Mukesh Ambani: ಅಂಬಾನಿ ಮನೆಯಲ್ಲಿ ಅಡುಗೆ ಮಾಡುವವರ ಸಂಬಳ ಎಷ್ಟು, ಉನ್ನತ ನೌಕರರಿಗಿಂತ ಹೆಚ್ಚು.

ಮುಕೇಶ್ ಅಂಬಾನಿ ಮನೆಯಲ್ಲಿ ಅಡುಗೆ ಮಾಡುವವರ ಸಂಬಳ ದೇಶದ ಉನ್ನತ ನೌಕರರಿಗಿಂತ ಹೆಚ್ಚು.

Mukesh Ambani House Workers Salary: ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ (Mukesh Ambani) ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದೇ ಇರುತ್ತದೆ. ಫೋರ್ಬ್ಸ್ ಪ್ರಕಾರ ಸದ್ಯ ಮುಕೇಶ್ ಅಂಬಾನಿ ಅವರು ವಿಶ್ವದ 13 ನೇ ಶ್ರೀಮಂತ ವ್ಯಕ್ತಿ. ಅವರ ನಿವ್ವಳ ಆಸ್ತಿಯ ಮೂಲ್ಯ 83 ಬಿಲಿಯನ್ ಡಾಲರ್. ಸರಿಸುಮಾರು 723 ಸಾವಿರ ಕೋಟಿ ರೂಪಾಯಿ.

Mukesh Ambani House Workers Salary
Image Source: Kannada Nadi

ಮುಕೇಶ್ ಅಂಬಾನಿ ಮನೆ ಕೆಲಸಗಾರರ ಸಂಬಳ
ಭಾರತದಲ್ಲಿ ಅಂಬಾನಿ ಕುಟುಂಬವು ಐಷಾರಾಮಿ ಮನೆ ಅನೇಕ ದುಬಾರಿ ಆಸ್ತಿಗಳನ್ನು ಹೊಂದಿದೆ. ಅಂಬಾನಿ ಅವರ ಬಳಿ ದುಬಾರಿ ಕಾರುಗಳು ಸಾಕಷ್ಟಿವೆ. ಅಂಬಾನಿ ಕುಟುಂಬದವರು ವಾಸವಾಗಿರುವ ನಿವಾಸ ಆಂಟೀಲಿಯ. ವಿಶ್ವದ ಅತ್ಯಂತ ದುಬಾರಿ ಮನೆಗಳಲ್ಲಿ ಒಂದಾಗಿದೆ.

ಆಂಟಿಲಿಯಾದಲ್ಲಿ ಸಾವಿರಾರು ಕೆಲಸಗಾರರಿದ್ದಾರೆ. ಮುಕೇಶ್ ಅಂಬಾನಿ ತಮ್ಮ ಮನೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ನೀಡುವ ಸಂಬಳದ ಮೊತ್ತವು ಭಾರತದಲ್ಲಿ ಸಿಎ ಮತ್ತು ಎಂಬಿಎ ಉದ್ಯೋಗಿಗಳ ಸರಾಸರಿ ವೇತನಕ್ಕಿಂತಲೂ ಹೆಚ್ಚು. ಸಂಬಳದ ಜೊತೆಗೆ ಅಂಬಾನಿ ಹೌಸ್ ಉದ್ಯೋಗಿಗಳು ವಿಮೆ ಮತ್ತು ಇತರ ಪ್ರಯೋಜನಗಳನ್ನು ಸಹ ಪಡೆಯುತ್ತಾರೆ.

Mukesh Ambani House Workers Salary
Image Source: Kannada Nadi

ಮುಕೇಶ್ ಅಂಬಾನಿ ಅವರ ಮನೆಯಲ್ಲಿ ಅಡುಗೆ ಮಾಡುವ ಬಾಣಸಿಗರಿಗೆ ಕೊಡುವ ಸಂಬಳ
ಮುಖೇಶ್ ಅಂಬಾನಿ ಅವರ ಮನೆಯಲ್ಲಿ ಅಡುಗೆ ಮಾಡುವ ಬಾಣಸಿಗರಿಗೆ ಕೊಡುವ ವೇತನದ ಬಗ್ಗೆ ಕೇಳಿದರೆ ಎಂಥವರು ಕೂಡ ಶಾಕ್ ಆಗುತ್ತಾರೆ. ಆಂಟಿಲಿಯಾದಲ್ಲಿ ಬಾಣಸಿಗರಿಗೆ ತಿಂಗಳಿಗೆ ಸುಮಾರು 2 ಲಕ್ಷ ರೂಪಾಯಿ ಸಂಬಳ ನೀಡಲಾಗುತ್ತದೆ.

ಅಂದರೆ ಅವರು ವಾರ್ಷಿಕವಾಗಿ ಅವರು 24 ಲಕ್ಷ ರೂಪಾಯಿಗಳನ್ನು ಪಡೆಯುತ್ತಾರೆ. ಮುಕೇಶ್ ಅಂಬಾನಿ ಅವರ ಮನೆ ಆಂಟಿಲಿಯಾವನ್ನು ನೋಡಿಕೊಳ್ಳಲು 600 ಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ. ಅವರ ಮಾಸಿಕ ವೇತನ ಕೂಡ ಲಕ್ಷಕ್ಕೂ ಅಧಿಕ ಎನ್ನಲಾಗುತ್ತಿದೆ.

Join Nadunudi News WhatsApp Group

Mukesh Ambani House Workers Salary
Image Source: India Today

Join Nadunudi News WhatsApp Group