Mobile Tower: ಮನೆಯ ಚಿಕ್ಕ ಜಾಗದಲ್ಲಿ ಸ್ಥಾಪಿಸಿ ಮೊಬೈಲ್ ಟವರ್, ಪ್ರತಿ ತಿಂಗಳು ಲಕ್ಷ ಲಕ್ಷ ಆದಾಯ.

ಮೊಬೈಲ್ ಟವರ್ ಸ್ಥಾಪಿಸುವ ಕಾರ್ಯವಿಧಾನ ಬಗ್ಗೆ ತಿಳಿದುಕೊಳ್ಳಿ.

Mobile Tower Business Tip: ಸಾಮಾನ್ಯವಾಗಿ ಭೂಮಿ ಆಸ್ತಿಯನ್ನು ಹೊಂದಿದ್ದರೆ ಅದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು. ಸದ್ಯ ಭೂಮಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ನಗರ ಪ್ರದೇಶದಲ್ಲಿ ಒಂದು ಹಿಡಿ ಜಾಗವನ್ನು ಖರೀದಿಸಬೇಕಿದ್ದರೂ ಕಷ್ಟವಾಗುತ್ತದೆ. ಇನ್ನು ಸ್ವಂತ ಭೂಮಿಯನ್ನು ಹೊಂದಿದ್ದರೆ ಸ್ವಂತ ವ್ಯವಹಾರವನ್ನೇ ಪ್ರಾರಂಭಿಸಬಹುದು.

ಹೌದು ನಿಮ್ಮ ಬಳಿ ಸ್ವಂತ ಭೂಮಿ ಇದ್ದರೆ ನೀವು ಈ ವ್ಯವಹಾರವನ್ನು ಪ್ರಾರಂಭಿಸಿದರೆ ತಿಂಗಳಲ್ಲಿ ಲಕ್ಷ ಲಕ್ಷ ಹಣವನ್ನು ಸಂಪಾದಿಸಬಹುದು. ಅಷ್ಟಕು ಅದು ಯಾವ ವ್ಯವಹಾರ ಎಂದು ಯೋಚಿಸುತ್ತಿದ್ದೀರಾ…? ನಿಮ್ಮ ಮನೆಯ ಚಿಕ್ಕ ಜಾಗದಲ್ಲಿ ಸ್ಥಾಪಿಸಬಹುದಾದ ಮೊಬೈಲ್ ಟವರ್ (Mobile Tower) ವ್ಯವಹಾರವಾಗಿದೆ. ನೀವು ಟೆಲಿಕಾಂ ಕಂಪನಿಗಳ ಸಹಾಯವನ್ನು ಪಡೆದು ನಿಮ್ಮದೇ ಆದ ಸ್ವಂತ ಜಾಗದಲ್ಲಿ ಮೊಬೈಲ್ ಟವರ್ ಗಳನ್ನೂ ಸ್ಥಾಪಿಸಬಹುದು.

Mobile Tower Business
Image Credit: Housing

ಮನೆಯ ಚಿಕ್ಕ ಜಾಗದಲ್ಲಿ ಸ್ಥಾಪಿಸಿ ಮೊಬೈಲ್ ಟವರ್
ನೀವು ಖಾಲಿ ಭೂಮಿ ಅಥವಾ ಟೆರೇಸ್‌ ನಲ್ಲಿ ತೆರೆದ ಸ್ಥಳವನ್ನು ಹೊಂದಿದ್ದರೆ, ಮೊಬೈಲ್ ಟವರ್ ಅನ್ನು ಸ್ಥಾಪಿಸುವುದರಿಂದ ಆದಾಯದ ಮೂಲವನ್ನು ಹುಡುಕಿಕೊಳ್ಳಬಹುದು. ಭೂಮಿಯ ಗಾತ್ರ, ಅದರ ಸ್ಥಳ, ಸುರಕ್ಷತೆಯ ಅಪಾಯಗಳು ಮತ್ತು ಮುನ್ನೆಚ್ಚರಿಕೆಗಳು ಇತ್ಯಾದಿಗಳಂತಹ ಕೆಲವು ಮೂಲಭೂತ ಅಂಶಗಳನ್ನು ಪರಿಗಣಿಸಿ ಆಸ್ತಿಯಲ್ಲಿ ಸೆಲ್ ಟವರ್‌ ಗಳನ್ನು ಸ್ಥಾಪಿಸಲು ನೀವು ಮೊಬೈಲ್ ಟವರ್ ಸ್ಥಾಪನೆ ಕಂಪನಿಗಳನ್ನು ನೇರವಾಗಿ ಸಂಪರ್ಕಿಸಬಹುದು.

ಮೊಬೈಲ್ ಟವರ್ ಸ್ಥಾಪಿಸುವ ಕಾರ್ಯವಿಧಾನ ಹೇಗೆ..?
*2000 ಚದರ ಅಡಿಯ ಬಂಜರು ಭೂಮಿಯಲ್ಲಿ ಮೊಬೈಲ್ ಟವರ್ ನಿರ್ಮಿಸಬಹುದು.

*ನಿಮ್ಮ ಕಟ್ಟಡವು ಮೇಲ್ಛಾವಣಿಯನ್ನು ಹೊಂದಿದ್ದರೆ, ಮೊಬೈಲ್ ಟವರ್ ಅಳವಡಿಕೆಗೆ ಕನಿಷ್ಠ 500 ಚದರ ಅಡಿ ಸ್ಥಳಾವಕಾಶ ಬೇಕಾಗುತ್ತದೆ.

Join Nadunudi News WhatsApp Group

Mobile Tower Business Tip
Image Credit: 99acres

*ರಚನಾತ್ಮಕ ಸುರಕ್ಷತಾ ಪ್ರಮಾಣಪತ್ರವನ್ನು ಹೊಂದಿದ್ದರೆ ನಿಮ್ಮ ವಸತಿ ಆಸ್ತಿಯನ್ನು ಮೊಬೈಲ್ ಟವರ್ ನಿರ್ಮಿಸಲು ಬಳಸಬಹುದು.

*ಟವರ್ ಯಾವುದೇ ಆಸ್ಪತ್ರೆಗಳು ಅಥವಾ ಶಾಲೆಗಳು ಅಥವಾ ಸಂಸ್ಥೆಗಳ 100 ಮೀಟರ್‌ಗಳ ಒಳಗೆ ಇರುವುದಿಲ್ಲ ಎಂದು ಖಚಿತಪಡಿಸಿಕೊಂಡ ನಂತರ ಅದನ್ನು ಸ್ಥಾಪಿಸಲು ನೀವು ಅರ್ಹರಾಗಿದ್ದೀರಿ.

*TSPs ನಿಮಗೆ ಮೊಬೈಲ್ ಟವರ್ ಸ್ಥಾಪನೆ ಸೇವೆಗಳನ್ನು ಒದಗಿಸುತ್ತಾರೆ. ಮಹಾನಗರ ಟೆಲಿಫೋನ್ ನಿಗಮ್ ಲಿಮಿಟೆಡ್ (MTNL), ಟಾಟಾ ಕಮ್ಯುನಿಕೇಷನ್ಸ್, GTL ಇನ್ಫ್ರಾಸ್ಟ್ರಕ್ಚರ್, ಇಂಡಸ್ ಟವರ್ಸ್, ಅಮೇರಿಕನ್ ಟವರ್ ಕೋ ಇಂಡಿಯಾ ಲಿಮಿಟೆಡ್, HFCL ಕನೆಕ್ಟ್ ಇನ್ಫ್ರಾಸ್ಟ್ರಕ್ಚರ್, ಕಂಪನಿಗಳನ್ನು ಸೆಲ್ ಟವರ್ ಅನ್ನು ಸ್ಥಾಪಿಸಲು ಸಂಪರ್ಕಿಸಬಹುದು.

Mobile Tower Business Profit
Image Credit: Gizbot

ಮೊಬೈಲ್ ಟವರ್ ಸ್ಥಾಪನೆಗೆ ಖರ್ಚಾಗುವ ವೆಚ್ಚವೆಷ್ಟು..?
ನಿಮ್ಮ ಆಸ್ತಿಯ ಸ್ಥಳ, ಎತ್ತರ ಮತ್ತು ಗಾತ್ರವು ಮೊಬೈಲ್ ಟವರ್ ಅನ್ನು ಸ್ಥಾಪಿಸುವ ಮೂಲಕ ನೀವು ಎಷ್ಟು ಹಣವನ್ನು ಗಳಿಸಬಹುದು ಎಂಬುದರ ಮೇಲೆ ಪರಿಣಾಮ ಬೀರುತ್ತದೆ. ಆಸ್ತಿಯು ಗ್ರಾಮೀಣ, ಅರೆ-ಗ್ರಾಮೀಣ ಅಥವಾ ನಗರ ಪ್ರದೇಶದಲ್ಲಿ ನೆಲೆಗೊಂಡಿದೆಯೇ ಎಂಬುದರ ಆಧಾರದ ಮೇಲೆ ಅವಲಂಭಿಸಿರುತ್ತದೆ. ಸೆಲ್ ಟವರ್ ಸ್ಥಾಪನೆಯಿಂದ ಮಾಸಿಕ ಬಾಡಿಗೆಗಳು ರೂ. 10,000 ಮತ್ತು ರೂ. 1 ಲಕ್ಷದ ನಡುವೆ ಇರಬಹುದು.

Join Nadunudi News WhatsApp Group