Ads By Google

Mukesh Ambani: ಮಗನ ವಿವಾಹಕ್ಕೂ ಮುನ್ನವೇ ದೊಡ್ಡ ನಿರ್ಧಾರ ತಗೆದುಕೊಂಡ ಮುಕೇಶ್ ಅಂಬಾನಿ, ಹೊಸ ಘೋಷಣೆ.

mukesh ambani son anant ambani marriage

Image Credit: Original Source

Ads By Google

Mukesh Ambani New Business: ಸದ್ಯ ದೇಶದಲ್ಲೆಡೆ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹದ ಬಗ್ಗೆ ಸುದ್ದಿಗಳು ವೈರಲ್ ಆಗುತ್ತಿದೆ. ದೇಶದ ಶ್ರೀಮಂತ ವ್ಯಕ್ತಿಯಾಗಿರುವ Mukesh Ambani ತಮ ಕೊನೆಯ ಮಗನ ಮದುವೆಯನ್ನು ಬಹಳ ಅದ್ದೂರಿಯಾಗಿ ಮಾಡಲಿದ್ದಾರೆ. ಇಡೀ ಅಂಬಾನಿ ಕುಟುಂಬ ಅನಂತ್ ಅಂಬಾನಿ ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಇನ್ನು ಮದುವೆಗೆ ದೇಶದ ಮಹಾನ್ ಗಣ್ಯರು ಸಾಕ್ಷಿಯಾಗಲಿದ್ದಾರೆ. ಜುಲೈ 12 ರಂದು ನಡೆಯಲಿರುವ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆಗಳು ಸಿದ್ದತೆಗಳು ಜೋರಾಗಿಯೇ ನಡೆಯುತ್ತಿದೆ. ಸದ್ಯ ಅನಂತ್ ಅಂಬಾನಿ ಮದುವೆಯ ದಿನಾಂಕ ಹತ್ತಿರವಾಗುತ್ತಿದಂತೆ ಅಂಬಾನಿ ಕುಟುಂಬದಿಂದ ಬಿಗ್ ಅಪ್ಡೇಟ್ ಹೊರಬಿದ್ದಿದೆ.

Image Credit: Moneyseth

ಮಗನ ವಿವಾಹಕ್ಕೂ ಮುನ್ನವೇ ದೊಡ್ಡ ನಿರ್ಧಾರ ತಗೆದುಕೊಂಡ ಮುಕೇಶ್ ಅಂಬಾನಿ
ಅನಂತ್ ಮದುವೆಗೂ ಮುನ್ನವೇ ಅಂಬಾನಿ ಕುಟುಂಬದಿಂದ ಮತ್ತೊಂದು ದೊಡ್ಡ ಸುದ್ದಿ ಬಂದಿದೆ. ವರದಿಗಳ ಪ್ರಕಾರ, ಮುಕೇಶ್ ಅಂಬಾನಿಯವರ ಕಂಪನಿ, ರಿಲಯನ್ಸ್ ರಿಟೇಲ್ ಫ್ರಾನ್ಸ್‌ ನ ಪ್ರಸಿದ್ಧ ಕ್ರೀಡಾ ಸರಪಳಿ ಡೆಕಾಥ್ಲಾನ್‌ ಗೆ ಪೈಪೋಟಿ ನೀಡುವ ಕ್ರೀಡಾ ಸಾಮಗ್ರಿಗಳನ್ನು ಮಾರಾಟ ಮಾಡುವ ಬ್ರಾಂಡ್ ಅನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿದೆ.

ದೆಹಲಿ-ಮುಂಬೈ ಮತ್ತು ಚೆನ್ನೈನಂತಹ ನಗರಗಳಲ್ಲಿ ಸರಿಯಾದ ಸ್ಥಳದಲ್ಲಿ 8,000 ರಿಂದ 10,000 ಚದರ ಅಡಿ ವಿಸ್ತೀರ್ಣದ ಶೋರೂಮ್‌ ಗಳನ್ನು ತೆರೆಯಲು ರಿಲಯನ್ಸ್ ಸಿದ್ಧವಾಗಿದೆ. ಹೊಸ ಬ್ರಾಂಡ್‌ ನ ಹೆಸರಿನ ಬಗ್ಗೆ ಮಾಹಿತಿ ಇನ್ನೂ ಬಹಿರಂಗಗೊಂಡಿಲ್ಲ. ರಿಲಯನ್ಸ್ ಡೆಕಾಥ್ಲಾನ್ ನ ಯಶಸ್ವಿ ವ್ಯವಹಾರ ಮಾದರಿಯನ್ನು ಅನುಸರಿಸುತ್ತಿದೆ ಎಂದು ಹೇಳಲಾಗಿದೆ. ಅಂದರೆ ರಿಲಯನ್ಸ್ ರಿಟೇಲ್ ಡೆಕಾಥ್ಲಾನ್ ನಂತಹ ಕ್ರೀಡಾ ಉಡುಪುಗಳು ಮತ್ತು ಕ್ರೀಡೆಗೆ ಸಂಬಂಧಿತ ವಸ್ತುಗಳನ್ನು ಮಾರಾಟ ಮಾಡುವ ಯೋಜನೆ ಹಾಕಿಕೊಂಡಿದೆ.

2009 ರಲ್ಲಿ ಭಾರತದಲ್ಲಿ ಆರಂಭವಾಗಿದೆ ಡೆಕಾಥ್ಲಾನ್ ಬ್ರಾಂಡ್
ಕ್ರೀಡೆಗೆ ಸಂಬಂಧಿಸಿದ ವಸ್ತುಗಳನ್ನು ಮಾರಾಟ ಮಾಡುವ ಬ್ರ್ಯಾಂಡ್ ಡೆಕಾಥ್ಲಾನ್ ಹೆಚ್ಚು ಜನಪ್ರಿಯತೆ ಪಡೆದಿದೆ. ಈ ಸಂಸ್ಥೆಯು 2009 ರಲ್ಲಿ ಭಾರತದಲ್ಲಿ ತನ್ನ ಔಟ್‌ ಲೆಟ್ ಅನ್ನು ಪ್ರಾರಂಭಿಸಿತು. ಅಂದಿನಿಂದ ಅವರ ಗಳಿಕೆಯು ಸ್ಥಿರವಾಗಿ ಹೆಚ್ಚುತ್ತಿದೆ. ಕಳೆದ ವರ್ಷ (FY23) ಅದರ ಗಳಿಕೆ 3,955 ಕೋಟಿ ರೂ. ಆಗಿದೆ. FY22 ರಲ್ಲಿ ಡೆಕಾಥ್ಲಾನ್‌ ನ ಅಂಕಿ ಅಂಶವು ಸುಮಾರು 2,936 ಕೋಟಿ ರೂ. ಆಗಿದೆ. ಇಷ್ಟು ಮಾತ್ರವಲ್ಲದೆ, ಇತರ ಕ್ರೀಡಾ ಬ್ರಾಂಡ್‌ ಗಳಾದ Puma, Adidas, Skechers ಮತ್ತು Asics ಗಳ ಗಳಿಕೆಯು ಕಳೆದ ಕೆಲವು ವರ್ಷಗಳಲ್ಲಿ ಗಮನಾರ್ಹವಾಗಿ ಹೆಚ್ಚಾಗಿದೆ. ಸದ್ಯ ಮುಕೇಶ್ ಅಂಬಾನಿ ಅವರು ಈ ಕಂಪನಿಗೆ ಠಕ್ಕರ್ ನೀಡಲು ಹೊಸ ಉದ್ಯಮ ಆರಂಭಿಸಲು ಯೋಜನೆ ಹಾಕಿಕೊಂಡಿದ್ದಾರೆ ಎನ್ನಲಾಗುತ್ತಿದೆ.

Image Credit: Zee News
Ads By Google
Nagarathna Santhosh: Nagarathna Santhosh has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in