Chits Fund Scheme: 5 ಗ್ಯಾರಂಟಿ ಸ್ಕೀಮ್ ಬೆನ್ನಲ್ಲೇ ರಾಜ್ಯದಲ್ಲಿ ಜಾರಿಗೆ ಬಂತು ಇನ್ನೊಂದು ಮೇಘಾ ಸ್ಕೀಮ್, ಸಂತಸದಲ್ಲಿ ಮಹಿಳೆಯರು.
ಮಹಿಳೆಯರು ಉಳಿತಾಯವನ್ನು ಆರಂಭಿಸಲು ಕಾಂಗ್ರೆಸ್ ಸರ್ಕಾರದ ಹೊಸ ಯೋಜನೆ.
MSIL Chits Fund: ಸದ್ಯ ರಾಜ್ಯದಲ್ಲಿ ಸಾಲು ಸಾಲು ಯೋಜನೆಗಳು ತಲೆ ಎತ್ತಿಕೊಳ್ಳುತ್ತಿವೆ ಎನ್ನಬಹುದು. ರಾಜ್ಯದ ಜನತೆಗೆ ಸರ್ಕಾರದ ಪ್ರತಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ರಾಜ್ಯದ ಬಡ ಜನರಿಗೆ ಆರ್ಥಿಕ ನೆರವು ನೀಡಲು ಸರ್ಕಾರ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತ ಚಿಂತನೆ ನಡೆಸುತ್ತಿದೆ ಎನ್ನಬಹುದು.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಈಗಾಗಲೇ ನಾಲ್ಕು ಯೋಜನೆಗಳು ಅನುಷ್ಠಾನಗೊಂಡಿದ್ದು, ಇನ್ನೇನು ನಿರುದ್ಯೋಗ ಭತ್ಯೆ ಯೋಜನೆಯಾದ ಯುವ ನಿಧಿ ಮಾತ್ರ ಜಾರಿಯಾಗುವುದು ಬಾಕಿ ಇದೆ. ಈ ಯೋಜನೆಯು ಸದ್ಯದಲ್ಲೇ ಜಾರಿಯಾಗುತ್ತದೆ ಎಂದು ಸರ್ಕಾರ ಮಾಹಿತಿ ನೀಡಿದೆ. ಸದ್ಯ ಸಾಲು ಯೋಜನೆಗಳನ್ನು ರಾಜ್ಯದ ಜನತೆಗೆ ನೀಡುತ್ತಿರುವ ರಾಜ್ಯ ಸರ್ಕಾರ ಇದೀಗ ಮತ್ತೊಂದು ಮಹತ್ತರ ಯೋಜನೆಯನ್ನು ಕೈಗೆತ್ತಿಕೊಂಡಿದೆ.
5 ಗ್ಯಾರಂಟಿ ಸ್ಕೀಮ್ ಬೆನ್ನಲ್ಲೇ ರಾಜ್ಯದಲ್ಲಿ ಜಾರಿಗೆ ಬಂತು ಇನ್ನೊಂದು ಮೇಘಾ ಸ್ಕೀಮ್
MSIL ಅನ್ನು ಇಂಡಿಯಾದ ಪ್ರೀಮಿಯರ್ ಚಿಟ್ ಫಂಡ್ ಮಾಡುವ ಮೂಲಕ ಚಿಟ್ ಫಂಡ್ ಕ್ಷೇತ್ರವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಕರ್ನಾಟಕವು ಉತ್ತಮ ಹೆಜ್ಜೆ ಇಡುತ್ತಿದೆ. ಈ ಕುರಿತು ಸಚಿವ ಎಂ.ಬಿ.ಪಾಟೀಲ್ ಅವರು ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ. ಗೃಹ ಲಕ್ಷ್ಮೀ ಯೋಜನೆಯಡಿ 93 ಲಕ್ಷ ಮಹಿಳೆಯರಿಗೆ ಮಾಸಿಕ 2 ಸಾವಿರ ರೂ. ಉಚಿತ ಬಸ್ ಪ್ರಯಾಣ ಯೋಜನೆಯಾದ ಶಕ್ತಿಯಿಂದ ಮಹಿಳೆಯರು ಹಣವನ್ನು ಉಳಿಸುತ್ತಿದ್ದಾರೆ. ಈ ಮಹಿಳೆಯರು ಉಳಿತಾಯ ಆರಂಭಿಸುವಂತೆ ಹೊಸ ಯೋಜನೆ ರೂಪಿಸಲಾಗಿದೆ.
#MSILChits ಅನ್ನು ಭಾರತದ ಪ್ರಮುಖ ಚಿಟ್ ಫಂಡ್ ಮಾಡುವ ಮೂಲಕ ಚಿಟ್ ಫಂಡ್ ವಲಯವನ್ನು ಉನ್ನತ ಸ್ಥಾನಕ್ಕೆ ಒಯ್ಯಲು ಕರ್ನಾಟಕವು ಮಹತ್ತರ ಪ್ರಯಾಣ ಆರಂಭಿಸುತ್ತಿದೆ.
✅ MSIL ವಿಶ್ವಾಸಾರ್ಹ ಬ್ರ್ಯಾಂಡ್
✅ ಸುಭದ್ರ, ಸುರಕ್ಷಿತ ಮತ್ತು ಪ್ರಗತಿ ವರ್ಧಕ
✅ AI ಪ್ಲಾಟ್ ಫಾರ್ಮ್ ನಲ್ಲಿ ಇರಲಿದೆ
✅ ಕೆಲವೇ ವರ್ಷಗಳಲ್ಲಿ ರೂ. 300 ಕೋಟಿಯಿಂದ 10,000… pic.twitter.com/qFkLURPKFH— M B Patil (@MBPatil) November 6, 2023
MSIL ಚಿಟ್ ಫಂಡ್
ಅಧಿಕಾರಿಗಳು MYSORE SALES INTERNATIONAL LTD (ಎಂಎಸ್‌ಐಎಲ್) ನಡೆಸುತ್ತಿರುವ ಚಿಟ್ ಫಂಡ್ ವ್ಯವಹಾರವನ್ನು ಪ್ರಾರಂಭಿಸಿದ್ದಾರೆ. ಈ ಚಿಟ್ ಫಂಡ್ ವ್ಯವಹಾರವು 305 ಕೋಟಿ ರೂ. ಗಳ ವಹಿವಾಟು ಮತ್ತು 22,000 ಕಡಿಮೆ ಚಂದಾರರನ್ನು ಹೊಂದಿದೆ. ಇದು ಕೇರಳಕ್ಕಿಂತ ಕಡಿಮೆಯಾಗಿದ್ದು, ಸರ್ಕಾರಿ ಸ್ವಾಮ್ಯದ ಚಿಟ್ ಫಂಡ್ ವ್ಯವಹಾರ ಸುಮಾರು 27,000 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
“ಗೃಹ ಲಕ್ಷ್ಮಿ ಯೋಜನೆಯಡಿಯಲ್ಲಿ ಮಹಿಳೆಯರು ನಗದು ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ MSIL ತನ್ನ ಚಿಟ್ ಫಂಡ್ ವ್ಯವಹಾರಕ್ಕೆ ಉತ್ತೇಜನ ನೀಡಲು ಒಪ್ಪಿಕೊಂಡಿದೆ” ಎಂದು ಹೆಚ್ಚುವರಿ ಮುಖ್ಯ ಹಣಕಾಸು ಕಾರ್ಯದರ್ಶಿ ಎಲ್ ಕೆ ಅತೀಕ್ ಅವರು ಟ್ವೀಟ್ ನ ಮೂಲಕ ಮಾಹಿತಿ ನೀಡಿದ್ದಾರೆ. ಸದ್ಯದಲ್ಲೇ ರಾಜ್ಯದ ಜನತೆಗೆ ಕಾಂಗ್ರೆಸ್ ಸರಕಾರದ ಹೊಸ ಯೋಜನೆಯ ಲಾಭ ಕೂಡ ದೊರೆಯಲಿದೆ.
ಈ ಫಂಡ್ ನ ಅಡಿಯಲ್ಲಿ ಮಹಿಳೆಯರು ಹಣವನ್ನ ಹೂಡಿಕೆ ಮಾಡಬಹುದಾಗಿದ್ದು ಮಹಿಳೆಯರ ಹಣಕ್ಕೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಸರ್ಕಾರ ಹೇಳಿಕೊಂಡಿದೆ. ಈ ಯೋಜನೆಯ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಮುಂದಿನ ದಿನಗಳಲ್ಲಿ ತಿಳಿದುಬರಲಿದೆ. ಮಹಿಳೆಯರು ಈ ಚಿಟ್ ಫಂಡ್ ಗೆ ಸೇರುವುದು ಹೇಗೆ ಮತ್ತು ಬೇಕಾಗಿರುವ ದಾಖಲೆಗಳು ಏನು ಅನ್ನುವುದರ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ತಿಳಿದುಬರಲಿದೆ.