ನರೇಂದ್ರ ಮೋದಿಗೆ ವಿಶೇಷ ಸಂದೇಶ ಕಳುಹಿಸಿ ಭಾವುಕರಾದ ಆಂಡ್ರೆ ರಸೆಲ್, ರಸೆಲ್ ಮೋದಿಗೆ ಹೇಳಿದ್ದೇನು ಗೊತ್ತಾ.

ನರೇಂದ್ರ ಮೋದಿ ಅಂದರೆ ಯಾರಿಗೆ ತಾನೇ ಗೊತ್ತಿಲ್ಲ. ಇಡೀ ವಿಶ್ವ ಕಂಡ ಹೆಮ್ಮೆಯ ವ್ಯಕ್ತಿಯಲ್ಲಿ ನರೇಂದ್ರ ಮೋದಿಯವರು ಒಬ್ಬರು ಎಂದು ಹೇಳಿದರೆ ತಪ್ಪಾಗಲ್ಲ. ಎರಡನೆಯ ಭಾರಿ ದೇಶದ ಪ್ರಧಾನಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿರುವ ನರೇಂದ್ರ ಮೋದಿಯವರಿಗೆ ದೇಶದಲ್ಲಿ ಮಾತ್ರವಲ್ಲದೆ ಇತರೆ ದೇಶದಲ್ಲಿ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಇದೆ ಎಂದು ಹೇಳಬಹುದು. ಇನ್ನು ನರೇಂದ್ರ ಮೋದಿಯವರಂತೆಯೇ ಖ್ಯಾತ ವೆಸ್ಟ್ ಇಂಡೀಸ್ ಆಟಗಾರ ರಸೆಲ್ ಅಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ವಿಶ್ವಕಂಡ ಶ್ರೇಷ್ಠ ಆಟಗಾರರಲ್ಲಿ ಆಂಡ್ರೂ ರಸೆಲ್ ಕೂಡ ಒಬ್ಬರು ಎಂದು ಹೇಳಬಹುದು.

ಈತನ ಆಟಕ್ಕೆ ಮನಸೋತ ಜನರೇ ಇಲ್ಲ ಎಂದು ಹೇಳಬಹುದು. ಇನ್ನು ಈಗ ವಿಷಯಕ್ಕೆ ಬರುವುದಾದರೆ ಖ್ಯಾತ ಕ್ರಿಕೆಟ್ ಆಟಗಾರ ಆಂಡ್ರೂ ರಸೆಲ್ ಅವರು ನರೇಂದ್ರ ಮೋದಿಯವರಿಗೆ ಸಂದೇಶವನ್ನ ಕಳುಹಿಸಿದ್ದು ಸದ್ಯ ಈ ಸುದ್ದಿ ಸಕತ್ ವೈರಲ್ ಆಗಿದೆ ಎಂದು ಹೇಳಬಹುದು. ಹಾಗಾದರೆ ಆಂಡ್ರೂ ರಸೆಲ್ ಅವರು ನರೇಂದ್ರ ಮೋದಿಯವರಿಗೆ ಕಳುಹಿಸಿದ ಆ ಸಂದೇಶ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ವೆಸ್ಟ್ ಇಂಡೀಸ್ ತಂಡದ ಖ್ಯಾತ ಆಟಗಾರ ಆಂಡ್ರೂ ರಸೆಲ್ ಅವರು ನಮ್ಮ ದೇಶದ ಪ್ರಧಾನಿಯಾದ ನರೇಂದ್ರ ಮೋದಿಯವರಿಗೆ ವಿಶೇಷವಾದ ಸಂದೇಶವನ್ನ ಕಳುಹಿಸಿದ್ದಾರೆ.

Modi and rasel

ಸ್ನೇಹಿತರೆ ಆಂಡ್ರೂ ರಸೆಲ್ ಕಳುಹಿಸಿದ ಆ ಸಂದೇಶ ಯಾವುದೇ ಕ್ರಿಕೆಟ್ ಪಂದ್ಯದ ಬಗ್ಗೆ ಅಲ್ಲ, ಬದಲಾಗಿ ‘ವಾಕ್ಸಿನ್​ಮೈತ್ರಿ’ಯ ಅಡಿಯಲ್ಲಿ ಭಾರತವು ಜಮಾಯ್ಕ ದೇಶಕ್ಕೆ ಕಳುಹಿಸಿರುವ ಕರೊನಾ ಲಸಿಕೆಗಳ ಬಗ್ಗೆ ಆಗಿದೆ. 2021 ರ ಐಪಿಎಲ್ ಗೆ ಕೋಲ್ಕತ್ತಾ ತಂಡದ ಆಟಗಾರನಾಗಿ ಆಯ್ಕೆ ಆಗಿರುವ ಆಂಡ್ರೂ ರಸೆಲ್ ಅವರು ಅವರು ಭಾರತವು ಕರೊನಾ ಲಸಿಕೆಗಳನ್ನು ಕಳುಹಿಸಿರುವುದಕ್ಕೆ ಆತ್ಮೀಯವಾಗಿ ‘ಎ ಬಿಗ್​ ಬಿಗ್ ಬಿಗ್ ಥ್ಯಾಂಕ್ಯೂ’ ಹೇಳಿದ್ದಾರೆ.

ಇದರ ಕುರಿತು ವಿಡಿಯೋ ಸಂದೇಶ ಕಳುಹಿಸಿರುವ ರಸೆಲ್ ಅವರು, “ಕರೋನ ಆಕ್ರಮಣಕ್ಕೆ ತುತ್ತಾಗಿರುವ ಜಗತ್ತು ಸಾಮಾನ್ಯ ಪರಿಸ್ಥಿತಿಗೆ ಬರಬೇಕು ಅಂದರೆ ಲಸಿಕೆಗಳ ಪಾತ್ರ ಬಹಳ ಮುಖ್ಯವಾಗಿದೆ, ಈ ದೃಷ್ಟಿಯಿಂದ ಕರೊನಾ ಲಸಿಕೆ ಭಾರತದಿಂದ ಜಮಾಯ್ಕ ತಲುಪಿರುವ ಬಗ್ಗೆ ನಾವು ಪುಳಕಿತಗೊಂಡಿದ್ದೇವೆ, ಇದನ್ನು ಜಮಾಯ್ಕಾದ ಜನರು ತುಂಬ ಪ್ರಶಂಸಿಸುತ್ತಾರೆ. ಜಮಾಯ್ಕ ಮತ್ತು ಭಾರತ ಈಗ ಸೋದರರಾಗಿದ್ದೇವೆ” ಎಂದು ಭಾವುಕರಾಗಿ ರಸೆಲ್​ ಮಾತನಾಡಿದ್ದಾರೆ. ಸದ್ಯ ರಸೆಲ್ ಕಳುಹಿಸಿರುವ ಈ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದ್ದು ಜನರಿಂದ ಮೆಚ್ಚುಗೆ ಕೂಡ ಬಂದಿದೆ, ಸ್ನೇಹಿತರೆ ರಸೆಲ್ ಮೋದಿಯವರಿಗೆ ಕಳುಹಿಸಿರುವ ಈ ಸಂದೇಶದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Modi and rasel

Join Nadunudi News WhatsApp Group