House Loan: ಈ ನಿಯಮದ ಅಡಿಯಲ್ಲಿ ಗೃಹಸಾಲ ಪಡೆದರೆ ಯಾವುದೇ ಮರುಪಾವತಿ ಮಾಡುವ ಅಗತ್ಯ ಇಲ್ಲ.

ಅಡಮಾನದ ಅಡಿಯಲ್ಲಿ ಗೃಹಸಾಲ ಪಡೆದುಕೊಂಡರೆ ಯಾವುದೇ ಮರುಪಾವತಿ ಮಾಡುವ ಅಗತ್ಯ ಇಲ್ಲ.

Mortgage Loan Rules: ಗೃಹಸಾಲ (House Loan) ವನ್ನು ಪಡೆದುಕೊಳ್ಳುವವರಿಗೆ ಹೊಸ ಮಾಹಿತಿ ಒಂದು ಹೊರ ಬಿದ್ದಿದೆ. ಸಾಕಷ್ಟು ಜನರು ಹೆಚ್ಚಾಗಿ ಗೃಹ ಸಾಲವನ್ನು ತೆಗೆದುಕೊಳ್ಳುತ್ತಾರೆ. ಗೃಹ ಸಾಲವನ್ನು ತೆಗೆದುಕೊಳ್ಳುವವರು ಬ್ಯಾಂಕ್ ಗೆ ಹೋಗಿ ಇಎಂಐ ಪಾವತಿಸಬೇಕಾಗುತ್ತದೆ.

ಆದರೆ ರಿಸರ್ವ್ ಮಾರ್ಟ್ಗೆಜ್ ಗೃಹ ಸಾಲದಿಂದ ಇಎಂಐ ಅನ್ನು ಬ್ಯಾಂಕ್ ಗಳು ಪಾವತಿಸುತ್ತದೆ. ರಿಸರ್ವ್ ಮಾರ್ಟ್ಗೆಜ್ ಗೃಹ ಸಾಲ (Mortgage Loan) ಪಡೆದುಕೊಂಡರೆ ಸಾಕಷ್ಟು ಅನುಕೂಲಗಳು ಆಗಲಿದೆ.

Mortgage Loan Rules
Image Credit: idfcfirstbank

ಗೃಹಸಾಲ ಪಡೆದುಕೊಳ್ಳುವವರಿಗೆ ಹೊಸ ಮಾಹಿತಿ
ಗೃಹ ಸಾಲ ಪಡೆದುಕೊಳ್ಳುವವರು ರಿಸರ್ವ್ ಮಾರ್ಟ್ಗೆಜ್ ಸಾಲವನ್ನು ಪಡೆದುಕೊಂಡರೆ ಬ್ಯಾಂಕ್ ಗಳು ನಿಮಗೆ ಇಎಂಐ ಅನ್ನು ಪಾವತಿಸುತ್ತದೆ. ಇದಲ್ಲದೆ ಅದನ್ನು ಮರುಪಾವತಿ ಮಾಡುವ ಅವಶ್ಯಕತೆ ಇಲ್ಲ. ಈ ಅವಕಾಶವೂ ಸ್ವಂತ ವಾಸ ಮನೆಯನ್ನು ಹೊಂದಿರುವ ಜನರಿಗೆ ಮಾತ್ರ ಲಭ್ಯವಾಗಿರುತ್ತದೆ. ಇನ್ನು ಬಾಡಿಗೆ ಮನೆ ಇರುವವರು ಈ ಯೋಜನೆಗೆ ಸೇರಲು ಆಗುವುದಿಲ್ಲ.

ರಿಸರ್ವ್ ಮಾರ್ಟ್ಗೆಜ್ ಗೃಹಸಾಲ
ರಿಸರ್ವ್ ಮಾರ್ಟ್ಗೆಜ್ ಸಾಲದ ಅಡಿಯಲ್ಲಿ ಬ್ಯಾಂಕ್ ಗಳು ಕೋಟಿ ಕೋಟಿ ರೂಪಾಯಿ ಸಾಲ ನೀಡುತ್ತವೆ. ಸಾಲವನ್ನು ಸಮಾನ ಕಂತುಗಳಾಗಿ ವಿಂಗಡಿಸಿ ಮತ್ತು ಗರಿಷ್ಠ 20 ವರ್ಷಗಳ ವರೆಗೆ EMI ರೂಪದಲ್ಲಿ ಮರುಪಾವತಿ ಮಾಡುತ್ತದೆ.ಆದಾಯ ಇಲ್ಲದ ವೃದ್ಧರು ಮತ್ತು ಸ್ವಂತ ವಾಸವಿರುವ ಮನೆಯವರು ಆರ್ಥಿಕ ಸಂಕಷ್ಟ ಎದುರಿಸಬಾರದು ಎಂದು ಕೇಂದ್ರ ಸರ್ಕಾರ ಈ ಯೋಜನೆ ಹೊರ ತಂದಿದೆ.

New information for home loan borrowers
Image Credit: askbankifsccode

ಆದ್ದರಿಂದ ಸ್ವಂತ ಮನೆ ಹೊಂದಿರುವವರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರು ರಿಸರ್ವ್ ಮಾರ್ಟ್ಗೆಜ್ ಸಾಲವನ್ನು ಪಡೆಯಬಹುದು. ಸಾಲ ಪಡೆದ ನಂತರವೂ ಸಾಲಗಾರ ಅದೇ ಮನೆಯಲ್ಲಿ ಉಳಿಯಬಹುದು. ಬ್ಯಾಂಕ್ ಬಾಡಿಗೆ ಪಾವತಿಸಬೇಕಾಗುವುದಿಲ್ಲ.

Join Nadunudi News WhatsApp Group

Join Nadunudi News WhatsApp Group