MRP Rule: ಅಂಗಡಿ ಹಾಕಿಕೊಂಡು ವ್ಯವಹಾರ ಮಾಡುವ ಎಲ್ಲರಿಗೂ ಹೊಸ ನಿಯಮ, 2000 ರೂ ದಂಡದ ಜೊತೆಗೆ ಅಂಗಡಿಗೆ ಬೀಗ.
ಅಂಗಡಿ ಮಾಲೀಕರೇ MRP ಗಿಂತ ಹೆಚ್ಚಿನ ಹಣ ಕೇಳುವ ಮುನ್ನ ಎಚ್ಚರ.
MRP Latest Update In India: ದೇಶದಲ್ಲಿ ಅಂಗಡಿಗಳಲ್ಲಿ ಸಾಕಷ್ಟು ವ್ಯವಹಾರ ನಡೆಯುತ್ತದೆ. ಹೆಚ್ಚಿನ ಜನರು ಅಂಗಡಿ ವ್ಯಾಪಾರವನ್ನು ಮಾಡಲು ಬಯಸುತ್ತಾರೆ. ಅಂಗಡಿ ವ್ಯಾಪಾರದಲ್ಲಿ ಒಂದು ರೂ. ನ ಮೂಲಕ ಲಾಭ ಸಿಗುವುದಾದರೂ ಈ ವ್ಯವಹಾರದಲ್ಲಿ ಹೆಚ್ಚಿನ ಲಾಭವನ್ನು ಗಳಿಸುವ ಅವಕಾಶ ಇರುತ್ತದೆ. ಇನ್ನು ಅಂಗಡಿಯಲ್ಲಿ ವ್ಯವಹಾರ ನಡೆಸುವವರು ವ್ಯವಹಾರದ ಎಲ್ಲಾ ನಿಯಮಗಳ ಬಗ್ಗೆ ಅರಿವಿರಬೇಕು.
ದೇಶದಲ್ಲಿ ಗ್ರಾಹಕರಿಗಾಗಿ ಜಾರಿಯಲ್ಲಿದೆ ವಿವಿಧ ನಿಯಮ
ದೇಶದಲ್ಲಿ ಗ್ರಾಹಕರಿಗಾಗಿ ಕೂಡ ವಿವಿಧ ನಿಯಮಗಳನ್ನು ಮಾಡಲಾಗಿದೆ. ರಾಷ್ಟ್ರೀಯ ಪೋರ್ಟಲ್ ನಲ್ಲಿರುವ ಗ್ರಾಹಕರ ವೇದಿಕೆ ವಿಭಾಗದಲ್ಲಿ ಎಲ್ಲಾ ಮಾಹಿತಿಯನ್ನು ಪಡೆಯಬಹುದು. ಗ್ರಾಹಕರಿಗೆ ವಿವಿಧ ಹಕ್ಕುಗಳಿವೆ. ಅಂಗಡಿಗಳಲ್ಲಿ ವ್ಯವಹಾರ ಮಾಡುವ ಮೊದಲು ಗ್ರಾಹಕರ ಹಕ್ಕುಗಳ ಬಗ್ಗೆ ಮಾಹಿತಿ ತಿಳಿದಿರಬೇಕು.
ಕೆಲವೊಮ್ಮೆ ಅಂಗಡಿಯವರು MRP ಗಿಂತ ಹೆಚ್ಚಿನ ಹಣವನ್ನು ತೆಗೆದುಕೊಳ್ಳುವುದನ್ನು ನೀವು ಗಮನಿಸರಬಹುದು. ಅಂಗಡಿಯವರು ಹೆಚ್ಚಿನ ಹಣವನ್ನು ನಿಮ್ಮ ಬಳಿಯಿಂದ ತೆಗೆದುಕೊಂಡರೆ ಅದನ್ನು ಪ್ರಶ್ನಿಸುವ ಹಕ್ಕು ನಿಮಗಿದೆ. ಕಾನೂನಿನಲ್ಲಿ ಗ್ರಾಹಕರ ಹಕ್ಕು ಏನು ಹೇಳುತ್ತದೆ ಎನ್ನುವುದನ್ನು ನೋಡೋಣ.
ಅಂಗಡಿ ಮಾಲೀಕರೇ MRP ಗಿಂತ ಹೆಚ್ಚಿನ ಹಣ ಕೇಳುವ ಮುನ್ನ ಎಚ್ಚರ
MRP ಗಿಂತ ಹೆಚ್ಚಿನ ಹಣ ಕೇಳಿದರೆ ಕಾನೂನು ಮಾಪನಶಾಸ್ತ್ರದ ನಿಯಮ ಅನ್ವಯಿಸುತ್ತದೆ. ಕಾನೂನು ಮಾಪನಶಾಸ್ತ್ರ ಕಾಯಿದೆ (2009) ನಿಯಮವು ಯಾವುದೇ ಅಂಗಡಿಯವನು ತನ್ನ ಗ್ರಾಹಕರಿಂದ MRP ಗಿಂತ ಹೆಚ್ಚಿನ ಬೆಲೆಯನ್ನು ಕೇಳುವಂತಿಲ್ಲ ಎಂದು ಹೇಳುತ್ತದೆ. ಹೀಗೆ ಮಾಡಿದರೆ ಈ ಕಾಯಿದೆಯಡಿ 2000 ರೂ. ವರೆಗೆ ದಂಡ ತೆರಬೇಕಾಗಬಹುದು.
MRP ಗಿಂತ ಹೆಚ್ಚಿನ ಹಣ ಕೇಳಿದರೆ ಈ ರೀತಿಯಾಗಿ ದೂರು ನೀಡಿ
MRP ದರಕ್ಕಿಂತ ಹೆಚ್ಚು ಅಂಗಡಿಯವರು ತೆಗೆದುಕೊಂಡರೆ, ನೀವು ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ಸಂಖ್ಯೆ 1915 ಗೆ ಕರೆ ಮಾಡಬಹುದು. ಅಥವಾ ನೀವು ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ವೆಬ್ ಸೈಟ್ consumerhelpline.gov.in ನಲ್ಲಿ ದೂರು ಸಲ್ಲಿಸಬಹುದು. ಈ ವೆಬ್ ಸೈಟ್ ನಲ್ಲಿ ನೀವು ಈ ಹಿಂದೆ ನೀಡಲಾದ ದೂರುಗಳನ್ನು ಕೂಡ ಟ್ರ್ಯಾಕ್ ಮಾಡಬಹುದು.