Motorola 5G: ಅರ್ಧ ಬೆಲೆಗೆ ಖರೀದಿಸಿ ಈ ಮೋಟೋ ಮೊಬೈಲ್, ಮೊಬೈಲ್ ಮೇಲೆ ಬಂಪರ್ ಆಫರ್ ಘೋಷಣೆ ಮಾಡಿದ ಮೋಟೋ

ಮೊಟೊರೊಲಾ ಮೊಬೈಲ್ ಖರೀದಿ ಮಾಡುವವರಿಗೆ ಹೊಸ ವರ್ಷದ ಬಂಪರ್ ಆಫರ್, ಬಹಳ ಕಡಿಮೆ ಬೆಲೆಗೆ ಈ ದುಬಾರಿ ಫೋನ್ ಅನ್ನು ಖರೀದಿ ಮಾಡಿ

Motorola Moto G51 5G Smartphone: ದೇಶಿಯ ಮಾರುಕಟ್ಟೆಯಲ್ಲಿ ಮೊಟೊರೊಲಾ (Motorola) ಫೋನ್‌ಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಬೆಲೆ ಹಾಗು ಇನ್ನಿತರ ಹಲವು ಫೀಚರ್ಸ್ ನಲ್ಲಿ ಈ ಫೋನ್ ಉತ್ತಮ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಹೊಸ ವರ್ಷಕ್ಕೆ ಫೋನ್ ಖರೀದಿ ಮಾಡುವುದಾದರೆ ಮೊಟೊರೊಲಾ ಮೊಟೊ G51 5G ಸ್ಮಾರ್ಟ್‌ಫೋನ್‌ (Motorola Moto G51 5G smartphone) ಆಫರ್ ನಲ್ಲಿ ಲಭ್ಯ ಇದೆ.

ಇದೀಗ ಈ ಫೋನ್ ಗೆ ಪ್ರಮುಖ ಇ-ಕಾಮರ್ಸ್‌ ಸೈಟ್‌ನಲ್ಲಿ 48% ರಿಯಾಯಿತಿ ಘೋಷಣೆ ಮಾಡಲಾಗಿದೆ.ಈ ಫೋನ್ ಟ್ರಿಪಲ್‌ ರಿಯರ್‌ ಆಯ್ಕೆಯ 5G ಫೋನ್‌ ಆಗಿದ್ದು, ಈ ಮೂಲಕ ಬಳಕೆದಾರರಿಗೆ ಹಲವಾರು ರೀತಿಯಲ್ಲಿ ಅನುಕೂಲಕರ ಫೋನ್ ಆಗಿರಲಿದೆ.

Motorola Moto G51 5G Smartphone
Image Credit: Smartprix

Motorola Moto G51 5G ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ಹಾಗು ಪ್ರೊಸೆಸೆರ್ ವಿವರ

ಮೊಟೊರೊಲಾ ಮೊಟೊ G51 5G ಸ್ಮಾರ್ಟ್‌ಫೋನ್‌ 6.8 ಇಂಚಿನ ಪಂಚ್ ಹೋಲ್ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಇದು 269ppi ಪಿಕ್ಸೆಲ್ ಸಾಂದ್ರತೆ ಮತ್ತು 720×1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಆಯ್ಕೆ ಇರುವ HD+ IPS LCD ಡಿಸ್ಪ್ಲೇ ಹೊಂದಿದೆ. ಇದರೊಂದಿಗೆ 120Hz ಸ್ಕ್ರೀನ್ ರಿಫ್ರೆಶ್ ರೇಟ್‌ ಆಯ್ಕೆ ಈ ಫೋನ್‌ನಲ್ಲಿದೆ. ಈ 5G ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 480+ ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ ಅಡ್ರಿನೋ 619 GPU ಬಲದೊಂದಿಗೆ ಅತ್ಯುತ್ತಮವಾಗಿ ಕೆಲಸ ಮಾಡಲಿದ್ದು, ಇದಕ್ಕೆ 4GB RAM ಇನ್ನಷ್ಟು ಶಕ್ತಿ ನೀಡಲಿದೆ.

ಮೊಟೊರೊಲಾ ಮೊಟೊ G51 5G ಸ್ಮಾರ್ಟ್‌ಫೋನ್‌ ಕ್ಯಾಮೆರಾ ಸೆಟಪ್

Join Nadunudi News WhatsApp Group

ಮೊಟೊರೊಲಾ ಮೊಟೊ G51 5G ಸ್ಮಾರ್ಟ್‌ಫೋನ್ ಟ್ರಿಪಲ್‌ ರಿಯರ್ ಕ್ಯಾಮೆರಾ ಆಯ್ಕೆ ಪಡೆದಿದ್ದು, ಅದರಲ್ಲಿ 50 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಸೆನ್ಸರ್‌ ಮತ್ತು ಛಾಯಾಗ್ರಹಣಕ್ಕಾಗಿ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್‌ ಆಯ್ಕೆ ಪಡೆದಿದೆ. ಇದರೊಂದಿಗೆ ವೀಡಿಯೊ ಮತ್ತು ಸೆಲ್ಫಿ ತೆಗೆದುಕೊಳ್ಳಲು 13 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಕೊನೆಯದಾಗಿ ಈ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ದೀರ್ಘ ಬ್ಯಾಕಪ್‌ ಪಡೆದುಕೊಳ್ಳಬಹುದಾಗಿದೆ.

Motorola Moto G51 5G Smartphone Price And Feature
Image Credit: Original Source

ಮೊಟೊರೊಲಾ ಮೊಟೊ G51 5G ಸ್ಮಾರ್ಟ್‌ಫೋನ್‌ ಬೆಲೆ ಹಾಗು ಆಫರ್ ಮಾಹಿತಿ

Motorola Moto G51 5G ಸ್ಮಾರ್ಟ್‌ಫೋನ್‌ 29,999 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ಈಗ ಈ ಫೋನ್ ಅನ್ನು 15,499 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಈ ಫೋನ್‌ಗೆ ಅಮೆಜಾನ್‌ನಲ್ಲಿ (Amazon) 48% ರಿಯಾಯಿತಿ ಘೋಷಣೆ ಮಾಡಲಾಗಿದೆ. ಅದಾಗ್ಯೂ ಇನ್ನೂ ಕಡಿಮೆ ಬೆಲೆಗೆ ಖರೀದಿ ಮಾಡಲು ಇಚ್ಚಿಸಿದ್ರೆ ಕೆಲವು ಬ್ಯಾಂಕ್‌ ಆಪರ್ ಅನುಕೂಲ ಪಡೆದುಕೊಳ್ಳಬಹುದಾಗಿದೆ.

Join Nadunudi News WhatsApp Group