SBI Debit: SBI ಖಾತೆ ಇದ್ದವರಿಗೆ ಸೂಚನೆ, ಪ್ರತಿ ವರ್ಷ ನಿಮ್ಮ ಖಾತೆಯಿಂದ 436 ರೂ ಕಟ್ ಆಗಲಿದೆ.
436 rupees have been deducted from SBI customer's account for this reason.
SBI Bank Auto Debit: ಪ್ರತಿಷ್ಠಿತ ಸರ್ಕಾರಿ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಇತ್ತೀಚಿಗೆ ಸಾಕಷ್ಟು ನಿಯಮಗಳಲ್ಲಿ ಬದಲಾವಣೆಯನ್ನು ತಂದಿದೆ. ಇನ್ನು ತನ್ನ ಗ್ರಾಹಕರ ಅನುಕೂಲಕ್ಕಾಗಿ ಎಸ್ ಬಿಐ ಸಾಕಷ್ಟು ಸೌಲಭ್ಯಗಳು ಕೂಡ ತಂದಿದೆ. ಇತ್ತೀಚೆಗಷ್ಟೇ ಎಸ್ ಬಿಐ ಗ್ರಾಹಕರ ಖಾತೆಯಿಂದ 436 ರೂ. ಅನ್ನು ಕಡಿತಗೊಳಿಸಲಾಗಿದೆ.
ಎಸ್ ಬಿಐ ಗ್ರಾಹಕರ ಖಾತೆಯಿಂದ 436 ರೂ. ಕಡಿತ
ಈ ಹಿಂದೆ ಸ್ಟೇಟ್ ಬ್ಯಾಂಕ್ ಇಂಡಿಯಾ ಗ್ರಾಹಕರ ಖಾತೆಯಿಂದ ಡೆಬಿಟ್ ಕಾರ್ಡ್ ಶುಲ್ಕವಾಗಿ 187 ರೂ. ಗಳನ್ನೂ ಕಡಿತಗೊಳಿಸಲಾಗಿತ್ತು. ಆದರೆ ಇದೀಗ ಎಸ್ ಬಿಐ ಗ್ರಾಹಕರ ಖಾತೆಯಿಂದ 436 ರೂ. ಕಡಿತಗೊಂಡಿದೆ. ಎಸ್ ಬಿಐ ಗ್ರಾಹಕರ ಖಾತೆಯಿಂದ ಹಣ ಕಡಿತಗೊಳ್ಳಲು ಕಾರಣ ಏನಿರಬಹುದು ಎನ್ನುವ ಬಗ್ಗೆ ತಿಳಿಯೋಣ.
ಮೋದಿ ಸರ್ಕಾರದ ವಿಮಾ ಸುರಕ್ಷಿತ ಯೋಜನೆ
ಮೋದಿ ಸರ್ಕಾರವು ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಅದರಲ್ಲಿ ಪ್ರದಾನ ಮಂತ್ರಿ ಜೀವನ ಭೀಮಾ ಯೋಜನೆ (Pradhan Mantri Jivan Bhima Yojana) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ (Pradhan Mantri Suraklsha Bhima Yojana)ಕೂಡ ಸೇರಿಕೊಂಡಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವರು ಹೆಚ್ಚಿನ ಲಾಭವನ್ನು ಪಡೆಯಬಹುದು. ಈ ಎರಡು ಯೋಜನೆಗಳಲ್ಲಿ ಆಟೋ ಡೆಬಿಟ್ ಆಯ್ಕೆ ಲಭ್ಯವಿದೆ.
ಪ್ರಧಾನ ಮಂತ್ರಿ ಜೀವನ ಭೀಮಾ ಮತ್ತು ಸುರಕ್ಷಾ ಭೀಮಾ ಯೋಜನೆ
ಪ್ರಧಾನ ಮಂತ್ರಿ ಜೀವನ ಭೀಮಾ ಮತ್ತು ಸುರಕ್ಷಾ ಭೀಮಾ ಯೋಜನೆಯಲ್ಲಿ ಹೂಡಿಕೆ ಮಾಡಿದವರು, ಯಾವುದೇ ಬ್ಯಾಂಕ್ ಖಾತೆಯಲ್ಲಿ ಆಟೋ ಡೆಬಿಟ್ ಆಯ್ಕೆಯನ್ನು ಆರಿಸಿದ್ದರೆ ನಿಮ್ಮ ಖಾತೆಯಿಂದ ಮೊತ್ತವು ಕಡಿತವಾಗುತ್ತದೆ. ನೀವು ಯೋಜನೆಯ ಮೇಲೆ ಮಾಡಿದ ಆಯ್ಕೆಯ ಆಧಾರದ ಮೇರೆಗೆ ವಾರ್ಷಿಕ ಪ್ರೀಮಿಯಂ 436 ರೂ. ಕಡಿತವಾಗಿದೆ. ಈ ಮೊತ್ತವು ಮೇ 31 ರ ಒಳಗೆ ಕಡಿತವಾಗುತ್ತದೆ.