಕೆಯನ್ನ ರವಾನಿಸಿದೆ.
ಈ ಸೆಟ್ಟಿಂಗ್ ಆಫ್ ಮಾಡಿ ನಿಮ್ಮ ಡೇಟಾ ಸೇಫ್ ಮಾಡಿಕೊಳ್ಳಿ
ಮೊಬೈಲ್ ನಲ್ಲಿ ಕೆಲವು ಸೆಟ್ಟಿಂಗ್ ಗಳನ್ನ ಆಫ್ ಮಾಡದೆ ಇದ್ದರೆ ನಿಮ್ಮ ಡೇಟಾ ಸೋರಿಕೆ ಆಗುವ ಸಾಧ್ಯತೆ ಇದೆ ಎಂದು ಕೇಂದ್ರ ಜನರಿಗೆ ಎಚ್ಚರಿಕೆಯನ್ನ ನೀಡಿದೆ. ಎಲ್ಲಾ ಜನರು ಈಗಲೇ ತಮ್ಮ ಮೊಬೈಲ್ ನಲ್ಲಿ ಈ ಸೆಟ್ಟಿಂಗ್ ಆಫ್ ಮಾಡುವಂತೆ ತಿಳಿಸಲಾಗಿದ್ದು ಜನರು ಡೇಟಾ ಸೋರಿಕೆ ತಡೆಗಟ್ಟಲು ಸೆಟ್ಟಿಂಗ್ ನಲ್ಲಿ ಇದನ್ನ ಆಫ್ ಮಾಡುವುದು ಅನಿವಾರ್ಯ ಕೂಡ ಆಗಿರುತ್ತದೆ.
ಯಾವ ಸೆಟ್ಟಿಂಗ್ ಆಫ್ ಮಾಡುವುದು ಅನಿವಾರ್ಯ
ಮೊಬೈಲ್ ನಲ್ಲಿ ಕೆಲವು ಥರ್ಡ್ ಪಾರ್ಟಿ ಅಪ್ಲಿಕೇಶನ್ ಗಳನ್ನ ಇನ್ಸ್ಟಾಲ್ ಮಾಡಿದರೆ ನಿಮ್ಮ ಬ್ಯಾಂಕ್ ಮಾಹಿತಿ ಸೇರಿದಂತೆ ಕೆಲವು ವಯಕ್ತಿಕ ಮಾಹಿತಿ ಸೋರಿಕೆ ಆಗುವ ಸಾಧ್ಯತೆ ಇದೆ ಎಂದು ಕೇಂದ್ರ ತಿಳಿಸಿದೆ. ಮೊಬೈಲ್ ಡೇಟಾ ಆನ್ ಮಾಡಿದ ಸಮಯದಲ್ಲಿ ಕೆಲವು ಜಾಹಿರಾತುಗಳು ಬರುವುದನ್ನ ನಾವು ಗಮನಿಸಿರಬಹುದು, ಆ ಜಾಹಿರಾತುಗಳನ್ನ ಸಂಪೂರ್ಣವಾಗಿ ಓದಿ ನಂತರ ಅದರ ಮೇಲೆ ಕ್ಲಿಕ್ ಮಾಡಬೇಕು ಇಲ್ಲವಾದರೆ ನಿಮ್ಮ ಡೇಟಾ ಸೋರಿಕೆ ಆಗುವ ಸಾಧ್ಯತೆ ಹೆಚ್ಚು.
ನೀವು ಕೆಲವು ಅಪ್ಲಿಕೇಶನ್ ಅನ್ನು ಬಳಸುವ ಸಮಯದಲ್ಲಿ ನಿಮ್ಮ ಜಿಮೈಲ್, ಒಟಿಪಿ, ವಯಕ್ತಿಕ ಮಾಹಿತಿಯನ್ನ ಯಾವುದೇ ಕಾರಣಕ್ಕೂ ಹಂಚಿಕೊಳ್ಳಬಾರದು. ಅದೇ ರೀತಿಯಲ್ಲಿ ಅನಗತ್ಯ ಜಾಹಿರಾತು ಬರುವುದನ್ನ ತಪ್ಪಿಸಲು ನೀವು ಮೊಬೈಲ್ ನಲ್ಲಿ ಆಡ್ ಬ್ಲಾಕ್ ಮಾಡುವುದು ಅನಿವಾರ್ಯ ಕೂಡ ಆಗಿರುತ್ತದೆ.