MohanLal: ಮೋಹನ್ ಲಾಲ್ ಖರೀದಿ ಮಾಡಿದ ಐಷಾರಾಮಿ ಕಾರಿನ ಬೆಲೆ ಎಷ್ಟು, ದುಬಾರಿ ಕಾರ್ ಇದಾಗಿದೆ.
ದುಬಾರಿ ಬೆಲೆಯ ಕಾರ್ ಖರೀದಿ ಮಾಡಿದ್ದಾರೆ ಖ್ಯಾತ ನಟ ಮೋಹನ್ ಲಾಲ್.
Actor Mohanlal Expensive Car: ದಕ್ಷಿಣ ಭಾರತದ ಅತ್ಯಂತ ಖ್ಯಾತ ನಟ ಮೋಹನ್ ಲಾಲ್ (Mohanlal) ಇದೀಗ ತಮ್ಮ ಹೊಸ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ತಮಿಳು ಸೇರಿದಂತೆ ಕನ್ನಡ, ಹಿಂದಿ ತೆಲಗು ಚಿತ್ರಗಳಲ್ಲಿ ಕೂಡ ನಟ ಮೋಹನ್ ಲಾಲ್ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಮೋಹನ್ ಲಾಲ್ ಅವರು ನಟನೆಯ ಜೊತೆಗೆ ನಿರ್ದೇಶರು, ನಿರ್ಮಾಪಕರು, ಹಿನ್ನಲೆ ಗಾಯಕರು ಆಗಿದ್ದಾರೆ. ಇದೀಗ ನಟ ಮೋಹನ್ ಲಾಲ್ ಅವರು ದುಬಾರಿ ಬೆಲೆಯ ಕಾರ್ ಖರೀದಿಸಿರುವ ಮಾಹಿತಿ ತಿಳಿದುಬಂದಿದೆ. ಇನ್ನು ಮೋಹನ್ ಲಾಲ್ ಅವರು ಖರೀದಿಸಿದ ಕಾರ್ ಎಷ್ಟು ಬೆಲೆಯದ್ದಾಗಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.
ದುಬಾರಿ ಬೆಲೆಯ ಕಾರ್ ಖರೀದಿಸಿದ ಮೋಹನ್ ಲಾಲ್
ಕೇರಳದ ಸೂಪರ್ ಸ್ಟಾರ್ ಆಗಿ ನಟ ಮೋಹನ್ ಲಾಲ್ ಖ್ಯಾತಿ ಪಡೆದಿದ್ದಾರೆ. ಮೋಹನ್ ಲಾಲ್ ಅವರ ಬಳಿ ಸಾಕಷ್ಟು ದುಬಾರಿ ಬೆಲೆಯ ಕಾರ್ ಗಳು ಹಾಗೂ ಬೈಕ್ ಗಳು ಇವೆ. ಆದರು ಕೂಡ ಇದೀಗ ಹೊಸ ರೇಂಜ್ ರೋವರ್ ಆಟೋಬಯೋಗ್ರಫಿ ಕಾರ್ (Range Rover Autobiography Car) ಅನ್ನು ಖರೀದಿ ಮಾಡಿದ್ದಾರೆ.
ಇನ್ನು ಮೋಹನ್ ಲಾಲ್ ಅವರು ತಮ್ಮ ಹೊಸ ಕಾರನ್ನು ಬಹಳ ಅದ್ದೂರಿಯಾಗಿ ಸ್ವಾಗತ ಮಾಡಿದ್ದಾರೆ. ಹೊಸ ಕಾರ್ ನಲ್ಲಿ ಡ್ರೈವ್ ಮಾಡಿ ಪತ್ನಿಯ ಜೊತೆ ಮೊದಲ ರೈಡ್ ಹೋಗಿದ್ದಾರೆ. ಇನ್ನು ಈ ದುಬಾರಿ ರೇಂಜ್ ರೋವರ್ ಕಾರಿನ ಬೆಲೆಯ ಬಗ್ಗೆ ತಿಳಿಯೋಣ.
ರೇಂಜ್ ರೋವರ್ ಆಟೋಬಯೋಗ್ರಫಿ ಕಾರಿನ ಬೆಲೆ
ರೇಂಜ್ ರೋವರ್ ಆಟೋಬಯೋಗ್ರಫಿ ಕಾರ್ ಅತ್ಯಂತ ದುಬಾರಿ ಬೆಲೆಯದ್ದಾಗಿದೆ. ಈ ರೇಂಜ್ ರೋವರ್ ಆಟೋಬಯೋಗ್ರಫಿ ಕಾರಿನ ಬೆಲೆ ಬರೋಬ್ಬರಿ 5 ಕೋಟಿ ಆಗಿದೆ. ಭಾರತೀಯ ನಂತರ ಪೈಕಿ ಕೆಲವರಲ್ಲಿ ಮಾತ್ರ ಈ ದುಬಾರಿ ರೇಂಜ್ ರೋವರ್ ಆಟೋಬಯೋಗ್ರಫಿ ಕಾರ್ ಇದೆ. ಇನ್ನು ಮೋಹಲ್ ಲಾಲ್ ಅವರ ದುಬಾರಿ ಕಾರಿನ ವೆಲ್ ಕಮ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.