Moto India: 5000 mAh ಬ್ಯಾಟರಿ ಪ್ಯಾಕ್ ಇನ್ನೊಂದು ಮೊಬೈಲ್ ಲಾಂಚ್ ಮಾಡಿದ ಮೋಟೋ, ಬೆಲೆ ಕೊಂಚ ಅಧಿಕ.

ಇದೀಗ ಮೋಟೋ ಕಂಪನಿಯು ಹಳೆಯ ಮಾದರಿಗಿಂತ ಹೆಚ್ಚು ಫೀಚರ್ ಇರುವ ಸ್ಮಾರ್ಟ್ ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.

Moto Best Battery Mobiles: ಮಾರುಕಟ್ಟೆಯಲ್ಲಿಸ್ಮಾರ್ಟ್ ಫೋನ್ ಗಳ ಮೇಲಿನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಡಿಜಿಟಲ್ ಯುಗದಲ್ಲಿ ಇತ್ತೀಚಿಗೆ ಎಲ್ಲರು ಕೈಯಲ್ಲೂ ಸ್ಮಾರ್ಟ್ ಫೋನ್ ಗಳು ರಾರಾಜಿಸುತ್ತಿದೆ. ಪ್ರಸ್ತುತ ಸ್ಮಾರ್ಟ್ ಫೋನ್ ಮನುಷ್ಯರ ಅವಿಭಾಜ್ಯ ಅಂಗವಾಗಿದೆ ಎಂದರೆ ತಪ್ಪಾಗಲಾರದು. ಏಕೆಂದರೆ ಸಣ್ಣ ವಯಸ್ಕರಿಂದ ಹಿಡಿದು ವಯೋವೃದ್ದರು ಕೂಡ ಕೈಯಲ್ಲಿ Android Smart Phone ಗಳನ್ನೂ ಬಳಸುತ್ತಿದ್ದಾರೆ.

ಇನ್ನು ಮಾರುಕಟ್ಟೆಯಲ್ಲಿ ಕೂಡ ವಿವಿಧ ಮಾದರಿಯ ಸ್ಮಾರ್ಟ್ ಫೋನ್ ಗಳು ಇವೆ. ಇತ್ತೀಚೆಗಂತೂ ಮೊಟೊರೊಲಾ (Motorola) ಬ್ರಾಂಡ್ ಸ್ಮಾರ್ಟ್ ಫೋನ್ ಗಳು ಬಾರಿ ಸಡ್ಡು ಮಾಡುತ್ತಿದೆ. ಮೊರ್ಟೋರೋಲಾ ಈಗಾಗಲೇ ವಿಭಿನ್ನ ಮಾದರಿಯ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿದೆ. ಇದೀಗ ಕಂಪನಿಯು ಹಳೆಯ ಮಾದರಿಗಿಂತ ಹೆಚ್ಚು ಫೀಚರ್ ಇರುವ ಸ್ಮಾರ್ಟ್ ಫೋನ್ ಅನ್ನು ಕಂಪನಿಯು ಪರಿಚಯಿಸಿದೆ.

Moto G84 5G smartphone price
Image Credit: Mobiledrop

Moto G84 5G ಸ್ಮಾರ್ಟ್ ಫೋನ್
Motorola ಕಂಪನಿಯು ಇದೀಗ ತನ್ನ G ಸರಣಿಯಲ್ಲಿ ಹೊಸ ಮಾದರಿಯ ಫೋನ್ ಅನ್ನು ಪರಿಚಯಿಸಲು ಸಂಪೂರ್ಣ ಸಿದ್ಧತೆ ನಡೆಸುತ್ತಿದೆ. ಕಂಪನಿಯು ಮೋಟೋ G84 5G ಸ್ಮಾರ್ಟ್ ಫೋನ್ ಅನ್ನು ಕೇವಲ ಒಂದು ರೂಪಾಂತರದಲ್ಲಿ ಮಾತ್ರ ಮಾರುಕಟ್ಟೆಗೆ ಪರಿಚಯಿಸಲು ನಿರ್ಧರಿಸಿದೆ. ಕಂಪನಿಯು ಸುಮಾರು 20,000 ಬೆಲೆಯಲ್ಲಿ ಮೋಟೋ G84 5G ಸ್ಮಾರ್ಟ್ ಫೋನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.

Moto G84 Smart Phone Features
ಮೋಟೋ G84 5G ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ 12GB RAM ಮತ್ತು 256GB ಸ್ಟೋರೇಜ್ ರೂಪಾಂತರದಲ್ಲಿ ಲಭ್ಯವಿದೆ. ಗ್ರಾಹಕರು ಜನಪ್ರಿಯ ಇ-ಕಾಮರ್ಸ್ ವೆಬ್ ಸೈಟ್ ಗಳ ಮೂಲಕ 18,999 ರೂ. ಗಳಲ್ಲಿ ಖರೀದಿಸುವ ಅವಕಾಶವಿದೆ. ಈ ಸ್ಮಾರ್ಟ್ ಫೋನ್ 6 .5 ಇಂಚಿನ POLED ಡಿಸ್ ಪ್ಲೇ ಹೊಂದಿದೆ. ಬಳಕೆದಾರರ ಭದ್ರತೆಗಾಗಿ ಆನ್ ಸ್ಕ್ರೀನ್ ಫಿಂಗರ್ ಫ್ರಿನ್ಟ್ ಸೌಲಭ್ಯವನ್ನು ನೀಡಲಾಗುತ್ತದೆ.

Moto G84 5G smartphone feature
Image Credit: Telecom

ಮೋಟೋ G84 5G ಸ್ಮಾರ್ಟ್ ಫೋನ್ ಕ್ಯಾಮರಾ ಫೀಚರ್
ಮೋಟೋ G84 5G ಸ್ಮಾರ್ಟ್ ಫೋನ್ ಉತ್ತಮ ಫೋಟೋಗ್ರಫಿಗಾಗಿ ಹಿಂಭಾಗದಲ್ಲಿ ಎರಡು ಕ್ಯಾಮೆರಾಗಳನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ ಈ ಸ್ಮಾರ್ಟ್ ಫೋನ್ ನಲ್ಲಿ ಮ್ಯಾಕ್ರೋ ಅಥವಾ ಡೆಪ್ತ್ ಕ್ಯಾಮೆರಾಗಳನ್ನು ನೀಡಲಾಗುತ್ತದೆ.

Join Nadunudi News WhatsApp Group

ಸೆಕೆಂಡರಿ ಕ್ಯಾಮರಾ ಆಯ್ಕೆಯಲ್ಲಿ ಮೈಕ್ರೋ ಫೋಟೋಗಳನ್ನು ತೆಗೆಯಬಹುದಾಗಿದೆ. ಇನ್ನು ಸೆಲ್ಫಿ ಪ್ರಿಯರಿಗಾಗಿ ಮುಂಭಾಗದಲ್ಲಿ 16 ಮೆಗಾಫೈಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇನ್ನು ಮೋಟೋ G84 5G ಸ್ಮಾರ್ಟ್ ಫೋನ್ 30W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಿದ್ದು 5000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.

Join Nadunudi News WhatsApp Group