MS Dhoni: ಚೆನ್ನೈ ತಂಡಕ್ಕೆ ಖ್ಯಾತ ಹಾಸ್ಯ ನಟ, MS ಧೋನಿ ಹೇಳಿಕೆ ವೈರಲ್
ಯೋಗಿ ಬಾಬು ಅವರ ಪ್ರಶ್ನೆಗೆ ದೋನಿ ನೀಡಿದ ಉತ್ತರ ವೈರಲ್ ಆಗುತ್ತಿದೆ.
MS Dhoni And Yogi Babu: ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಅವರು ಇತ್ತೀಚೆಗಷ್ಟೇ ತಮ್ಮ ಹುಟುಹಬ್ಬದ ವಿಚಾರವಾಗಿ ಸುದ್ದಿಯಾಗಿದ್ದರು. ಇನ್ನು ಧೋನಿ ಅವರು ಇಂಡಿಯನ್ ಪ್ರೀಮಿಯರ್ ಲೀಗ್ ನ ಚೆನ್ನೈ ಸೂಪರ್ ಕಿಂಗ್ ತಂಡದ ನಾಯಕರಿದ್ದಾರೆ. ಕ್ರಿಕೆಟ್ ನ ಜೊತೆಗೆ ದೋನಿ ಅವರು ಸಿನಿಮಾವನ್ನು ಕೂಡ ನಿರ್ಮಾಣ ಮಾಡುತ್ತಿದ್ದಾರೆ.
ಧೋನಿ ಎಂಟರ್ಟೈನ್ಮೆಂಟ್ ಬ್ಯಾನರ್ ನ ಅಡಿಯಲ್ಲಿ ಸಿನಿಮಾ ಸಜ್ಜಾಗುತ್ತಿದೆ. ಇದೀಗ ಸಿನಿಮಾ ಟ್ರೈಲರ್ ರಿಲೀಸ್ ನಲ್ಲಿ ಧೋನಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾ ಟ್ರೈಲರ್ ಬಿಡುಗಡೆಗೊಂಡಿದ್ದು ಈ ವರ್ಷದ ಡಿಸೇಂಬರ್ ನಲ್ಲಿ ತೆರೆಯ ಮೇಲೆ ಬರಲಿದೆ.
ವೈರಲ್ ಆಗಿದೆ MS ಧೋನಿ ಕೊಟ್ಟ ಉತ್ತರ
ಧೋನಿ ಎಂಟರ್ಟೈನ್ಮೆಂಟ್ ಬ್ಯಾನರ್ ನ ಅಡಿಯಲ್ಲಿ ಲೆಟ್ಸ್ ಗೆಟ್ ಮ್ಯಾರೀಡ್ ಚಿತ್ರ ನಿರ್ಮಾಣಗೊಳ್ಳುತ್ತಿದೆ. ಈ ಸಿನಿಮಾದ ಟ್ರೈಲರ್ ಹಾಗೂ ಆಡಿಯೋ ಲೊಂಚ್ ಅದ್ದೂರಿಯಾಗಿ ನೆರವೇರಿದೆ. ಈ ಕಾರ್ಯಕ್ರಮದಲ್ಲಿ ಧೋನಿ ಹಾಗೂ ಅವರ ಕುಟುಂಬ ಮತ್ತು ಚಿತ್ರದಲ್ಲಿ ನಟಿಸಿದ ಕಲಾವಿದರು ಭಾಗಿಯಾಗಿದ್ದಾರೆ.
ಚೆನ್ನೈನ ಲೀಲಾ ಪ್ಯಾಲೇಸ್ ನಲ್ಲಿ ಎಲ್ ಜಿಎಂ ಚಿತ್ರ ಆಡಿಯೋ ಹಾಗೂ ಟ್ರೈಲರ್ ಬಿಡುಗಡೆಯಾಗಿದೆ. ಈ ವೇಳೆ ಕಾಲಿವುಡ್ ನ ಖ್ಯಾತ ಹಾಸ್ಯ ನಟ ಯೋಗಿ ಬಾಬು (Yogi Babu) ಅವರು ಧೋನಿ ಅವರ ಬಳಿ ಒಂದು ಪ್ರಶ್ನೆ ಕೇಳಿದ್ದಾರೆ. ಈ ಪ್ರಶ್ನೆ ದೋನಿ ನೀಡಿದ ಉತ್ತರ ಇದೀಗ ಬಾರಿ ವೈರಲ್ ಆಗುತ್ತಿದೆ.
ಖ್ಯಾತ ಕಾಲಿವುಡ್ ನ ಹಾಸ್ಯ ನಟ CSK ತಂಡದಲ್ಲಿ
‘ಧೋನಿ ಅವರೇ ನನ್ನನು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ನೇಮಿಸಿಕೊಳ್ಳಿ ಎಂದು ಹಾಸ್ಯ ನಟ ಯೋಗಿ ಬಾಬು ದೋನಿ ಅವರ ಬಳಿ ಕೇಳಿದ್ದಾರೆ.
ಈ ವೇಳೆ ಉತ್ತರಿಸಿದ ಧೋನಿ, “ಅಂಬಾಟಿ ರಾಯುಡು ನಿವೃತ್ತರಾಗಿದ್ದಾರೆ. ಆದ್ದರಿಂದ ನಿಮಗೆ ಸಿಎಸ್ ಕೆಯಲ್ಲಿ ಸ್ಥಾನವಿದೆ. ನಾನು ಮ್ಯಾನೇಜ್ ಮೆಟ್ ನೊಂದಿಗೆ ಮಾತನಾಡುತ್ತೇನೆ.ಆದರೆ, ನೀವು ಚಲನಚಿತ್ರಗಳಲ್ಲಿ ತುಂಬಾ ಬ್ಯುಸಿಯಾಗಿದ್ದೀರಿ. ನೀವು ನಿರಂತರವಾಗಿ ಆಡಬೇಕು. ಅವರು ತುಂಬಾ ವೇಗವಾಗಿ ಬೌಲ್ ಮಾಡುತ್ತಾರೆ ಮತ್ತು ಅವರು ನಿಮ್ಮನ್ನು ಗಾಯಗೊಳಿಸಲು ಬೌಲ್ ಮಾಡುತ್ತಾರೆ” ಎಂದು ತಮಾಷೆಯಾಗಿ ಧೋನಿ ಉತ್ತರಿಸಿದ್ದಾರೆ.