Multiple Bank Accounts Disadvantages: ಇತ್ತೀಚಿನ ದಿನಗಳಲ್ಲಿ ಬ್ಯಾಂಕಿಂಗ್ ವಲಯದಲ್ಲಿ ಹಲವಾರು ಬದಲಾವಣೆಗಳನ್ನ ನಾವು ಕಾಣಬಹುದಾಗಿದೆ. RBI ಹಣಕಾಸು ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಹೊಸ ಹೊಸ ನಿಯಮಗಳನ್ನ ಜಾರಿಗೆ ತಂದಿದೆ. ಹಣವನ್ನು ಸುರಕ್ಷಿತವಾಗಿಡಲು ಜನರು ಬ್ಯಾಂಕ್ ಖಾತೆಯನ್ನು ಬಳಕೆ ಮಾಡುತ್ತಾರೆ. ಆದರೆ ಎರಡಕ್ಕಿಂತ ಹೆಚ್ಚಿನ ಬ್ಯಾಂಕ್ ಖಾತೆ ಹೊಂದಿರುವುದು ಕೆಲವು ಸಮಸ್ಯೆಗಳಿಗೆ ಕಾರಣವಾಗಬಹುದು. ಇದೀಗ ನಾವು ಎರಡಕ್ಕಿಂತ ಹೆಚ್ಚಿನ ಖಾತೆ ಹೊಂದಿದ್ದರೆ ಆಗುವ ಸಮಸ್ಯೆಗಳು ಏನು ಮತ್ತು ಸಮಸ್ಯೆ ಬಗೆಹರಿಸುವುದು ಹೇಗೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಎರಡಕ್ಕಿಂತ ಹೆಚ್ಚಿನ ಬ್ಯಾಂಕ್ ಖಾತೆಯಿಂದ ಎದುರಾಗುವ ಸಮಸ್ಯೆಗಳು
ನಿರ್ವಹಣಾ ಶುಲ್ಕಗಳು ಮತ್ತು ದಂಡ
ಪ್ರತಿ ಖಾತೆಯಲ್ಲಿ ಕನಿಷ್ಠ ಮೊತ್ತ ನಿರ್ವಹಿಸದಿದ್ದರೆ ದಂಡ ವಿಧಿಸಬಹುದು ಮತ್ತು ಖಾತೆ ನಿರ್ವಹಣಾ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ. ಕೆಲ ಬ್ಯಾಂಕುಗಳು 0 ಬ್ಯಾಲನ್ಸ್ ಅಕೌಂಟ್ ಸೌಲಭ್ಯ ನೀಡುತ್ತವೆ. ಇನ್ನೂ ಕೆಲ ಬ್ಯಾಂಕುಗಳ ಖಾತೆಯಲ್ಲಿ 1000 ರೂ ಕನಿಷ್ಠ ಬ್ಯಾಲನ್ಸ್ ಇರಬೇಕು ಮತ್ತು ಕೆಲ ಬ್ಯಾಂಕ್ ಖಾತೆಗಳಲ್ಲಿ 10,000 ರೂ ಮಿನಿಮಮ್ ಬ್ಯಾಲನ್ಸ್ ಇರಬೇಕು.
ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ
ನಿಷ್ಕ್ರಿಯ ಖಾತೆಗಳು (Inactive Accounts) ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಕಡಿಮೆ ಮಾಡಬಹುದು. ಕ್ರೆಡಿಟ್ ಸ್ಕೋರ್ ಕಡಿಮೆ ಆದರೆ ಬ್ಯಾಂಕ್ ಸಾಲ ಸಿಗುವುದು ಕಷ್ಟ, ಹಾಗೆ ಸಾಲದ ಬಡ್ಡಿದರ ಕೂಡ ಹೆಚ್ಚಾಗುತ್ತದೆ.
ತೆರಿಗೆ ಸಲ್ಲಿಕೆಯಲ್ಲಿ ಗೊಂದಲ
ಆದಾಯ ತೆರಿಗೆ ಸಲ್ಲಿಸುವಾಗ ಎಲ್ಲಾ ಖಾತೆಗಳ ವಿವರಗಳನ್ನು ನೀಡಬೇಕಾಗಬಹುದು, ಇದು ಗೊಂದಲವನ್ನು ಸೃಷ್ಟಿಸುತ್ತದೆ. ಹಲವು ಬ್ಯಾಂಕ್ ಖಾತೆ ಹೊಂದಿದ್ದರೆ ತೆರಿಗೆ ಪಾವತಿ ಮಾಡುವ ಸಮಯದಲ್ಲಿ ನಿಮಗೆ ಬ್ಯಾಂಕ್ ಸ್ಟೇಟ್ಮೆಂಟ್ ನೀಡುವ ಸಮಯದಲ್ಲಿ ಗೊಂದಲವಾಗಬಹುದು.
ಗೊಂದಲ ಮತ್ತು ನಿರ್ವಹಣೆ
ಒಂದೇ ಸಮಯದಲ್ಲಿ ಅನೇಕ ಖಾತೆಗಳನ್ನು ಟ್ರ್ಯಾಕ್ ಮಾಡುವುದು ಕಷ್ಟಕರವಾಗುತ್ತದೆ, ವಿಶೇಷವಾಗಿ ಖಾತೆಗಳ ಉದ್ದೇಶಗಳು ಬೇರೆಯಾಗಿದ್ದರೆ (ಉದಾಹರಣೆಗೆ, ಸಂಬಳ ಖಾತೆ). ಪೇಮೆಂಟ್ ಮತ್ತು ಇತರೆ ಹಣಕಾಸು ವಹಿವಾಟು ಮಾಡುವ ಸಮಯದಲ್ಲಿ ಬೇರೆಬೇರೆ ಬ್ಯಾಂಕ್ ಖಾತೆ ಆಯ್ಕೆ ಮಾಡಬೇಕಾಗುತ್ತದೆ ಮತ್ತು ಇದು ಗೊಂದಲಕ್ಕೆ ಕಾರಣವಾಗಬಹುದು.
ನಿಷ್ಕ್ರಿಯ ಖಾತೆಗಳು
ಕೆಲಸ ಬದಲಿಸಿದಾಗ ಸಂಬಳ ಖಾತೆಗಳು ನಿಷ್ಕ್ರಿಯವಾಗಬಹುದು ಮತ್ತು ಅವುಗಳನ್ನು ಸರಿಯಾಗಿ ಮುಚ್ಚದಿದ್ದರೆ ಸಮಸ್ಯೆ ಉಂಟಾಗಬಹುದು. ಕೆಲವು ಬ್ಯಾಂಕ್‌ಗಳು ನಿಷ್ಕ್ರಿಯ ಖಾತೆಗಳಿಗೆ ದಂಡ ವಿಧಿಸುತ್ತವೆ. ದಂಡದಿಂದ ತಪ್ಪಿಸಿಕೊಳ್ಳಬೇಕಾದರೆ ಬಳಕೆ ಮಾಡದ ಖಾತೆಗಳನ್ನು ಮುಚ್ಚುವುದು ಸೂಕ್ತವಾಗಿದೆ.
ಎರಡಕ್ಕಿಂತ ಹೆಚ್ಚಿನ ಬ್ಯಾಂಕ್ ಖಾತೆ ಅನುಕೂಲಗಳು
- ಸರ್ಕಾರದ ಸಬ್ಸಿಡಿಗೆ ಒಂದು ಖಾತೆ, ಪಿಂಚಣಿ ಬರಲು, ಉಳಿತಾಯ ಹಣ ಇಡಲು, ದೈನಂದಿನ ವೆಚ್ಚಕ್ಕೆ, ಆನ್ಲೈನ್ ಪೇಮೆಂಟ್ ಗಳಿಗೆ ಹೀಗೆ ಬೇರೆ ಬೇರೆ ಖಾತೆ ಇದ್ದರೆ ಹಣಕಾಸು ವಹಿವಾಟು ಸುಲಭವಾಗುತ್ತದೆ.
- ಒಂದು ಬ್ಯಾಂಕ್ ನಲ್ಲಿ ತಾಂತ್ರಿಕ ದೋಷ ಉಂಟಾದರೆ ಇನ್ನೊಂದು ಬ್ಯಾಂಕ್ ನಲ್ಲಿ ಹಣದ ವಹಿವಾಟು ನೆಡೆಸಬಹುದು.
- ಹೆಚ್ಚು ಹೆಚ್ಚು ATM ನಲ್ಲಿ ನಗದು ವಹಿವಾಟು ಮಾಡುವವರಿಗೆ ಅನುಕೂಲವಾಗಿದೆ. ಏಕೆಂದರೆ ಒಂದು ATM ಕಾರ್ಡ್ ನಲ್ಲಿ ತಿಂಗಳಿಗೆ ನಿರ್ದಿಷ್ಟ ಸಂಖ್ಯೆಯ ವಹಿವಾಟು ಮಾಡಲು ಮಾತ್ರ ಸಾಧ್ಯ. ಬೇರೆ ಬ್ಯಾಂಕ್ ನ ATM ಕಾರ್ಡ್ ಇದ್ದರೆ ಹೆಚ್ಚು ಬಾರಿ ಹಣವನ್ನ ವಿಥ್ ಡ್ರಾ ಮಾಡಿಕೊಳ್ಳಬಹುದು.
ಸಮಸ್ಯೆಗೆ ಪರಿಹಾರಗಳು
- ಅನಗತ್ಯ ಖಾತೆಗಳನ್ನು ಮುಚ್ಚಿ.
- ಪ್ರತಿ ಖಾತೆಯ ಕನಿಷ್ಠ ಬಾಕಿ ಮತ್ತು ನಿಯಮಗಳನ್ನು ಗಮನದಲ್ಲಿಟ್ಟುಕೊಳ್ಳಿ.
- ಖಾತೆಗಳ ಉದ್ದೇಶವನ್ನು ಸ್ಪಷ್ಟವಾಗಿಟ್ಟುಕೊಂಡು, ಅಗತ್ಯವಿರುವಷ್ಟು ಮಾತ್ರ ಖಾತೆಗಳನ್ನು ಇಟ್ಟುಕೊಳ್ಳಿ.
ವಿಶೇಷ ಸೂಚನೆ: ನಾಡುನುಡಿ ಮಾದ್ಯಮದಲ್ಲಿ ಯಾವುದೇ ಸುಳ್ಳುಸುದ್ದಿ ಪ್ರಕಟಿಸಲಾಗುವುದಿಲ್ಲ. ಈ ವಿಷಯ ಬ್ಯಾಂಕಿಂಗ್ ನಿಯಮ ಮತ್ತು ವ್ಯಾವಹಾರಿಕ ವಿಷಯಕ್ಕೆ ಸಂಬಂಧಿಸಿದ್ದಾಗಿದೆ.

