ನಾಳೆ ಶಕ್ತಿಶಾಲಿ ರಕ್ತ ಚಂದ್ರ ಗ್ರಹಣ, ಈ 5 ತಪ್ಪುಗಳನ್ನ ಮಾಡಿದರೆ ಜೀವನದಲ್ಲಿ ಕಷ್ಟ ಕಟ್ಟಿಟ್ಟ ಬುತ್ತಿ, ಎಚ್ಚರ ಎಚ್ಚರ.
ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಆಚಾರ ವಿಚಾರಕ್ಕೆ ಬಹಳ ಪ್ರಾಮುಖ್ಯತೆಯನ್ನ ಕೊಡಲಾಗಿದೆ ಎಂದು ಹೇಳಬಹುದು. ಹೌದು ನಮ್ಮ ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಗೂ ಜಾತಕ ಮತ್ತು ಗ್ರಹಗಳಲ್ಲಿ ಆಗುವ ದೊಡ್ಡ ಬದಲಾವಣೆಯೇ ಕಾರಣ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ, ಇನ್ನು ಅದೇ ರೀತಿಯಲ್ಲಿ ಅಮಾವಾಸ್ಯೆ, ಹುಣ್ಣಿಮೆ ಮತ್ತು ಪ್ರತಿಯೊಂದು ಗ್ರಹಣಕ್ಕೂ ಬಹಳ ಬೆಲೆಯನ್ನ ಕೊಡಲಾಗುತ್ತದೆ ಎಂದು ಹೇಳಬಹುದು. ಇನ್ನು ಗ್ರಹಣ ಅನ್ನುವುದು ಆಕಾಶ ಮತ್ತು ಭೂಮಿಯ ನಡುವೆ ನಡೆಯುವ ಒಂದು ಪ್ರಕ್ರಿಯೆಯಾಗಿದ್ದು ಇದು ಮಾನವನ ಜೀವನದ ಮೇಲೆ ದೊಡ್ಡ ಮಟ್ಟದಲ್ಲಿ ಪ್ರೈಣಾಮವನ್ನ ಬೀರುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಅದೇ ರೀತಿಯಲ್ಲಿ ನಿಮಗೆಲ್ಲ ತಿಳಿದಿರುವ ಹಾಗೆ ನಾಳೆ ವರ್ಷದ ಕೊನೆಯ ರಕ್ತ ಚಂದ್ರ ಗ್ರಹಣ.
ಈ ಚಂದ್ರ ಗ್ರಹಣ ಬಹಳ ಶಕ್ತಿಯಾದ ಚಂದ್ರ ಗ್ರಹಣವಾಗಿದ್ದು ಇದು ಮಾನವನ ಜೀವನದ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತಿದೆ. ಜ್ಯೋತಿಷ್ಯ ಶಾಸ್ತ್ರ ಹೇಳುವ ನಾಳೆಯ ಚಂದ್ರ ಬಹಳ ಕೆಟ್ಟ ಚಂದ್ರ ಗ್ರಹಣವಾಗಿದ್ದು ನಾಳೆಯ ದಿನ ನಾವು ಈ 5 ತಪ್ಪುಗಳನ್ನ ಮಾಡಿದರೆ ನಾವು ಮುಂದಿನ ಜೀವನದಲ್ಲಿ ದೊಡ್ಡ ಕಷ್ಟ ಮತ್ತು ನೋವನ್ನ ಅನುಭವಿಸಬೇಕಾಗುತ್ತದೆ ಎಂದು ಹೇಳಲಾಗಿದೆ. ಹಾಗಾದರೆ ನಾಳೆಯ ದಿನ ಯಾವ ಯಾವ ತಪ್ಪುಗಳನ್ನ ಮಾಡಬಾರದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ಸ್ನೇಹಿತರೆ ನಾಳೆ ಶಕ್ತಿಶಾಲಿಯಾದ ಚಂದ್ರ ಗ್ರಹಣವಾಗಿದ್ದು ನಾಳೆಯ ದಿನ ಯಾವುದೇ ಕಾರಣಕ್ಕೂ ಸೂರ್ಯಾಸ್ತದ ನಂತರ ಚಂದ್ರನನ್ನ ನೋಡಬಾರದು ಮತ್ತು ಚಂದ್ರನನ್ನ ನೋಡಿದರೆ ನಮಗೆ ಪಾಪ ಕಟ್ಟಿಕೊಳ್ಳುವ ಸಾಧ್ಯತೆ ಇದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಇನ್ನು ನಾಳೆಯ ದಿನ ಕಪ್ಪು ಬಟ್ಟೆಗಳನ್ನ ಧರಿಸಬಾರದು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ ಮತ್ತು ಕಪ್ಪು ಬಟ್ಟೆಗಳನ್ನ ಧರಿಸವುದರಿಂದ ದುಷ್ಟ ಶಕ್ತಿಯ ಪ್ರಭಾವ ನಮ್ಮಮೇಲೆ ಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇನ್ನು ಗ್ರಹಣದ ಸಮಯದಲ್ಲಿ ಯಾವುದೇ ಕಾರಣಕ್ಕೂ ಮಿಲನ ಕ್ರಿಯೆಯಲ್ಲಿ ತೊಡಗಬಾರದು ಮತ್ತು ಹೀಗೆ ಮಾಡುವುವುದು ಮುಂದಿನ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಹೇಳಬಹುದು.
ಇನ್ನು ಸೂರ್ಯಾಸ್ತದ ನಂತರ ಯಾವುದೇ ಕಾರಣಕ್ಕೂ ಪೊರಕೆಯಿಂದ ಕಸ ಗುಡಿಸುವುದು, ಕಾಲಿನ ಅಥವಾ ಕೈಬೆರಳಿನ ಉಗುರು ತೆಗೆಯುವುದು ಅಥವಾ ತಲೆ ಕೂದಲನ್ನ ಬಾಚುವ ಕೆಲಸ ಮಾಡಬಾರದು ಮತ್ತು ಈ ಕೆಲಸ ಮಾಡಿದರೆ ನಿಯಮ್ಮ ಜೀವನದಲ್ಲಿ ಶನಿಯ ಪ್ರವೇಶ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇನ್ನು ಗರ್ಭಿಣಿಯರು ಮನೆಯಿಂದ ಆಚೆ ಬಂದರೆ ಅದು ಅವರ ಹೊಟ್ಟೆಯಲ್ಲಿ ಇರುವ ಮಗುವಿನ ಮೇಲೆ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಿದೆ. ಸ್ನೇಹಿತರೆ ನಾಳೆಯ ದಿನ ಈ ತಪ್ಪುಗಳನ್ನ ಮಾಡಿದರೆ ಜೀವನದಲ್ಲಿ ಹಲವು ಸಮಸ್ಯೆ ನಿಮ್ಮನ್ನ ಕಾಡುವ ಸಾಧ್ಯತೆ ಇದೆ.