Moto Mobiles: ಗಣೇಶ ಹಬ್ಬ ಬರುತ್ತಿದ್ದಂತೆ ಬಂಪರ್ ಆಫರ್ ಘೋಷಣೆ, 12 ಸಾವಿರಕ್ಕೆ ಖರೀದಿಸಿ 20 ಸಾವಿರದ ಈ ಮೊಬೈಲ್.
ಗಣೇಶನ ಹಬ್ಬ ಬರುತ್ತಿದ್ದಂತೆ ಮೊಬೈಲ್ ಮೇಲೆ ಆಫರ್ ಘೋಷಣೆ ಮಾಡಿದ ಮೊಟೊರೊಲಾ.
Moto G32 Smartphone: ಈ ತಿಂಗಳಲ್ಲಿ ಬರುವ ಗಣೇಶ್ ಹಬ್ಬಕ್ಕೆ ಮೊಬೈಲ್ ಖರೀದಿ ಮಾಡುವ ಐಡಿಯಾ ಇದೆಯಾ, ಹಾಗಿದ್ರೆ ಕಡಿಮೆ ಬೆಲೆಯಲ್ಲಿ ಇಲ್ಲಿದೆ ಸ್ಮಾರ್ಟ್ ಫೋನ್. ಬಜೆಟ್ ಗ್ರಾಹಕರಿಗೆ ಇದೊಂದು ಸುವರ್ಣ ಅವಕಾಶ. ಮೊಟೊರೊಲಾ ಮೊಬೈಲ್ ಕಂಪನಿಯು ಈಗಾಗಲೇ ಅನೇಕ ಫೋನ್ ಗಳನ್ನೂ ಮಾರುಕಟ್ಟೆಗೆ ತಂದಿದ್ದು, ಮೊಟೊರೊಲಾ(Motorola) ಮೊಬೈಲ್ ಕಂಪನಿಯ ಅಗ್ಗದ ಬೆಲೆಯ ಸ್ಮಾರ್ಟ್ ಫೋನ್ ಈಗ ನಿಮಗಾಗಿ.
ಮೊಟೊರೊಲಾ ಮೊಬೈಲ್ ಕಂಪನಿಯ ಮೊಟೊ G32 ಫೋನ್ ಬೆಲೆ ಎಷ್ಟು ?
ಮೊಟೊ G32 ಫೋನ್ ಉತ್ತಮ ಪಿಚರ್ಸ್ ಹೊಂದಿದೆ. ಮೊಟೊ G32 ಫೋನ್ ಶೇ. 36% ರಷ್ಟು ಡಿಸ್ಕೌಂಟ್ ದರದಲ್ಲಿ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದಲ್ಲಿ ಕಾಣಿಸಿಕೊಂಡಿದೆ. ಈ ಫೋನಿನ 8 GB RAM + 128 GB ವೇರಿಯಂಟ್ ಬೆಲೆ 18,999 ರೂಪಾಯಿಗಳು ಆಗಿದ್ದು, ಆಫರ್‌ನಲ್ಲಿ 11,999 ರೂಪಾಯಿಗಳಿಗೆ ಖರೀದಿ ಮಾಡಬಹುದಾಗಿದೆ. ಹಾಗೆಯೇ ಈ ಫೋನ್ ಮಿನರಲ್ ಗ್ರೇ ಮತ್ತು ಸ್ಯಾಟಿನ್ ಸಿಲ್ವರ್ ಕಲರ್ ಆಯ್ಕೆಯಲ್ಲಿ ಗ್ರಾಹಕರು ಖರೀದಿ ಮಾಡಬಹುದಾಗಿದೆ.
ಮೊಟೊ G32 ಮೊಬೈಲ್‌ನ ರಿಯರ್ ಕ್ಯಾಮೆರಾ ಡಿಟೇಲ್ಸ್
ಮೊಟೊ G32 ಮೊಬೈಲ್ 3 ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಸೆಕೆಂಡರಿ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದ್ದು, ಇನ್ನು ತೃತೀಯ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಅನ್ನು ಒದಗಿಸಲಾಗಿದೆ.
ಮೊಟೊ G32 ಮೊಬೈಲ್ 90Hz ರಿಫ್ರೆಶ್ ರೇಟ್ ಮತ್ತು 20:9 ರಚನೆಯ ಅನುಪಾತವನ್ನು ಒಳಗೊಂಡಿದ್ದು, ಇದರ ಡಿಸ್‌ಪ್ಲೇಯು 85.48 % ಸ್ಕ್ರೀನ್ ಟು ಬಾಡಿ ನಡುವಿನ ಅನುಪಾತ ವನ್ನು ಪಡೆದುಕೊಂಡಿದೆ. ಮೊಬೈಲ್ 6.5 ಇಂಚಿನ ಫುಲ್ HD+ ಎಲ್‌ಸಿಡಿ ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇ 1,080 x 2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಅನ್ನು ಹೊಂದಿದೆ.
ಮೊಟೊ G32 ಬ್ಯಾಟರಿ ಸಾಮರ್ಥ್ಯ
ಮೊಬೈಲ್ ಖರೀದಿಸುವಾಗ ಬ್ಯಾಟರಿ ಪವರ್ ಬಹಳ ಮುಖ್ಯ. ಬ್ಯಾಟರಿಯನ್ನು ಪದೇ ಪದೇ ಚಾರ್ಜ್ ಮಾಡುವುದು ಕಷ್ಟ ಹಾಗಾಗಿ ಬ್ಯಾಟರಿ ಸಾಮರ್ಥ್ಯ ಚೆನ್ನಾಗಿರಬೇಕು. ಮೊಟೊ G32 ಮೊಬೈಲ್ 5,000 mAh ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯವನ್ನು ಪಡೆದಿದ್ದು, ಇದಕ್ಕೆ ಸಪೋರ್ಟ್ ಆಗಿ 33W ಟರ್ಬೋ ಪವರ್ ಫಾಸ್ಟ್ ಚಾರ್ಜಿಂಗ್ ಟೆಕ್ನಾಲಜಿ ಅನ್ನು ಪಡೆದುಕೊಂಡಿದೆ.
ಹಾಗೆಯೇ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಬ್ಯಾಂಡ್ Wi-Fi, 4G LTE, ಬ್ಲೂಟೂತ್ v5.2, 3.5mm ಹೆಡ್‌ಫೋನ್ ಪೋರ್ಟ್ ಮತ್ತು USB ಟೈಪ್ C ಸೌಲಭ್ಯ ಕೂಡಾ ಪಡೆದಿದೆ. ಈ ಮೇಲೆ ಹೇಳಿದಂತೆ ಉತ್ತಮ ಪಿಚರ್ಸ್ ಹೊಂದಿದ ಮೊಬೈಲ್ ಇದಾಗಿರುತ್ತದೆ.