Modi New Scheme: ಪ್ರತಿ ಕುಟುಂಬಕ್ಕೆ ವರ್ಷಕ್ಕೆ 10 ಲಕ್ಷ ಜಮಾ, ಮೋದಿ ಸರ್ಕಾರದ ಹೊಸ ಯೋಜನೆ.

70 ವರ್ಷ ಮೇಲ್ಪಟ್ಟವರಿಗೆ ಸಿಗಲಿದೆ ಸರ್ಕಾರದಿಂದ 10 ಲಕ್ಷ

Modi New Scheme Update: ಸತತ ಮೂರನೇ ಬಾರಿಗೆ ಅಧಿಕಾರವನ್ನು ಪಡೆದಿರುವ ಬಿಜೆಪಿ ಸರ್ಕಾರ ಸದ್ಯ ದೇಶದಲ್ಲಿ ಹಲವು ಯೋಜನೆಯನ್ನು ಜಾರಿಗೊಳಿಸಲು ಸಿದ್ದತೆ ಮಾಡಿಕೊಂಡಿದೆ. ಏನ್ ಡಿಎ ಸರ್ಕಾರದೊಂದಿಗೆ ಮೈತ್ರಿ ಮಾಡಿಕೊಂಡಿರುವ ಮೋದಿ ಸರ್ಕಾರ ಈ ಬಾರಿ ಬಜೆಟ್ ನಲ್ಲಿ ದೇಶದ ಬಡ ಜನತೆಗೆ ಸಾಕಷ್ಟು ಸೌಲಭ್ಯವನ್ನು ನೀಡುವ ಯೋಜನೆಯನ್ನು ಹಾಕಿಕೊಂಡಿದೆ.

ಇನ್ನು ಈ ಬಾರಿಯ ಬಜೆಟ್ ನಲ್ಲಿ ಮೋದಿ ಸರ್ಕಾರ PM ಕಿಸಾನ್ ಯೋಜನೆಯ ಹಣವನ್ನು 6000 ರೂ. ನಿಂದ 8000 ರೂ. ಗೆ ಹೆಚ್ಚಿಸುವ ಬಗ್ಗೆ ಯೋಜನೆ ಹಾಕಿಕೊಂಡಿದೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ. ಸದ್ಯ PM ಕಿಸಾನ್ ಯೋಜನೆಯ ಹಣ ಹೆಚ್ಚಳಕ್ಕಾಗಿ ರೈತರು ಕಾಯುತ್ತಿದ್ದರೆ ಎನ್ನಬಹುದು. ಇದರ ಬೆನ್ನಲ್ಲೇ ಮೋದಿ ಸರ್ಕಾರ ಬಡ ಜನರಿಗೆ ವಾರ್ಷಿಕವಾಗಿ ಹಣ ನೀಡಲು ಮುಂದಾಗಿದೆ ಎನ್ನುವ ಬಗ್ಗೆ ಮಾಹಿತಿ ಕೇಳಿ ಬರುತ್ತಿದೆ. ಸರ್ಕಾರ ಹೊಸ ಯೋಜನೆಯ ಬಗ್ಗೆ ವಿವರ ತಿಳಿಯಲು ಈ ಲೇಖನವನ್ನು ಓದಿ.

Modi New Scheme Update
Image Credit: Sputniknews

ಪ್ರತಿ ಕುಟುಂಬಕ್ಕೆ ವರ್ಷಕ್ಕೆ 10 ಲಕ್ಷ ಜಮಾ
ಇದೀಗ ಕೇಂದ್ರ ಸರ್ಕಾರ ಮತ್ತೊಂದು ವಿಚಾರದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಿದೆ. ಪ್ರತಿ ಕುಟುಂಬಕ್ಕೆ 10 ಲಕ್ಷ ರೂ.ವರೆಗೆ ಪ್ರಯೋಜನವಾಗುವ ಯೋಜನೆಯನ್ನು ಜಾರಿಗೆ ತರಲು ಯೋಜನೆ ಹಕಿಕೊಂಡಿದೆ. ಬಡವರು ಮತ್ತು ಮಧ್ಯಮ ವರ್ಗದವರನ್ನು ಹೆಚ್ಚು ಹೆದರಿಸುತ್ತಿರುವುದು ಚಿಕಿತ್ಸಾ ವೆಚ್ಚಕ್ಕೆ. ನಾವು ಸರ್ಕಾರಿ ಆಸ್ಪತ್ರೆಗಳಿಗೆ ಹೋಗುವಂತಿಲ್ಲ. ಖಾಸಗಿ ವಲಯದಲ್ಲಿ ಬಿಲ್ ಪಾವತಿಸಲು ಸಾಧ್ಯವಿಲ್ಲ.

ಆರೋಗ್ಯ ವಿಮೆ ಎಲ್ಲರಿಗೂ ಲಭ್ಯವಿಲ್ಲ. ಇವೆಲ್ಲವೂ ಬಡ ಜನರ ದೂರಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲರಿಗೂ ಉತ್ತಮ ವೈದ್ಯಕೀಯ ಸೇವೆ ನೀಡಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇದರ ಭಾಗವಾಗಿ ಆರೋಗ್ಯ ವಿಮಾ ಯೋಜನೆ ಆಯುಷ್ಮಾನ್ ಭಾರತ್ ಯೋಜನೆಯನ್ನು ಪರಿಚಯಿಸಲಾಗಿದೆ. ಈ ಮೂಲಕ ಕುಟುಂಬವು ವಾರ್ಷಿಕ 5 ಲಕ್ಷದವರೆಗೆ ಆರೋಗ್ಯ ವಿಮೆಯನ್ನು ನೀಡುತ್ತದೆ.

Ayushman Bharat Yojana
Image Credit: Zeebiz

70 ವರ್ಷ ಮೇಲ್ಪಟ್ಟವರಿಗೆ ಸಿಗಲಿದೆ ಸರ್ಕಾರದಿಂದ 10 ಲಕ್ಷ
ಆಯುಷ್ಮಾನ್ ಭಾರತ್ ಯೋಜನೆಯ ಪ್ರಯೋಜನಗಳು ದ್ವಿಗುಣಗೊಳ್ಳುವ ನಿರೀಕ್ಷೆಯಿದೆ. ಈ ಹಿಂದೆ ಈ ಯೋಜನೆಯಡಿ ಕುಟುಂಬವೊಂದಕ್ಕೆ ವಾರ್ಷಿಕ 5 ಲಕ್ಷ ರೂಪಾಯಿ ವಿಮೆ ನೀಡಲಾಗಿತ್ತು. ಇದನ್ನು ಈಗ 10 ಲಕ್ಷ ರೂ.ಗೆ ಹೆಚ್ಚಿಸಲಾಗುವುದು ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಇದಲ್ಲದೆ ಈ ಯೋಜನೆಗೆ ಅರ್ಜಿ ಸಲ್ಲಿಸುವ ಫಲಾನುಭವಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಗುರಿಯನ್ನು ಕೇಂದ್ರವು ಹೊಂದಿದೆ ಮತ್ತು ಮೂರು ವರ್ಷಗಳಲ್ಲಿ ಅದನ್ನು ಸಾಧಿಸುವ ಗುರಿಯನ್ನು ಹೊಂದಿದ ಎನ್ನಲಾಗುತ್ತಿದೆ. ಆಯುಷ್ಮಾನ್ ಭಾರತ್ ಯೋಜನೆಯ ಪ್ರಯೋಜನವು 70 ವರ್ಷ ಮೇಲ್ಪಟ್ಟವರಿಗೆ ಹೆಚ್ಚಿನ ಆದ್ಯತೆ ನೀಡಲಿದೆ.

Join Nadunudi News WhatsApp Group

PM Modi Ayushman Bharat Yojana
Image Credit: India Tv

Join Nadunudi News WhatsApp Group