Ads By Google

Mukesh Ambani: ಅಂಬಾನಿ ಮನೆಯವರು ಕುಡಿಯುವ ಹಾಲಿನ ಬೆಲೆ ಎಷ್ಟು ಗೊತ್ತಾ…? ಇದೊಂದು ವಿಶೇಷ ಹಾಲು.

Holstein-Friesian breed cow milk that Ambani family drinks

Image Credit: Original Source

Ads By Google

Mukesh Ambani Life Style: ದೇಶದ ಶ್ರೀಮಂತ ವ್ಯಕ್ತಿಯಾಗಿರುವ ಮುಕೇಶ್ ಅಂಬಾನಿ ಅವರ ಬಗ್ಗೆ ಎಲ್ಲರಿಗು ತಿಳಿದೇ ಇದೆ. ದೇಶದಲ್ಲಿ ವಿವಿಧ ಉದ್ಯಮಗಳನ್ನು ಆರಂಭಿಸಿರುವ ಮುಕೇಶ್ ಅಂಬಾನಿ ತನ್ನ ಐಷಾರಾಮಿ ಜೀವನ ಶೈಲಿಯ ವಿಚಾರವಾಗಿ ಆಗಾಗ ಸುದ್ದಿಯಾಗುತ್ತಾರೆ. ಅಂಬಾನಿ ಮಾತ್ರವಲ್ಲದೆ ಅಂಬಾನಿ ಇಡೀ ಕುಟುಂಬದ ತಮ್ಮ ಐಷಾರಾಮಿ ಜೀವಶೈಲಿಗೆ ಹೆಸರುವಾಸಿಯಾಗಿದೆ.

ಆಭರಣದಿಂದ ಹಿಡಿದು ಅಂಬಾನಿ ಕುಟುಂಬ ಬಳಸುವ ನೀರಿನವರೆಗೂ ಎಲ್ಲ ದುಬಾರಿಯದ್ದೇ. ದುಬಾರಿ ಉಡುಗೆ ತೊಡುಗೆಗೆ ಅಂಬಾನಿ ಕುಟುಂಬ ಮೊದಲಿರುತ್ತದೆ. ತಮ್ಮ ಐಷಾರಾಮಿ ಜೀವನಶೈಲಿಯ ವಿಚಾರವಾಗಿ ಸುದ್ದಿಯಾಗುವ ಅಂಬಾನಿ ಕುಟುಂಬ ಇದೀಗ ಕುಡಿಯುವ ಹಾಲಿನ ವಿಚಾರವಾಗಿ ಎಲ್ಲರ ಗಮನ ಸೆಳೆದಿದೆ. ಅಂಬಾನಿ ಕುಟುಂಬ ಕುಡಿಯುವ ಹಾಲಿನ ಬಗ್ಗೆ ನೀವು ಕೇಳಿದರೆ ಅಚ್ಚರಿ ಪಡುವುದಂತೂ ನಿಜ.

Image Credit: ABP Live

ಅಂಬಾನಿ ಮನೆಯವರು ಕುಡಿಯುವ ಹಾಲಿನ ಬೆಲೆ ಎಷ್ಟು ಗೊತ್ತಾ…?
ಇದೀಗ ಅಂಬಾನಿ ಕುಟುಂಬ ಕುಡಿಯುವ ಹಾಲು ಮತ್ತು ಅದರ ವಿಶೇಷತೆಗಳ ಬಗ್ಗೆ ಸುದ್ದಿ ವೈರಲ್ ಆಗಿದೆ. ಸಾಮಾನ್ಯವಾಗಿ, ಮುಖೇಶ್ ಅಂಬಾನಿ ತಮ್ಮ ಹೆಂಡತಿ ಮತ್ತು ಮಕ್ಕಳೊಂದಿಗೆ ಅವರು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಸಾಕಷ್ಟು ಪ್ರೋಟೀನ್ ಮತ್ತು ಪೋಷಕಾಂಶಗಳಿವೆ ಎಂದು ಖಚಿತಪಡಿಸಿಕೊಳ್ಳಲು ಪೌಷ್ಟಿಕತಜ್ಞರ ಸಲಹೆಯಂತೆ ಸಮತೋಲಿತ ಆಹಾರವನ್ನು ತೆಗೆದುಕೊಳ್ಳಲಾಗುತ್ತದೆ. ಅಲ್ಲದೆ ಅವರು ಕುಡಿಯುವ ಹಾಲು ತುಂಬಾ ವಿಶೇಷವಾಗಿದೆ.

ಅಂಬಾನಿ ಕುಟುಂಬ ಕುಡಿಯುವ ಹಾಲು ಪುಣೆಯಿಂದ ಬರುತ್ತದೆ. ಅಂಬಾನಿ ಕುಟುಂಬ ಹೋಲ್ ಸ್ಟೈನ್-ಫ್ರೀಷಿಯನ್ ಎಂಬ ವಿದೇಶಿ ತಳಿಯ ಹಾಲನ್ನು ಸೇವಿಸುತ್ತದೆ. ಸಾಮಾನ್ಯವಾಗಿ, ಹಾಲು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ ಮತ್ತು ಮೂಳೆಗಳನ್ನು ಬಲಪಡಿಸುತ್ತದೆ. ಹೋಲ್‌ ಸ್ಟೈನ್-ಫ್ರೀಸಿಯನ್ ಹಸುವಿನ ಹಾಲು ಸಾಮಾನ್ಯ ಹಸುವಿನ ಹಾಲಿಗಿಂತ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುತ್ತದೆ ಎಂದು ಹೇಳಲಾಗುತ್ತದೆ. ಅವು ಪ್ರೋಟೀನ್, ಸೂಕ್ಷ್ಮ ಪೋಷಕಾಂಶಗಳು, ಅಗತ್ಯ ಕೊಬ್ಬುಗಳು, ಕಾರ್ಬೋಹೈಡ್ರೇಟ್ಗಳು ಮತ್ತು ವಿಟಮಿನ್ ಡಿ ಯಲ್ಲಿ ಹೆಚ್ಚು ಸಮೃದ್ಧವಾಗಿವೆ.

Image Credit: Timesofagriculture

ಇದೊಂದು ವಿಶೇಷ ಹಾಲು
ಅಂಬಾನಿ ಕುಟುಂಬದವರಲ್ಲದೆ ಸಚಿನ್ ತೆಂಡೂಲ್ಕರ್ ಮತ್ತು ಅಮಿತಾಬ್ ಬಚ್ಚನ್ ಕುಟುಂಬಗಳೂ ಈ ಹಾಲನ್ನು ಬಳಸುತ್ತಾರೆ. ಪುಣೆಯಲ್ಲಿ ವಿಶೇಷ ಹೈಟೆಕ್ ಮಟ್ಟದಲ್ಲಿ 35 ಎಕರೆಯಲ್ಲಿ ಡೈರಿ ಫಾರ್ಮ್ ಅನ್ನು ಸ್ಥಾಪಿಸಲಾಗಿದೆ. ಅಲ್ಲಿಂದಲೇ ಅಂಬಾನಿ ಕುಟುಂಬಕ್ಕೆ ಹಾಲು ಪೂರೈಕೆಯಾಗುತ್ತದೆ. ಈ ಹೋಲ್‌ ಸ್ಟೈನ್-ಫ್ರೀಸಿಯನ್ ಹಸುಗಳು ಸಾಮಾನ್ಯವಾಗಿ ನೀರು ಕುಡಿಯುವುದಿಲ್ಲ. RO ನೀರು ಮಾತ್ರ ಕುಡಿಯುತ್ತಿದ್ದು, ತಿನ್ನುವ ಆಹಾರವೂ ವಿಶೇಷ. ಈ ಹಸು ದಿನಕ್ಕೆ ಕನಿಷ್ಠ 25 ಲೀಟರ್ ಹಾಲು ನೀಡುತ್ತದೆ. ಈ ಹಾಲಿನ ಬೆಲೆ ಕೂಡ ಸಾಕಷ್ಟು ದುಬಾರಿಯಾಗಿದೆ.

Image Credit: Times Of India
Ads By Google
Ramya M: Ramya M from Bengaluru, She is a writer with more than five years of professional experience. Graduate from Karnataka University and has contributed her expertise to various Kannada news networks. She Loves to Write engaging articles covering a wide range of topics, including technology, business news, and lifestyle.