Ads By Google

Mohammed Shami: ಹಲವು ದಿನಗಳ ನಂತರ ಬೆಳಕಿಗೆ ಬಂದು ವಿಶ್ವಕಪ್ ಪಂದ್ಯದಲ್ಲಿ ಶಮಿ ಅನುಭವಿಸಿದ ನೋವು, ಈತ ನಿಜಕ್ಕೂ ಗ್ರೇಟ್

Mohammed Shami Latest News Update

Image Credit: Original Source

Ads By Google

Mohammed Shami World Cup 2023: 2023 ರ ಏಕದಿನ ವಿಶ್ವಕಪ್ ನಲ್ಲಿ ಮೊಹಮ್ಮದ್ ಶಮಿ (Mohammed Shami) ಅವರ ಸಾಧನೆ ಅಗ್ರಸ್ಥಾನದಲ್ಲಿದೆ. ಭಾರತ ತಂಡದ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಶಮಿ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ.

ಶಮಿ ಟೀಮ್ ಇಂಡಿಯಾಕ್ಕೆ ಸೇರಿಕೊಂಡ ನಂತರ ಟೀಮ್ ಇಂಡಿಯಾದ ಲಕ್ ಬದಲಾಯಿತು. ಮೊಹಮ್ಮದ್ ಶಮಿ 7 ಪಂದ್ಯಗಳಲ್ಲಿ 24 ವಿಕೆಟ್ ಪಡೆದಿದ್ದಾರೆ. ಸಿಕ್ಕ ಅವಕಾಶವನ್ನು ಬಳಸಿಕೊಂಡ ಶಮಿ ಅಬ್ಬರಿಸಿದರು. ಮಿಡ್ಲ್ ಓವರ್‌ಗಳಲ್ಲಿ ನಿರಂತರವಾಗಿ ವಿಕೆಟ್ ಕಬಳಿಸಿದ ಶಮಿ ತಂಡಕ್ಕೆ ಆಧಾರವಾದರು. ಆದರೆ ಶಮಿ ಸಾಧನೆ ಮಾತ್ರ ತಿಳಿದಿರೋ ನಮಗೆ ಅವರು ಪಟ್ಟ ಕಷ್ಟದ ಬಗ್ಗೆ ತಿಳಿದಿಲ್ಲ.

Image Credit: the Economic Times

ನೋವಿನಲ್ಲೂ ವಿಶ್ವಕಪ್ ಆಡಿದ ಶಮಿ

ಶಮಿ ವಿಶ್ವಕಪ್ ನಲ್ಲಿ ಮಾಡಿದ ಸಾಧನೆ ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆ ಸೃಷ್ಟಿ ಮಾಡಿದೆ. ಆದರೆ ಅವರು ಬಹಳ ಕಷ್ಟದಲ್ಲೂ ಉತ್ತಮ ಪ್ರದರ್ಶನ ನೀಡಿದವರಾಗಿದ್ದಾರೆ. ಶಮಿಗೆ ಎಡ ಹಿಮ್ಮಡಿ ಸಮಸ್ಯೆ ಹಳೆಯದಾಗಿದೆ ಎಂದು ಅವರ ಜೊತೆ ಆಡಿದ ಕ್ರಿಕೆಟಿಗರೊಬ್ಬರು ಪಿಟಿಐ ಗೆ ತಿಳಿಸಿದ್ದಾರೆ. ಈ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ. ವಿಶ್ವಕಪ್ ಪಂದ್ಯಗಳ ವೇಳೆ ಮೊಹಮ್ಮದ್ ಶಮಿ ನೋವಿನಿಂದ ಬಳಲುತ್ತಿದ್ದರು. ಆದರೆ ನಿರಂತರವಾಗಿ ಚುಚ್ಚುಮದ್ದನ್ನು ತೆಗೆದುಕೊಳ್ಳುತ್ತಿದ್ದರು ಎಂದು ಅವರು ಹೇಳಿದರು.

ಮೊಹಮ್ಮದ್ ಶಮಿ ಗಾಯದ ಕಾರಣದಿಂದ ದಕ್ಷಿಣ ಆಫ್ರಿಕಾದ ಪ್ರವಾಸ ಬೆಳೆಸಲಿಲ್ಲ

ಮೊಹಮ್ಮದ್ ಶಮಿ ಕಳೆದ ಬಾರಿಯ ಏಕದಿನ ವಿಶ್ವಕಪ್‌ನಲ್ಲೂ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ್ದರು. ಅಲ್ಲದೆ ಅಫ್ಘಾನಿಸ್ತಾನ ವಿರುದ್ಧ ಹ್ಯಾಟ್ರಿಕ್ ಸಾಧನೆ ಮಾಡಿ ಬೀಗಿದ್ದರು. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ 2 ಟೆಸ್ಟ್ ಪಂದ್ಯಗಳ ಸರಣಿ ನಡೆಯುತ್ತಿದೆ. ಈ ಸರಣಿಯ ಮೊದಲ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಸೋಲು ಕಂಡಿದೆ.

Image Credit: NDTV

ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದೆ. ಆದರೆ ಮೊಹಮ್ಮದ್ ಶಮಿ ಭಾರತ ತಂಡದ ಭಾಗವಾಗಿಲ್ಲ. ಅದೇ ಸಮಯದಲ್ಲಿ, ಮೊಹಮ್ಮದ್ ಶಮಿ ಅವರ ಫಿಟ್ನೆಸ್‌ಗೆ ಸಂಬಂಧಿಸಿದ ದೊಡ್ಡ ಮಾಹಿತಿಯು ಇದೀಗ ಹೊರಬಂದಿದೆ. ಪಿಟಿಐ ಪ್ರಕಾರ, ಮೊಹಮ್ಮದ್ ಶಮಿ ವಿಶ್ವಕಪ್ ಪಂದ್ಯಗಳ ಸಮಯದಲ್ಲಿ ನೋವಿನಿಂದ ಬಳಲುತ್ತಿದ್ದರು. ಅಲ್ಲದೆ ಅವರು ಪಂದ್ಯವನ್ನು ಆಡುವ ಮುನ್ನ ಚುಚ್ಚುಮದ್ದು ತೆಗೆದುಕೊಳ್ಳುತ್ತಿದ್ದರು ಹಾಗು ಈ ಸಮಸ್ಯೆ ಇವರನ್ನು ಇನ್ನು ಕಾಡುತ್ತಿದ್ದು, ಶಮಿ ಅವರು ಹಿಮ್ಮಡಿ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.

Ads By Google
Nagarathna Santhosh: Nagarathna Santhosh has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in