Moto: 9000 ಸಾವಿರಕ್ಕೆ ಖರೀದಿಸಿ 5000 mAh ಬ್ಯಾಟರಿ ಹೊಂದಿರುವ ಈ ಮೊಬೈಲ್, ಸ್ವಾತಂತ್ರ್ಯ ದಿನದ ಆಫರ್.

ಮೊಟೊರೊಲಾದ ಮೋಟೋ E13 ಸ್ಮಾರ್ಟ್ ಫೋನ್ ಫ್ಲಿಪ್ ಕಾರ್ಟ್ ನಲ್ಲಿ ಅಗ್ಗದ ಬೆಲೆಗೆ ಖರೀದಿಗೆ ಸಿಗುತ್ತಿದೆ.

Moto E13 Smartphone Flipkart Offer: ಜನಪ್ರಿಯ ಮೊಬೈಲ್ ತಯಾರಕ ಕಂಪನಿಯಾದ ಮೊಟೊರೊಲಾ ಹೊಸ ಹೊಸ ಸ್ಮಾರ್ಟ್ ಫೋನ್ ನನ್ನು ಪರಿಚಯಿಸುವ ಮೂಲಕ ಖ್ಯಾತಿ ಪಡೆದಿದೆ. ಇತ್ತೀಚಿಗೆ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಹೊಸ ಕಂಪನಿಯ ಸ್ಮಾರ್ಟ್ ಫೋನುಗಳು ಬಿಡುಗಡೆಯಾಗಿದ್ದು, ಮೊಟೊರೊಲಾ (Motorola) ಕೂಡ ಹೊಸ ಹೊಸ ಮಾದರಿಯ ಸ್ಮಾರ್ಟ್ ಫೋನುಗಳನ್ನು ಬಿಡುಗಡೆ ಮಾಡಿದೆ. ಈಗ ಫ್ಲಿಪ್ ಕಾರ್ಟ್ ನಲ್ಲಿ ಹಲವು ಕಂಪನಿಯ ಸ್ಮಾರ್ಟ್ ಫೋನುಗಳು ರಿಯಾಯಿತಿಯಲ್ಲಿ ಖರೀದಿಗೆ ಸಿಗುತ್ತಿದೆ.

Moto E13 smartphone features
Image Credit: Smartprix

ಮೋಟೋ E13 ಸ್ಮಾರ್ಟ್ ಫೋನ್ ನ ಬೆಲೆ
ಇದೀಗ ಮೊಟೊರೊಲಾದ ಮೋಟೋ E13 ಸ್ಮಾರ್ಟ್ ಫೋನ್ ಫ್ಲಿಪ್ ಕಾರ್ಟ್ ನಲ್ಲಿ ಅಗ್ಗದ ಬೆಲೆಗೆ ಖರೀದಿಗೆ ಸಿಗುತ್ತಿದೆ. ಆಗಸ್ಟ್ 16 ರಿಂದ ಮೋಟೋ E13 ಸ್ಮಾರ್ಟ್ ಫೋನ್ ಬಿಡುಗಡೆ ಪ್ರಾರಂಭವಾಗಲಿದೆ. 2GB RAM ಮತ್ತು 64GB ಸ್ಟೋರೇಜ್ ಆಯ್ಕೆಗೆ 6999 ರೂ., 4GB RAM ಮತ್ತು 64GB ಸ್ಟೋರೇಜ್ ಆಯ್ಕೆಗೆ 7999 ರೂ., ಆಗಿದೆ. ಈ ಮೋಟೋ E13 ಸ್ಮಾರ್ಟ್ ಫೋನ್ ಅರೋರಾ ಗ್ರೀನ್, ಕಾಸ್ಮಿಕ್ ಬ್ಲಾಕ್ ಮತ್ತು ಕ್ರೆಯಂ ವೈಟ್ ಬಣ್ಣಗಳಲ್ಲಿ ಲಭ್ಯವಾಗಲಿದೆ.

ಮೋಟೋ E13 ಸ್ಮಾರ್ಟ್ ಫೋನ್ ನ ವಿಶೇಷತೆ
ಮೋಟೋ E13 ಸ್ಮಾರ್ಟ್ ಫೋನ್ 6.5cm HD + ಡಿಸ್ಪ್ಲೇ ಯನ್ನು ಹೊಂದಿದೆ. 13mp ಹಿಂಬದಿಯ ಕ್ಯಾಮೆರಾ ಮತ್ತು 5MP ಮುಂಭಾಗದ ಕ್ಯಾಮೆರಾ ರಚನೆಯನ್ನು ಈ ಸ್ಮಾರ್ಟ್ ಫೋನ್ ಹೊಂದಿದೆ. ಅಲ್ಲದೆ ಈ ಸ್ಮಾರ್ಟ್ ಫೋನ್ 4 GB RAM , 64 GB RAM ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್ ಫೋನ್ 5000 mAh ಬ್ಯಾಟರಿ ಅನ್ನು ಹೊಂದಿದೆ. ಅಲ್ಲದೆ ಈ ಸ್ಮಾರ್ಟ್ ಫೋನ್ ನಲ್ಲಿ Unisoc T606 ಪ್ರೊಸೆಸರ್ ಸಹ ಇದೆ. ಇನ್ನು ಫ್ಲಿಪ್ ಕಾರ್ಟ್ ನಲ್ಲಿ ನೀವು ಆಕ್ಸಿಸ್ ಬ್ಯಾಂಕ್ ಕಾರ್ಡ್ ಮೂಲಕ 5 % ಕ್ಯಾಶ್ ಬ್ಯಾಕ್ ಅನ್ನು ಪಡೆಯಬಹುದು.

Moto E13 Smartphone Flipkart Offer
Image Credit: Techupdate3

ಇನ್ನು 4GB RAM ಮತ್ತು 128GB ಸ್ಟೋರೇಜ್ ಕಾಂಫಿಗರೇಷನ್ ಗಾಗಿ 9,999 ನಿಗಧಿಪಡಿಸಲಾಗಿದೆ. ಇನ್ನು ಈ ಸ್ಮಾರ್ಟ್ ಫೋನ್ ನಲ್ಲಿ ಡಾಲ್ಫಿ ಆತ್ಮಸ್ ಆಡಿಯೋ, ಡ್ಯುಯಲ್ ಬ್ಯಾಂಡ್, ವೈ-ಫೈ ಕನೆಕ್ಟಿವಿಟಿ, ಸೇರಿದಂತೆ ಇನ್ನಿತರ ಫೀಚರ್ ಗಳನ್ನೂ ಅಳವಡಿಸಲಾಗಿದೆ. ನೀವು ಈ ಮೋಟೋ E13 ಸ್ಮಾರ್ಟ್ ಫೋನ್ ಅನ್ನು ಖರೀದಿಸಲು ಬಯಸಿದರೆ ಜನಪ್ರಿಯ ಆನ್ಲೈನ್ ಮಾರಾಟ ಕಂಪೆನಿಯಾದ ಫ್ಲಿಪ್ ಕಾರ್ಟ್ ನಿಮಗೆ ಅತಿ ಕಡಿಮೆ ಬೆಲೆಗೆ ನೀಡುತ್ತಿದೆ.

Join Nadunudi News WhatsApp Group

Join Nadunudi News WhatsApp Group