Property Law: ಮಗನ ಆಸ್ತಿಯಲ್ಲಿ ತಾಯಿಗೆ ಎಷ್ಟು ಹಕ್ಕಿದೆ…? ಹೈಕೋರ್ಟ್ ಮಹತ್ವದ ಆದೇಶ.
ಮಗನ ಆಸ್ತಿಯಲ್ಲಿ ತಾಯಿಯ ಹಕ್ಕಿನ ಬಗ್ಗೆ ಹೈ ಕೋರ್ಟ್ ಮಹತ್ವದ ಆದೇಶ .
Mother’s Right In Son’s Property: ಆಸ್ತಿಗೆ ಸಂಬಂಧಿಸಿದಂತೆ ಭಾರತೀಯ ಕಾನೂನಿನಲ್ಲಿ ವಿವಿಧ ನಿಯಮಗಳನ್ನು ಅಳವಡಿಸಲಾಗಿದೆ. ಭಾರತದಲ್ಲಿ ಯಾರೊಬ್ಬರೂ ಆಸ್ತಿಯನ್ನು ಹಂಚಿಕೊಳ್ಳಬೇಕಿದ್ದರು ಕಾನೂನಿನ ಪ್ರಕಾರವೇ ಆಸ್ತಿ ಹಂಚಿಕೆ ಆಗಬೇಕಿದೆ.
ಆಸ್ತಿ ಹಂಚಿಕೊಳ್ಳುವ ಸಮಯದಲ್ಲಿ ಕಾನೂನಿನ ನಿಯಮವನ್ನು ಮೀರಿ ನಡೆಯಬಾರದು. ಆದಾಗ್ಯೂ ಕಾನೂನು ಬಾಹಿರವಾಗಿ ಅಸ್ತಿ ಹಂಚಿಕೆಯಾದರೆ, ಆಸ್ತಿ ಹಂಚಿಕೆಯಲ್ಲಿ ಯಾರಿಗೆ ಮೋಸ ಮಾಡಲಾಗಿದೆ ಅನಂತವರು ಕಾನೂನಿನ ಪ್ರಕಾರ ತಮ್ಮ ಹಕ್ಕು ಪಡೆದುಕೊಳ್ಳಬಹುದು.
ಪುತ್ರನ ಆಸ್ತಿಯಲ್ಲಿ ತಾಯಿಯ ಆಸ್ತಿಯ ಹಕ್ಕು
ಇನ್ನು ದೇಶದಲ್ಲಿ ಸ್ವಯಾರ್ಜಿತ ಆಸ್ತಿ ಹಾಗೂ ಪಿತ್ರಾರ್ಜಿತ ಆಸ್ತಿ ಎರಡಕ್ಕೂ ಅದರದ್ದೇ ಆದ ಕಾನೂನುಗಳಿವೆ. ಅನುವಂಶೀಯವಾಗಿ ಬಂದ ಪಿತ್ರಾರ್ಜಿತ ಆಸ್ತಿಯ ಹಕ್ಕು ಮಕ್ಕಳಿಗೆ ಹುಟ್ಟಿನಿಂದಲೇ ಬಂದಿರುತ್ತದೆ.
ಇನ್ನು ತಂದೆ ತಾಯಿಯ ಆಸ್ತಿಯಲ್ಲಿ ಮಕ್ಳು ಹೇಗೆ ತಮ್ಮ ಹಕ್ಕನ್ನು ಹೊಂದಿರುತ್ತಾರೋ ಅದೇ ರೀತಿ ಮಕ್ಕಳ ಆಸ್ತಿಯಲ್ಲಿ ಕೂಡ ಪೋಷಕರು ತಮ್ಮ ಹಕ್ಕನ್ನು ಹೊಂದಿರುತ್ತಾರೆ. ಸದ್ಯ ಭಾರತೀಯ ನ್ಯಾಯಾಯಲಯದಲ್ಲಿ ಪುತ್ರನ ಆಸ್ತಿಯಲ್ಲಿ ತಾಯಿಗೆ ಯಾವ ರೀತಿ ಹಕ್ಕಿದೆ ಎನ್ನುವ ಬಗ್ಗೆ ತನಿಖೆ ನಡೆದಿದೆ. ತಾಯಿ ಮತ್ತು ಮಗನ ಆಸ್ತಿ ಹಂಚಿಕೆಯ ಪ್ರಕರಣವೊಂದು ಕೋರ್ಟ್ ಮೆಟ್ಟಿಲೇರಿದ್ದು, ನ್ಯಾಯಾಲಯ ಈ ಬಗ್ಗೆ ಮಹತ್ವದ ತೀರ್ಪನ್ನು ಹೊರಡಿಸಿದೆ.
ಪುತ್ರನ ಆಸ್ತಿಯಲ್ಲಿ ತಾಯಿಗೂ ಸಂಪೂರ್ಣ ಅಧಿಕಾರವಿದೆ
ಸದ್ಯ ಮೃತಪಟ್ಟ ಪುತ್ರನ ಪಾಲಿನ ಆಸ್ತಿಯಲ್ಲಿ ತಾಯಿಯು ಪಾಲು ಪಡೆಯಲು ಹಕ್ಕನ್ನು ಹೊಂದಿಲ್ಲ ಎಂದು ಕೋರ್ಟ್ ನಲ್ಲಿ ಪ್ರಕರಣವೊಂದು ದಾಖಲೆಯಾಗಿದೆ. ಈ ದೂರಿನ ವಿರುದ್ಧ ಸುಶೀಲಮ್ಮ (ತಾಯಿ) ಹೈಕೋರ್ಟ್ ಮನವಿ ಸಲ್ಲಿಸಿದ್ದಾರೆ. ಸುಶೀಲಮ್ಮ ಸಲ್ಲಿಸಿದ ಅರ್ಜಿಯನ್ನು ಕೂಲಂಕುಷವಾಗಿ ಗಮನಿಸಿ ನ್ಯಾಯಾಲಯ ಮಹತ್ವದ ತೀರ್ಪನ್ನು ನೀಡಿದೆ.
“ಸುಶೀಲಮ್ಮನವರು ಮೃತ ಪುತ್ರನ ಮೊದಲ ವರ್ಗದ ವಾರಸುದಾರರಾಗುತ್ತಾರೆ. ಮೃತ ವ್ಯಕ್ತಿಯು ತನ್ನ, ತಾಯಿ, ಪತ್ನಿ ಪುತ್ರರನ್ನು ಅಗಲಿದ್ದು, ಹಿಂದೂ ಅವಿಭಾಜ್ಯ ಕುಟುಂಬದಲ್ಲಿ ತಾಯಿ ಮೊದಲನೇ ವರಾಗದ ವಾರಸುದಾರರಾಗಲಿದ್ದಾರೆ. ಹೀಗಾಗಿ ಪುತ್ರನ ಆಸ್ತಿಯಲ್ಲಿ ಪಾಲು ಪಡೆಯಲು ತಾಯಿ ಅರ್ಹಳು” ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ.