Moto G14: ಮೋಟೋ G14 ಸ್ಮಾರ್ಟ್ ಫೋನ್ ಬಿಡುಗಡೆ.

ಮೋಟೋ G14 ಸ್ಮಾರ್ಟ್ ಫೋನ್ ಖರೀದಿಯ ಮೇಲೆ ಬಂಪರ್ ರಿಯಾಯಿತಿ.

Moto G14 Smartphone: ದೇಶದ ಪ್ರತಿಷ್ಠ ಸ್ಮಾರ್ಟ್ ಫೋನ್ ತಯಾರಕ ಕಂಪನಿಯಾದ ಮೊಟೊರೊಲಾ (Motorola) ಇದೀಗ ಬಜೆಟ್ ಬೆಲೆಯಲ್ಲಿ ಸ್ಮಾರ್ಟ್ ಅನ್ನು ಬಿಡುಗಡೆ ಮಾಡಿದೆ. ಮಾರುಕಟ್ಟೆಗಳಲ್ಲಿ ಸ್ಮಾರ್ಟ್ ಫೋನ್ ಗಳ ಮೇಲಿನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದಂತೆ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಕಂಪನಿಗಳು ಹಲವು ಮಾದರಿಯ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡುತ್ತದೆ.

ಇನ್ನು ಮಾರುಕಟ್ಟೆಯಲ್ಲಿ ಹೊಸ ಮಾದರಿಯ ಫೋನ್ ಗಳು ಲಗ್ಗೆ ಇಡುತ್ತಿದಂತೆ ಗ್ರಾಹಕರು ಖರೀದಿಸಲು ಬಯಸುತ್ತಾರೆ. ಇನ್ನು ಯಾವ ಕಂಪನಿಯ ಸ್ಮಾರ್ಟ್ ಫೋನ್ ಕಡಿಮೆ ಬೆಲೆಗೆ ಲಭ್ಯವಾಗಲಿದೆ ಎನ್ನುವ ಬಗ್ಗೆ ಎಲ್ಲರು ಗಮನ ಹರಿಸುತ್ತಾರೆ. ಇದೀಗ ಮೊಟೊರೊಲಾ ಕಂಪನಿ ತನ್ನ G ಸರಣಿಯಲ್ಲಿ ಹೊಸ ಮಾದರಿಯ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆಗೊಳಿಸಿದೆ. ಕಂಪನಿಯು ಹೊಸ ಸ್ಮಾರ್ಟ್ ಫೋನ್ ನಲ್ಲಿ ವಿಶೇಷ ಫೀಚರ್ ಗಳನ್ನೂ ಅಳವಡಿಸಿದೆ.

Bumper discount on purchase of Moto G14 smartphone.
Image Credit: Jagran

ಮೋಟೋ G14 ಸ್ಮಾರ್ಟ್ ಫೋನ್
ಜನಪ್ರಿಯ ಇ ಕಾಮರ್ಸ್ ಫ್ಲಾಟ್ ಫಾರ್ಮ್ ಆಗಿರುವ ಫ್ಲಿಪ್ ಕಾರ್ಟ್ ಇತ್ತೀಚಿಗೆ ಸ್ಮಾರ್ಟ್ ಫೋನ್ ಖರೀದಿಯ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಫ್ಲಿಪ್ ಕಾರ್ಟ್ ಈ ಮೋಟೋ G14(Moto G14) ಸ್ಮಾರ್ಟ್ ಫೋನ್ ಖರೀದಿಯ ಮೇಲೆ ಬಂಪರ್ ರಿಯಾಯಿತಿಯನ್ನು ಘೋಷಿಸಿದೆ. 4GB RAM ಹಾಗೂ 128GB ಸ್ಟೋರೇಜ್ ಹೊಂದಿದ್ದು ಈ ರೂಪಾಂತರದ ಬೆಲೆಯೂ 9,999 ರೂ. ಗೆ ಲಭ್ಯವಾಗಲಿದೆ. ಆದರೆ ಫ್ಲಿಪ್ ಕಾರ್ಟ್ ನ ಆಫರ್ ನ ಮೂಲಕ ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಹಿವಾಟಿನ ಮೇಲೆ 750 ತ್ವರಿತ ರಿಯಾಯಿತಿಯನ್ನು ಪಡೆಯಬಹುದು.

Moto G14 smartphone price
Image Credit: Sparrowsnews

ಮೋಟೋ G14 ಸ್ಮಾರ್ಟ್ ಫೋನ್ ವಿಶೇಷತೆ
ಮೋಟೋ G14 ಸ್ಮಾರ್ಟ್ ಫೋನ್ 6.5 ಇಂಚಿನ HD ಡಿಸ್ ಪ್ಲೇ ಅನ್ನು ಹೊಂದಿದೆ. ಇದು 90 HZ ರಿಫ್ರೆಶ್ ದರದೊಂದಿಗೆ 1,080 x 2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಷನ್ ಅನ್ನು ಒಳಗೊಂಡಿದೆ. ಮೊಟೊ G14 ಮೊಬೈಲ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 680 SoC ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲಿದೆ. 20W ಟರ್ಬೊಪವರ್ ಫಾಸ್ಟ್ ಚಾರ್ಜಿಂಗ್ ಆಯ್ಕೆ ಹೊಂದಿದ್ದು 5000 mAh ಬ್ಯಾಟರಿ ಸಾಮರ್ಥ್ಯವನ್ನು ಒಳಗೊಂಡಿದೆ.

Join Nadunudi News WhatsApp Group

Join Nadunudi News WhatsApp Group