Moto G: ಕೈಗೆಟುವ ಬೆಲೆಗೆ 6000 mAh ಬ್ಯಾಟರಿ ಮೊಬೈಲ್ ಲಾಂಚ್ ಮಾಡಿದ ಮೋಟೋ, ಸಂಕಷ್ಟದಲ್ಲಿ ಐಫೋನ್.
ಸ್ಯಾಮ್ ಸಂಗ್ ಮತ್ತು ಐಫೋನ್ ಗೆ ಆಘಾತ ನೀಡಲು ಬಂತು 6000 mAh ಬ್ಯಾಟರಿ ಇರುವ ಅಗ್ಗದ ಮೋಟೋ ಮೊಬೈಲ್.
Moto G54 5G Price: ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಬಳಕೆ ಹೆಚ್ಚಾಗಿದೆ. ಸ್ಮಾರ್ಟ್ ಫೋನ್, ಸ್ಮಾರ್ಟ್ ವಾಚ್ ಸೇರಿದಂತೆ ಇನ್ನಿತರ ವಸ್ತುಗಳ ಮೇಲಿನ ಬೇಡಿಕೆ ಹೆಚ್ಚುತ್ತಿದೆ. ಈ ಡಿಜಿಟಲ್ ಯುಗದಲ್ಲಿ ದಿನದಿಂದ ದಿನಕ್ಕೆ ಮೊಬೈಲ್ ಬಳಕೆ ಹೆಚ್ಚುತ್ತಿದೆ. ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರ ಕೈಯಲ್ಲಿ ಕೂಡ ಸ್ಮಾರ್ಟ್ ಫೋನ್ ಗಳು ಇರುತ್ತದೆ.
ಈ ಸ್ಮಾರ್ಟ್ ಫೋನ್ ಗಳ ಮೇಲಿನ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆ ವಿವಿಧ ಸ್ಮಾರ್ಟ್ ಫೋನ್ ತಯಾರಕ ಕಂಪನಿಗಳು ವಿಭಿನ್ನ ಮಾದರಿಯ ಸ್ಮಾರ್ಟ್ ಫೋನ್ ಗಳನ್ನೂ ಮಾರುಕಟ್ಟೆಗೆ ಪರಿಚಯಿಸುತ್ತಿವೆ. ಈಗಾಗಲೇ ಮಾರುಕಟ್ಟೆಯಲ್ಲಿ ಹಲವು ವಿಭಿನ್ನ ವಿನ್ಯಾಸದ ಸ್ಮಾರ್ಟ್ ಫೋನ್ ಗಳು ಲಭ್ಯವಿದೆ.
ಇತ್ತೀಚೆಗಂತೂ ವಿವೊ, ರಿಯಲ್ ಮೀ, ರೆಡ್ ಮೀ, ಸೇರಿದಂತೆ ಇನ್ನಿತರ ಸ್ಮಾರ್ಟ್ ತಯಾರಕ ಬ್ರಾಂಡ್ ಗಳು ವಿಭಿನ್ನ ವಿನ್ಯಾಸದ ಹೆಚ್ಚಿನ ಸ್ಟೋರೇಜ್ ನೀಡುವ ಮೊಬೈಲ್ ಫೋನ್ ಗಳನ್ನೂ ಬೆಜೆಟ್ ಬೆಲೆಗೆ ಬಿಡುಗಡೆ ಮಾಡುತ್ತಿದೆ. ಇದೀಗ ದೇಶದಲ್ಲಿ ಹೆಚ್ಚು ಜನಪ್ರಿಯತೆ ಪಡೆದಿರುವ ಮೋಟಾರಲಾ (Motorola) ಕಂಪನಿ ತನ್ನ ಹೊಸ ಮಾದರಿಯ ಸ್ಮಾರ್ಟ್ ಫೋನ್ ಅನ್ನು ಪರಿಚಸಲು ಸಿದ್ಧತೆ ನಡೆಸಿದೆ.
ಮೋಟೋ G54 5G ಸ್ಮಾರ್ಟ್ ಫೋನ್
ಕಂಪನಿಯು ಇದೀಗ ನೂತನ ಮಾದರಿಯ ಮೋಟೋ G54 5G ಸ್ಮಾರ್ಟ್ ಫೋನ್ ಬಿಡುಗಡೆಗೆ ದಿನಾಂಕ ನಿಗದಿಪಡಿಸಿದೆ. ಸೆಪ್ಟೆಂಬರ್ 5 ಮೋಟೋ G54 5G ಸ್ಮಾರ್ಟ್ ಫೋನ್ ದೇಶಿಯ ಮಾರುಕಟ್ಟೆಗೆ ಗ್ರಾಂಡ್ ಎಂಟ್ರಿ ಕೊಡಲಿದೆ. ಈಗಾಗಲೇ ಕಂಪನಿಯು ಸಮರ್ಥ ಫೋನ್ ನ ಬಣ್ಣ ಹಾಗೂ ಫೀಚರ್ ನ ಬಗ್ಗೆ ಮಾಹಿತಿ ನೀಡಿದೆ. Moto G54 5G ನಲ್ಲಿ 6.5 ಇಂಚಿನ IPS LCD ಡಿಸ್ಪ್ಲೇಯನ್ನು ಹೊಂದಿದ್ದು, 120Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. ಇನ್ನು ಪ್ರೊಸೆಸರ್ ವಿಭಾಗದಲ್ಲಿ ಡೈಮೆನ್ಸಿಟಿ 7020 ಚಿಪ್ ಅನ್ನು ಇದರಲ್ಲಿ ಬಳಸಬಹುದು.
ಮೋಟೋ G54 5G ಸ್ಮಾರ್ಟ್ ಫೋನ್ ವಿಶೇಷತೆ
ಮೋಟೋ G54 5G ಮಾರುಕಟ್ಟೆಯಲ್ಲಿ ಎರಡು ರೂಪಾಂತರಗಳೊಂದಿಗೆ ಬರಲಿದೆ. 8 GB RAM 128 GB ಸಂಗ್ರಹಣೆ ಮತ್ತು 12 GB RAM 256 GB ಸ್ಟೋರೇಜ್ ಸಾಮರ್ಥ್ಯದ ಫೋನ್ ಗಳು ಲಭ್ಯವಾಗಲಿದೆ. ಇನ್ನು 30W ವೇಗದ ಚಾರ್ಜಿಂಗ್ ನೊಂದಿಗೆ 6,000mAh ಬ್ಯಾಟರಿ ಪ್ಯಾಕ್ ಅನ್ನು ನೀಡಲಾಗಿದೆ.
ಮೋಟೋ G54 5G ಸ್ಮಾರ್ಟ್ ಫೋನ್ ಬೆಲೆ
Moto G54 5G ನಲ್ಲಿ ಸೆಲ್ಫಿ ಪ್ರಿಯರಿಗೆ 16-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ, OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮರಾ, ಫೋಟೋಗ್ರಫಿಗಾಗಿ 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಅನ್ನು ಅಳವಡಿಸಲಾಗಿದೆ. ಇನ್ನು ಈ ಮೋಟೋ G54 5G ಸ್ಮಾರ್ಟ್ ಫೋನ್ ನ 23,999 ರೂ. ಗಳಲ್ಲಿ ಲಭ್ಯವಾಗಲಿದೆ.