Mohammed Siraj: ಶ್ರೀಲಂಕಾ ವಿರುದ್ದದ T20 ಪಂದ್ಯಕ್ಕೂ ಮುನ್ನವೇ ಭಾರತಕ್ಕೆ ಆಘಾತ, ಸ್ಟಾರ್ ಆಟಗಾರ ತಂಡದಿಂದ ಹೊರಕ್ಕೆ.

ಶ್ರೀಲಂಕಾ ವಿರುದ್ದದ ಪಂದ್ಯದಿಂದ ಹೊರಬಿದ್ದ ಸ್ಟಾರ್ ಆಟಗಾರ

Mohammed Siraj Latest Update: ಸದ್ಯ ಜುಲೈ 27 ರಿಂದ ಭಾರತ ಮತ್ತು ಶ್ರೀಲಂಕಾ ನಡುವೆ ಮೂರು ಪಂದ್ಯಗಳ ಟಿ 20 ಸರಣಿಯ ನಂತರ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಈ ಸಮಯದಲ್ಲಿ ಶ್ರೀಲಂಕಾ ವಿರುದ್ದದ T20 ಪಂದ್ಯಕ್ಕೂ ಮುನ್ನವೇ ಭಾರತಕ್ಕೆ ದೊಡ್ಡ ಆಘಾತ ಎದುರಾಗಿದೆ. ಮೊಹಮ್ಮದ್ ಸಿರಾಜ್ ಗಾಯಗೊಂಡಿರುವ ಕಾರಣ, ಈ ಪ್ರವಾಸವು ಟೀಮ್ ಇಂಡಿಯಾಕ್ಕೆ ತುಂಬಾ ಸವಾಲಾಗಿದೆ.

ಪಂದ್ಯಕ್ಕೂ ಮುನ್ನ ಭಾರತ ಕ್ರಿಕೆಟ್ ತಂಡ ದೊಡ್ಡ ಹಿನ್ನಡೆ ಅನುಭವಿಸಿದೆ. ತಂಡದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಗಾಯಗೊಂಡಿದ್ದಾರೆ. ಇನ್ನು ಈ ಸ್ಟಾರ್ ಆಟಗಾರ ಅನಾರೋಗ್ಯದ ಕಾರಣ ತಂಡದಿಂದ ಹೊರಗುಳಿದರೆ ಈ ಬದಲಿಗೆ ಆಡುವ ಆಟಗಾರ ಯಾರು ಎನ್ನುವುದು ಸದ್ಯದ ಪ್ರಶ್ನೆಯಾಗಿದೆ.

Mohammed Siraj
Image Credit: Crickettimes

ಶ್ರೀಲಂಕಾ ವಿರುದ್ದದ T20 ಪಂದ್ಯಕ್ಕೂ ಮುನ್ನವ್ವೆ ಭಾರತಕ್ಕೆ ಆಘಾತ
ಮೊಹಮ್ಮದ್ ಸಿರಾಜ್ ಗಾಯಗೊಂಡಿರುವ ಕಾರಣ ಟೀಂ ಇಂಡಿಯಾದ ಬೌಲಿಂಗ್ ದಾಳಿಯ ಮೇಲೆ ಪ್ರಶ್ನಾರ್ಥಕ ಚಿಹ್ನೆ ಮೂಡಿದೆ. ಮೊಹಮ್ಮದ್ ಸಿರಾಜ್ ಅವರ ಗಾಯದ ಗಂಭೀರತೆಯ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಆದರೆ ವರದಿಗಳ ಪ್ರಕಾರ ಅಭ್ಯಾಸದ ವೇಳೆ ಅವರ ಬಲಗಾಲಿಗೆ ಪೆಟ್ಟಾಗಿದೆ. ಈ ಗಾಯದಿಂದಾಗಿ ಅವರು ತಮ್ಮ ಮೊದಲ ಟಿ20 ಪಂದ್ಯವನ್ನು ಆಡುವುದು ಕಷ್ಟಕರವಾಗಿದೆ.

ಮೊಹಮ್ಮದ್ ಸಿರಾಜ್ ಟೀಂ ಇಂಡಿಯಾದ ಪ್ರಮುಖ ಬೌಲರ್‌ ಗಳಲ್ಲಿ ಒಬ್ಬರು. ಇತ್ತೀಚಿನ ದಿನಗಳಲ್ಲಿ ಹಲವು ಪ್ರಮುಖ ಪಂದ್ಯಗಳಲ್ಲಿ ತಂಡವನ್ನು ಗೆಲ್ಲಿಸಲು ನೆರವಾದರು. ಅಂತಹ ಪರಿಸ್ಥಿತಿಯಲ್ಲಿ ಅವರ ಗಾಯವು ಟೀಮ್ ಇಂಡಿಯಾದ ಬೌಲಿಂಗ್ ದಾಳಿಯನ್ನು ದುರ್ಬಲಗೊಳಿಸಬಹುದು.

Mohammed Siraj Latest News
Image Credit: India

ಸ್ಟಾರ್ ಆಟಗಾರ ತಂಡದಿಂದ ಹೊರಕ್ಕೆ
ಈ ಮದ್ಯೆ ಮೊಹಮ್ಮದ್ ಸಿರಾಜ್ ಬದಲಿಗೆ ಯಾರು ಕಣಕ್ಕಿಳಿಯಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ತಂಡದಲ್ಲಿ ಅರ್ಷದೀಪ್ ಸಿಂಗ್ ಮತ್ತು ಖಲೀಲ್ ಅಹ್ಮದ್ ಅವರಂತಹ ವೇಗದ ಬೌಲರ್‌ ಗಳಿದ್ದಾರೆ, ಆದರೆ ಸಿರಾಜ್ ಅವರ ಅನುಭವ ಮತ್ತು ಅವರ ಕೌಶಲ್ಯ ಈ ಇಬ್ಬರಿಗಿಂತ ಭಿನ್ನವಾಗಿದೆ.

Join Nadunudi News WhatsApp Group

ಮೊಹಮ್ಮದ್ ಸಿರಾಜ್ ಗಾಯಗೊಂಡಿರುವ ಸುದ್ದಿ ಕೇಳಿ ಅಭಿಮಾನಿಗಳು ತೀವ್ರ ನಿರಾಸೆಗೊಂಡಿದ್ದಾರೆ. ಸಿರಾಜ್ ಶೀಘ್ರ ಗುಣಮುಖರಾಗಲಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಹಾರೈಸುತ್ತಿದ್ದಾರೆ. ಜುಲೈ 27 ರಿಂದ ಭಾರತ ಮತ್ತು ಶ್ರೀಲಂಕಾ ನಡುವೆ ಮೂರು ಪಂದ್ಯಗಳ ಟಿ 20 ಸರಣಿಯ ನಂತರ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಮೊಹಮ್ಮದ್ ಸಿರಾಜ್ ಗಾಯಗೊಂಡಿರುವ ಕಾರಣ, ಈ ಪ್ರವಾಸವು ಟೀಮ್ ಇಂಡಿಯಾಕ್ಕೆ ತುಂಬಾ ಸವಾಲಾಗಿದೆ.

Mohammed Siraj New Update
Image Credit: Cricketcupworld

Join Nadunudi News WhatsApp Group