Mukesh Ambani: ರಾಹುಲ್ ಗಾಂಧಿಗೆ ಟಾಂಗ್ ಕೊಟ್ಟ ಅಂಬಾನಿ, ಬನ್ನಿ ಮಗನ ಮದುವೆಗೆ

ರಾಹುಲ್ ಗಾಂಧಿಗೆ ಆಮಂತ್ರಣ ಪತ್ರಿಕೆ ನೀಡಿದ ಮುಕೇಶ್ ಅಂಬಾನಿ

Mukesh Ambani Gave Marriage Invitation To Rahul Gandhi: ದೇಶದ ಶ್ರೀಮಂತ ವ್ಯಕ್ತಿಯಾದ ಮುಕೇಶ್ ಅಂಬಾನಿ ಅವರ ಕೊನೆಯ ಮಗನ ಮದುವೆ ಜುಲೈ 12 ರಂದು ಅದ್ದೂರಿಯಾಗಿ ನಡೆಯಲಿದೆ. ಇನ್ನು ಅಂಬಾನಿ ಕುಟುಂಬವು ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹಕ್ಕೆ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ ಎನ್ನಬಹುದು.

ಇನ್ನು ಮದುವೆಯ ದಿನಾಂಕ ಹತ್ತಿರವಾಗುತ್ತಿದ್ದಂತೆ ಮದುವೆಗೆ ಆಪ್ತರನ್ನು ಕರೆಯಲು ಮುಕೇಶ್ ಅಂಬಾನಿ ದುಬಾರಿ ಆಮಂತ್ರಣ ಪತ್ರಿಕೆಯನ್ನು ಸಹ ಸಿದ್ದಪಡಿಸಿದ್ದರು. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಅನಂತ್ ಅಂಬಾನಿ ಮದುವೆಯ ಆಮಂತ್ರಣ ಪತ್ರಗಳು ಕೂಡ ವೈರಲ್ ಆಗಿದ್ದವು. ಸದ್ಯ ಅನಂತ್ ಅಂಬಾನಿ ಮದುವೆಯ ಆಮಂತ್ರಣ ಪತ್ರಿಕೆಯನ್ನು ಮುಕೇಶ್ ಅಂಬಾನಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ನೀಡಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಕೇಳಿಬಂದಿದೆ.

Mukesh Ambani Gave Marriage Invitation To Rahul Gandhi
Image Credit: Businesstoday

ತಮಗೆ ಯಾವಾಗಲು ಟಾಂಗ್ ನೀಡುವ ರಾಹುಲ್ ಗಾಂಧಿಯನ್ನು ಮಗನ ಮದುವೆಗೆ ಕರೆದ ಅಂಬಾನಿ…!
ಪ್ರಧಾನಿ ಮೋದಿಗೆ ಟಾಂಗ್ ನೀಡಲು ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಅಂಬಾನಿ ಹೆಸರನ್ನು ಹೇಳುತ್ತಲೇ ಇರುತ್ತಾರೆ. ನರೇಂದ್ರ ಮೋದಿಯವರು ಅಂಬಾನಿ, ಅದಾನಿ ಮುಂತಾದ ಉದ್ಯಮಿಗಳ ಸಾಲ ಮನ್ನಾ ಮಾಡಿದರು. ಈ ಉದ್ಯಮಿಗಳನ್ನು ಬೆಳೆಸಿದರು ಎಂದು ರಾಹುಲ್ ಯಾವಾಗಲೂ ಟಾಂಗ್ ನೀಡುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೇ ನಡೆದ ಲೋಕಸಭೆ ಚುನಾವಣೆಯಲ್ಲಿ ಮುಖೇಶ್ ಅಂಬಾನಿ ಹೆಸರನ್ನು ಹೇಳಿ ಮೋದಿಗೆ ಟಾಂಗ್ ನೀಡಿದ್ದರು. ಆದರೆ ಇದೀಗ ಸ್ವತಃ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಮದುವೆಗೆ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರನ್ನು ಆಹ್ವಾನಿಸಿದ್ದಾರೆ ಎನ್ನಲಾಗಿದೆ.

Anant Ambani Wedding
Image Credit: Live India

ರಾಹುಲ್ ಗಾಂಧಿಗೆ ಆಮಂತ್ರಣ ಪತ್ರಿಕೆ ನೀಡಿದ ಮುಕೇಶ್ ಅಂಬಾನಿ
ರಾಜಕೀಯವನ್ನು ಬದಿಗಿಟ್ಟು, ಜುಲೈ 12 ರಂದು ಮುಂಬೈನ ಜಿಯೋ ಸೆಂಟರ್‌ ನಲ್ಲಿ ನಡೆಯಲಿರುವ ವಿವಾಹಕ್ಕೆ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಖುದ್ದು ರಾಹುಲ್ ಗಾಂಧಿ ಅವರನ್ನು ಆಹ್ವಾನಿಸಿದ್ದಾರೆ ಎಂದು ಹೇಳಲಾಗಿದೆ. 10 ಜನಪತ್ ರಸ್ತೆಯಲ್ಲಿರುವ ರಾಹುಲ್ ಮತ್ತು ಸೋನಿಯಾ ನಿವಾಸದ ಬಳಿ ಅಂಬಾನಿ ದಂಪತಿಗಳು ಇರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಾಹುಲ್ ಮತ್ತು ಸೋನಿಯಾಗಾಂಧಿಗೆ ಮದುವೆ ಆಮಂತ್ರಣ ಪತ್ರಿಕೆ ನೀಡಲು ಅಂಬಾನಿ ಕುಟುಂಬ ಅಲ್ಲಿಗೆ ಹೋಗಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಟಾಂಗ್ ನೀಡುತ್ತಿರುವ ರಾಹುಲ್ ಗಾಂಧಿ ಮನೆಗೆ ಮುಕೇಶ್ ಅಂಬಾನಿ ಹೋಗಿರುವುದು ಹಲವರಿಗೆ ಅಚ್ಚರಿ ಮೂಡಿಸುತ್ತಿದೆ. ಅಂಬಾನಿ ಕಂಡರೆ ಯಾವಾಗಲು ಕಿಡಿಕಾರುವ ರಾಹುಲ್ ಗಾಂಧಿ ಅನಂತ್ ಅಂಬಾನಿ ಮದುವೆಗೆ ಹೋಗುತ್ತಾರಾ ಎನ್ನುವುದು ಸದ್ಯದ ಕುತೂಹಲವಾಗಿದೆ.

Join Nadunudi News WhatsApp Group

Mukesh Ambani Invites Rahul Gandhi To Anant-Radhika Wedding
Image Credit: etvbharat

Join Nadunudi News WhatsApp Group