Moon Land: ಒಂದು ಎಕರೆ ಜಾಗಕ್ಕೆ ಕೇವಲ 3500 ರೂ, ಈ ರೀತಿಯಾಗಿ ಚಂದ್ರನ ಮೇಲೆ ಖರೀದಿಸಬಹುದಂತೆ ಲ್ಯಾಂಡ್.
ಇದೀಗ ಚಂದ್ರನ ಮೇಲಿನ ಭೂಮಿ ಖರೀದಿಯು ಎಷ್ಟರ ಮಟ್ಟಿಗೆ ಸತ್ಯ.
Moon Land Purchase: ಭಾರತೀಯ ಪ್ರಜೆಗಳು ಇದೀಗ ಚಂದ್ರಯಾನ 3 (Chandrayaan 3) ಯಶಸ್ಸಿನ ಸಂಭ್ರಮದಲ್ಲಿದ್ದಾರೆ. ಇಸ್ರೋದ ಮೂರನೇ ಚಂದ್ರಯಾನ ದೇಶದ ಹೆಮ್ಮೆಯನ್ನು ಇನ್ನಷ್ಟು ಹೆಚ್ಚಿಸಿದೆ. ಚಂದ್ರಯಾನ 3ಅಗಸ್ಟ್ 23 ರಂದು ಯಶಸ್ವಿಯಾಗಿ ಚಂದ್ರನನ್ನು ತಲುಪಿದೆ. ಈ ಹಿಂದೆ ಚಂದ್ರ ಗ್ರಹಣದಂದು ಮಾತ್ರ ಚಂದ್ರದ ಕುರಿತು ಸಾಕಷ್ಟು ಸುದ್ದಿಗಳು ಹಾರಾಡುತ್ತಿದ್ದವು. ಆದರೆ ಇಸ್ರೋ ಚಂದ್ರಯಾನ 3 ಯಶಸ್ವಿಯಾದಾಗಿನಿಂದ ಚಂದ್ರನ ಬಗ್ಗೆ ಸಾಕಷ್ಟು ಕುತೂಹಲಕಾರಿ ವಿಷಯಗಳು ಬಹಿರಂಗವಾಗುತ್ತಿದೆ.
ಚಂದ್ರಯಾನ 3 ಚಂದ್ರನ ಒಂದೊಂದೇ ರಹಸ್ಯದ ಬಗ್ಗೆ ಮಾಹಿತಿ ನೀಡುತ್ತಿದೆ. ಇನ್ನು ಚಂದ್ರಯಾನ 3 ಪರಿಣಾಮವಾಗಿ ಚಂದ್ರನ ಮೇಲೆ ಭೂಮಿ ಖರೀದಿಸಬಹುದೇ ಎನ್ನುವ ಪ್ರಶ್ನೆ ಬಾರಿ ಚರ್ಚೆಯನ್ನು ಹುಟ್ಟುಹಾಕಿದೆ. ಈ ಹಿಂದೆ ಕೆಲ ಬಾಲಿವುಡ್ ತಾರೆಯರು ಚಂದ್ರನ ಮೇಲೆ ಭೂಮಿ ಖರೀದಿಸಿದ್ದಾರೆ ಎನ್ನುವ ಬಗ್ಗೆ ಸುದ್ದಿಗಳು ಹರಿದಾಡಿದ್ದವು. ಇದೀಗ ಚಂದ್ರನ ಮೇಲಿನ ಭೂಮಿ ಖರೀದಿಯು ಎಷ್ಟರ ಮಟ್ಟಿಗೆ ಸತ್ಯ ಎನ್ನುವುದರ ಬಗ್ಗೆ ಮಾಹಿತಿ ತಿಳಿಯೋಣ.
ಚಂದ್ರನ ಮೇಲೆ ಅಧಿಕೃತವಾಗಿ ಭೂಮಿ ಖರೀದಿ ಸಾಧ್ಯವೇ….?
ಸಾಕಷ್ಟು ಪ್ರತಿಷ್ಠಿತ ಕಂಪನಿಗಳು ಈಗಾಗಲೇ ಚಂದ್ರನ ಮೇಲೆ ಲ್ಯಾಂಡ್ ಮಾರಾಟ ಮಾಡಿರುವುದು, ಖರೀದಿಸಿರುವ ಬಗ್ಗೆ ನಿಮಗೆ ಮಾಹಿತಿ ತಿಳಿದಿರಬಹುದು. ಹೀಗಾಗಿ ನಿಮ್ಮಲ್ಲಿ ಚಂದ್ರನ ಮೇಲೆ ಭೂಮಿ ಖರೀದಿಯ ಬಗ್ಗೆ ಪ್ರಶ್ನೆ ಹುಟ್ಟುವುದು ಸಹಜ. ಆದರೆ ಲ್ಯಾಂಡ್ ಖರೀದಿಯ ವಾಸ್ತವ ವಿಷಯದ ಬಗ್ಗೆ ನಿಮಗೆ ತಿಳಿದಿಲ್ಲ. ಬಾಹ್ಯಾಕಾಶದ ಮೇಲೆ ಭೂಮಿಯಲ್ಲಿರುವ ಯಾವುದೇ ದೇಶವು ಹಕ್ಕನ್ನು ಹೊಂದಿರುವುದಿಲ್ಲ. ಚಂದ್ರ, ನಕ್ಷತ್ರ ಮತ್ತು ಇತರ ಬಾಹ್ಯಾಕಾಶದ ಮೇಲೆ ಯಾವುದೇ ದೇಶ ಹಕ್ಕನ್ನು ಚಲಾಯಿಸುವಂತಿಲ್ಲ.
ಚಂದ್ರನ ಆಸ್ತಿಯ ಮೇಲೆ ಯಾರಿಗೂ ಹಕ್ಕಿಲ್ಲ
ಚಂದ್ರನ ಮೇಲೆ ಮೊದಲಿಗೆ ಕಾಲಿಟ್ಟ ಅಮರಿಕ, ರಷ್ಯಾ ದೇಶಗಳು ಚಂದ್ರನ ಆಸ್ತಿಯ ಮೇಲೆ ಯಾವುದೇ ಹಕ್ಕನ್ನು ಪಡೆಯಲು ಸಾಧ್ಯವಾಗಿಲ್ಲ. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕಾನೂನಿನಲ್ಲಿ ಚಂದ್ರನ ಆಸ್ತಿ ಖರೀದಿಯ ಹಕ್ಕಿನ ಬಗ್ಗೆ ವಿವರಣೆ ಇದೆ. ಬಾಹ್ಯಾಕಾಶವನ್ನು ಸ್ವಾಧೀನಪಡಿಸಿಕೊಳ್ಳದಿರುವುದು, ಶಸ್ತ್ರಾಸ್ತ್ರ ನಿಯಂತ್ರಣ, ಪರಿಶೋಧನೆಯ ಸ್ವಾತಂತ್ರ್ಯ, ಬಾಹ್ಯಾಕಾಶ ವಸ್ತುಗಳಿಂದ ಉಂಟಾದ ಹಾನಿಯ ಹೊಣೆಗಾರಿಕೆ, ಬಾಹ್ಯಾಕಾಶ ನೌಕೆ ಮತ್ತು ಗಗನಯಾತ್ರಿಗಳ ಸುರಕ್ಷತೆ ಮತ್ತು ಭದ್ರತೆ ಇವನ್ನೆಲ್ಲ ಈ ಕಾನೂನು ಒಳಗೊಂಡಿದೆ.
ಚಂದ್ರನ ಮೇಲೆ ಭೂಮಿ ಖರೀದಿಸಲು 1 ಎಕರೆ ಜಾಗಕ್ಕೆ ಎಷ್ಟು ಬೆಲೆ
ಲೂನಾರ್ ಸೊಸೈಟಿ ಇಂಟರ್ ನ್ಯಾಷನಲ್ ಮತ್ತು ಇಂಟರ್ ನ್ಯಾಷನಲ್ ಲೂನಾರ್ ಲ್ಯಾಂಡ್ಸ್ ರಿಜಿಸ್ಟ್ರಿ ಚಂದ್ರನ ಮೇಲೆ ಭೂಮಿಯನ್ನು ಮಾರಾಟ ಮಾಡುವುದಾಗಿ ಹೇಳಿಕೊಂಡಿದೆ. ಈ ಕಂಪನಿಯ ಮೂಲಕ ಅನೇಕ ಜನರು ಭೂಮಿಯನ್ನು ಖರೀದಿಸಿದ್ದಾರೆ.
Lunarregistry.com ವೆಬ್ ಸೈಟ್ ನಲ್ಲಿ ಬೇ ಆಫ್ ರೈನ್ಬೋಸ್, ಸೀ ಆಫ್ ರೈನ್ಸ್, ಲೇಕ್ ಆಫ್ ಡ್ರೀಮ್ಸ್, ಸೀ ಆಫ್ ಸಿರಿನಿಟಿ ಸೇರಿದಂತೆ ಇನ್ನಿತರ ಪ್ರದೇಶಗಲ್ಲಿ ಜಾಮೀನು ಖರೀದಿಸುವ ಆಯ್ಕೆ ಲಭ್ಯವಾಗಲಿದೆ. Lunarregistry.com ಪ್ರಕಾರ, ಚಂದ್ರನ ಮೇಲೆ 1 ಎಕರೆ ಭೂಮಿ ಖರೀದಿಸಲು 30 ರಿಂದ 40 ಡಾಲರ್ ಅನ್ನು ನಿಗದಿಪಡಿಸಲಾಗಿದೆ. ಅಂದರೆ ಭಾರತೀಯ ರೂ. ಗಳಲ್ಲಿ 2500 ರಿಂದ 3500 ರೂಗಳಲ್ಲಿ 1 ಎಕರೆ ಭೂಮಿ ಖರೀದಿಸಲು ಸಾಧ್ಯವಾಗುತ್ತದೆ.