Moon Land: ಈಗ ಚಂದ್ರನ ಮೇಲೆ ಖರೀದಿಸಬಹುದು ಲ್ಯಾಂಡ್, 1 ಎಕರೆ ಜಾಗಕ್ಕೆ ಎಷ್ಟು ಬೆಲೆ ಗೊತ್ತಾ…?

ಚಂದ್ರನ ಮೇಲೆ ಭೂಮಿ ಖರೀದಿಸುವುದು ಹೇಗೆ ಮತ್ತು ಬೆಲೆ ಎಷ್ಟು.

Buy Land In Moon: ಭಾರತದಲ್ಲಿ ಚಂದ್ರಯಾನ 3 (Chandrayana 3) ಯಶಸ್ಸು ಕಾಣುತ್ತಿದೆ. ಚಂದ್ರಯಾನ 3 ಜನಸಾಮಾನ್ಯರಿಗೆ ತಿಳಿದಿರದ ಅನೇಕ ರಹಸ್ಯವನ್ನು ಬಹಿರಂಗಪಡಿಸಲಿದೆ. ಚಂದ್ರಯಾನ 3 ಈಗಾಗಲೇ ಯಶಸ್ಸು ಕಂಡಿದ್ದು ಈ ಕಾರಣಕ್ಕೆ ಚಂದ್ರನ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಇಸ್ರೋದ ಚಂದ್ರಯಾನ ಭಾರಕ್ಕೆ ಹೆಮ್ಮೆಯನ್ನು ತಂದುಕೊಟ್ಟಿದೆ.

ಚಂದ್ರಯಾನ 3 ಪರಿಣಾಮವಾಗಿ ಚಂದ್ರನ ಮೇಲೆ ಭೂಮಿ ಖರೀದಿಸಬಹುದೇ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿದೆ. ಈಗಾಗಲೇ ಅನೇಕರು ಈ ಬಗ್ಗೆ ಚರ್ಚಿಸಿರುತ್ತಾರೆ. ಚಂದ್ರನ ಮೇಲು ಭೂಮಿ ಖರೀದಿಸಬಹುದೇ ಎನ್ನುವ ಪ್ರಶ್ನೆಗೆ ಇದೀಗ ಮಾಹಿತಿ ತಿಳಿದುಕೊಳ್ಳೋಣ.

Moon Land Sale
Image Credit: Zoomnews

ಚಂದ್ರನ ಮೇಲೆ ಭೂಮಿ ಖರೀದಿಸಲು ಸಾಧ್ಯವೇ
ಸಾಕಷ್ಟು ಪ್ರತಿಷ್ಠಿತ ಕಂಪನಿಗಳು ಈಗಾಗಲೇ ಚಂದ್ರನ ಮೇಲೆ ಲ್ಯಾಂಡ್ ಮಾರಾಟ ಮಾಡಿರುವುದು, ಖರೀದಿಸಿರುವ ಬಗ್ಗೆ ನಿಮಗೆ ಮಾಹಿತಿ ತಿಳಿದಿರಬಹುದು. ಹೀಗಾಗಿ ನಿಮ್ಮಲ್ಲಿ ಚಂದ್ರನ ಮೇಲೆ ಭೂಮಿ ಖರೀದಿಯ ಬಗ್ಗೆ ಪ್ರಶ್ನೆ ಹುಟ್ಟುವುದು ಸಹಜ. ಆದರೆ ಲ್ಯಾಂಡ್ ಖರೀದಿಯ ವಾಸ್ತವ ವಿಷಯದ ಬಗ್ಗೆ ನಿಮಗೆ ತಿಳಿದಿಲ್ಲ. ಬಾಹ್ಯಾಕಾಶದ ಮೇಲೆ ಭೂಮಿಯಲ್ಲಿರುವ ಯಾವುದೇ ದೇಶವು ಹಕ್ಕನ್ನು ಹೊಂದಿರುವುದಿಲ್ಲ. ಚಂದ್ರ, ನಕ್ಷತ್ರ ಮತ್ತು ಇತರ ಬಹ್ಯಾಕಾಶದ ಮೇಲೆ ಯಾವುದೇ ದೇಶ ಹಕ್ಕನ್ನು ಚಲಾಯಿಸುವಂತಿಲ್ಲ.

ಬಾಹ್ಯಾಕಾಶದ ಹಕ್ಕಿನ ಬಗ್ಗೆ ಕಾನೂನು ಹೇಳುವುದೇನು
ಅಂತಾರಾಷ್ಟ್ರೀಯ ಬಾಹ್ಯಾಕಾಶ ಕಾನೂನಿನಲ್ಲಿ ಹಕ್ಕಿನ ಬಗ್ಗೆ ವಿವರಣೆ ಇದೆ. ಬಾಹ್ಯಾಕಾಶವನ್ನು ಸ್ವಾಧೀನಪಡಿಸಿಕೊಳ್ಳದಿರುವುದು, ಶಸ್ತ್ರಾಸ್ತ್ರ ನಿಯಂತ್ರಣ, ಪರಿಶೋಧನೆಯ ಸ್ವಾತಂತ್ರ್ಯ, ಬಾಹ್ಯಾಕಾಶ ವಸ್ತುಗಳಿಂದ ಉಂಟಾದ ಹಾನಿಯ ಹೊಣೆಗಾರಿಕೆ, ಬಾಹ್ಯಾಕಾಶ ನೌಕೆ ಮತ್ತು ಗಗನಯಾತ್ರಿಗಳ ಸುರಕ್ಷತೆ ಮತ್ತು ಭದ್ರತೆ ಇವನ್ನೆಲ್ಲ ಈ ಕಾನೂನು ಒಳಗೊಂಡಿದೆ.

Is it possible to buy land on the moon?
Image Credit: Popsci

ಚಂದ್ರನ ಮೇಲೆ ಭೂಮಿ ಖರೀದಿಸಲು 1 ಎಕರೆ ಜಾಗಕ್ಕೆ ಎಷ್ಟು ಬೆಲೆ
ಲೂನಾರ್ ಸೊಸೈಟಿ ಇಂಟರ್ ನ್ಯಾಷನಲ್ ಮತ್ತು ಇಂಟರ್ ನ್ಯಾಷನಲ್ ಲೂನಾರ್ ಲ್ಯಾಂಡ್ಸ್ ರಿಜಿಸ್ಟ್ರಿ ಚಂದ್ರನ ಮೇಲೆ ಭೂಮಿಯನ್ನು ಮಾರಾಟ ಮಾಡುವುದಾಗಿ ಹೇಳಿಕೊಂಡಿದೆ. ಈ ಕಂಪನಿಯ ಮೂಲಕ ಅನೇಕ ಜನರು ಭೂಮಿಯನ್ನು ಖರೀದಿಸಿದ್ದಾರೆ. Lunarregistry.com ಪ್ರಕಾರ, ಚಂದ್ರನ ಮೇಲೆ 1 ಎಕರೆ ಭೂಮಿ ಖರೀದಿಸಲು 37.50 ಡಾಲರ್ ಅಂದರೆ ಭಾರತೀಯ ರೂ. ಗಳಲ್ಲಿ 3080 ರೂ. ಆಗಿದೆ. ಚಂದ್ರನ ಮೇಲೆ ಮಾಲೀಕತ್ವವನ್ನು ಹೊಂದಲು ಯಾವುದೇ ದೇಶದವರಿಗೆ ಹಕ್ಕು ಇರುವುದಿಲ್ಲ.

Join Nadunudi News WhatsApp Group

Join Nadunudi News WhatsApp Group