Monthly Pension: 60 ವರ್ಷ ಮೇಲ್ಪಟ್ಟ ಮಹಿಳೆಗೆ ತಿಂಗಳಿಗೆ 3000 ರೂ, ಕಾಂಗ್ರೆಸ್ ಇನ್ನೊಂದು ಯೋಜನೆ.

ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್, ವೃದ್ದರು, ವಿಧವೆಯರಿಗೆ ಸಿಗಲಿದೆ ಇನ್ನುಮುಂದೆ 3000 ಪಿಂಚಣಿ

Monthly Pension Hike In Andhra Pradesh: ಸದ್ಯ ಹೊಸ ವರ್ಷ ಆರಂಭವಾಗಿದೆ. ಹೊಸ ವರ್ಷದಲ್ಲಿ ಅನೇಕ ನಿಯಮಗಳು ಬದಲಾಗುತ್ತಿದೆ. ಹೊಸ ಹೊಸ ನಿಯಮಗಳ ಜೊತೆಗೆ ಹೊಸ ವರ್ಷದ ಶುಭಾರಂಭಕ್ಕೆ ಸರ್ಕಾರ ವಿವಿಧ ಸೌಲಭ್ಯವನ್ನು ನೀಡುತ್ತಿದೆ. ಜನರಿಗಾಗಿ ಸಾಕಷ್ಟು ಅನುಕೂಲವನ್ನು ಮಾಡಿಕೊಡುತ್ತಿದೆ. ಇನ್ನು ಈ ರಾಜ್ಯ ಸರ್ಕಾರ ಹೊಸ ವರ್ಷದ ಶುಭಾರಂಭಕ್ಕೆ ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ ನೀಡಿದೆ. ಪಿಂಚಣಿಯ ಮೊತ್ತವನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ.

Monthly Pension Hike In Andhra Pradesh
Image Credit: Deccanrepublic

ಸರ್ಕಾರದಿಂದ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್
ಪ್ರಸ್ತುತ ಆಂಧ್ರ ಪ್ರದೇಶ ಸರ್ಕಾರ (Andhra Pradesh Govt) ಹಿರಿಯ ನಾಗರಿಕರಿಗೆ ಹೊಸ ವರ್ಷದ ಉಡುಗೊರೆಯನ್ನು ನೀಡಿದೆ. ಈವರೆಗೆ ನೀಡಲಾಗುತ್ತಿದ್ದ ಪಿಂಚಣಿಯ ಹಣವನ್ನು ಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ರಾಜ್ಯದ ಹಿರಿ ನಾಗರಿಕರಿಗೆ ಈ ಹಿಂದೆ 2250 ರೂ. ಗಳಪಿಂಚಣಿಯ ಮೊತ್ತವನ್ನು ನೀಡಲಾಗಿತ್ತು.

ಆಂಧ್ರ ಪ್ರದೇಶ ಸರ್ಕಾರ ಚುನಾವಣಾ ಸಮಯದಲ್ಲಿ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ಚುನವಣಾ ಗೆದ್ದ ಸಮಯದಲ್ಲಿ 1000 ಇದ್ದ ಪಿಂಚಣಿಯ ಮೊತ್ತವನ್ನು 2000 ಕ್ಕೆ ಏರಿಸಿದೆ. ಪ್ರತಿ ವರ್ಷದಲ್ಲಿ 250 ರೂ ಪಿಂಚಣಿಯನ್ನು ಹೆಚ್ಚಿಸಿ 5 ವರ್ಷದೊಳಗೆ 3000 ಕ್ಕೆ ಏರಿಸುವದಾಗಿ ಸರ್ಕಾರ ಹೇಳಿಕೆ ನೀಡಿತ್ತು. ಸದ್ಯ ಈ ಹೇಳಿಕೆಯಂತೆ ಸರ್ಕಾರ ನಡೆದುಕೊಂಡಿದೆ.

andhra pradesh congress guarantee scheme 2024
Image Credit: Businesstoday

ವೃದ್ದರು, ವಿಧವೆಯರಿಗೆ ಸಿಗಲಿದೆ ಇನ್ನುಮುಂದೆ 3000 ಪಿಂಚಣಿ
ಜನವರಿ 1 2024 ರಿಂದ ಆಂಧ್ರಪ್ರದೇಶ ಸರಕಾರ ಪಿಂಚಣಿಯ ಮೊತ್ತವನ್ನು ಹೆಚ್ಚಿಸಲಿದೆ. ಈವರೆಗೆ 2250 ರೂ. ಪಿಂಚಣಿ ಲಭ್ಯವಾಗುತ್ತಿತ್ತು, ಇನ್ನುಮುಂದೆ ರಾಜ್ಯದ ವೃದ್ದರು, ವಿಧವೇಯರು 3000 ಪಿಂಚಣಿಯ ಹಣವನ್ನು ಪಡೆಯಲಿದ್ದಾರೆ.

ಜನವರಿ 1 ರಿಂದ ಪ್ರತಿ ತಿಂಗಳು 3000 ಪಿಂಚಣಿ ಸಿಗಲಿದೆ. ಹೊಸ ಪಿಂಚಣಿ ಕಾರ್ಡ್ ವಿತರಣೆಯನ್ನೂ ಕೈಗೊಳ್ಳಲಾಗುತ್ತಿದೆ. ಏಕಕಾಲದಲ್ಲಿ 1.71 ಲಕ್ಷ ಜನರು ಹೊಸ ಪಿಂಚಣಿ ಕಾರ್ಡ್‌ಗಳನ್ನು ಪಡೆಯಲಿದ್ದಾರೆ. ರಾಜ್ಯಾದ್ಯಂತ 66 ಲಕ್ಷಕ್ಕೂ ಹೆಚ್ಚು ಜನರಿಗೆ 3000 ಪಿಂಚಣಿ ನೀಡುತ್ತಿರುವ ದೇಶದ ಏಕೈಕ ರಾಜ್ಯ ಆಂಧ್ರಪ್ರದೇಶ ಎಂದು ಜಗನ್ ಹೇಳಿದರು.

Join Nadunudi News WhatsApp Group

Join Nadunudi News WhatsApp Group