Saving Account: ಎರಡು ಅಥವಾ ಅದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿರುವವರಿಗೆ ಹೊಸ ನಿಯಮ, RBI ಆದೇಶ.
ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿರುವವರು ತಿಳಿದುಕೊಳ್ಳ ಬೇಕಾದ ಅಗತ್ಯ ಮಾಹಿತಿ.
Multiple Saving Account Rule: ಇತ್ತೀಚಿನ ದಿನಗಳಲ್ಲಿ ಆರ್ ಬಿಐ (RBI) ಬ್ಯಾಂಕ್ ಗಳಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರವನ್ನು ಕೈಗೊಳ್ಳುತ್ತಿದೆ. ಈಗಾಗಲೇ ಆರ್ ಬಿಐ ಹೂಡಿಕೆ ಮತ್ತು ಗಳಿಕೆ ಕಡಿಮೆ ಇರುವ ಕೆಲವು ಸಹಕಾರಿ ಬ್ಯಾಂಕ್ ಗಳ ಪರವಾನಗಿಯನ್ನು ರದ್ದುಪಡಿಸಿದೆ. ಆರ್ ಬಿಐ ನಿಯಮ ಉಲ್ಲಂಘಿಸಿದ ಬ್ಯಾಂಕ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ.
ಇನ್ನು ಬ್ಯಾಂಕ್ ನ ಪ್ರತಿಯೊಬ್ಬ ಖಾತೆದಾರರು ಕೂಡ ಬ್ಯಾಂಕ್ ನಿಯಮದ ಬಾಗ್ಗೆ ತಿಳಿದುಕೊಂಡಿರಬೇಕು. ದೇಶದಲ್ಲಿ ಹೆಚ್ಚಿನ ಜನರು ಬ್ಯಾಂಕ್ ಖಾತೆಯನ್ನು (Bank Account) ಹೊಂದಿರುತ್ತಾರೆ. ಇನ್ನು ಕೆಲವರು ಒಂದ್ಕಕಿಂತ ಹೆಚ್ಚಿನ ಬ್ಯಾಂಕ್ ಖಾತೆಯನ್ನು ಕೂಡ ಹೊಂದಿರುತ್ತಾರೆ.
ಉಳಿತಾಯ ಖಾತೆ
ಸಾಮಾನ್ಯವಾಗಿ ಜನರು ಹೆಚ್ಚಾಗಿ ಉಳಿತಾಯ ಖಾತೆಯನ್ನು (Saving Account) ಹೊಂದಿರುತ್ತಾರೆ. ಎರಡಕ್ಕಿಂತ ಹೆಚ್ಚಿನ ಉಳಿತಾಯ ಖಾತೆಯನ್ನು ಕೂಡ ಕೆಲವರು ಹೊಂದಿರುತ್ತಾರೆ. ಇದೀಗ ಎರಡು ಅಥವಾ ಅದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿರುವವರಿಗೆ ಹೊಸ ನಿಯಮವನ್ನು ಜಾರಿಗೊಳಿಸಿದೆ. ನೀವು ಕೂಡ ಬ್ಯಾಂಕ್ ಗಳಲ್ಲಿ ಒಂದಿಕ್ಕಿಂತ ಹೆಚ್ಚಿನ ಖಾತೆಯನ್ನು ಹೊಂದಿದ್ದಾರೆ ಈ ನಿಯಮ ನಿಮಗೆ ಉಪಯುಕ್ತವಾಗುತ್ತದೆ.
ಎರಡಕ್ಕಿಂತ ಹೆಚ್ಚು ಬ್ಯಾಂಕುಗಳಲ್ಲಿ ಖಾತೆ ಇದ್ದರೆ ಏನಾಗುತ್ತದೆ
ಒಂದಕ್ಕಿಂತ ಹೆಚ್ಚಿನ ಉಳಿತಾಯ ಖಾತೆಯನ್ನು ಹೊಂದಿದ್ದರೆ ಹೆಚ್ಚಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಯಾವುದೇ ವ್ಯಕ್ತಿಯು ಆದಾಯವನ್ನು ಗಳಿಸುತ್ತಿದ್ದರೆ ಬಹು ಉಳಿತಾಯ ಖಾತೆಯನ್ನು ಹೊಂದಿರುವುದಕ್ಕಿಂತ ಒಂದೇ ಉಳಿತಾಯ ಖಾತೆಯನ್ನು ಹೊಂದಿದರೆ ಯಾವುದೇ ರೀತಿಯ ನಷ್ಟ ಎದುರಾಗುವುದಿಲ್ಲ.
ಇನ್ನು ತೆರಿಗೆ ಮತ್ತು ಹೂಡಿಕೆ ತಜ್ಞರು ಕೂಡ ಬಹು ಉಳಿತಾಯ ಖಾತೆ ಹೊಂದುವ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ತೆರಿಗೆ ಪಾವತಿಯ ಸಮಯದಲ್ಲಿ ಉಳಿತಾಯ ಖಾತೆಯ ವಿವರವನ್ನು ನೀಡಬೇಕಾಗುತ್ತದೆ.
ಎರಡು ಅಥವಾ ಅದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿರುವವರ ಗಮನಕ್ಕೆ
ಒಂದು ಉಳಿತಾಯ ಖಾತೆಯ ನಿರ್ವಹಣೆಯು ಗ್ರಾಹಕರಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ. ಒಂದು ಬ್ಯಾಂಕ್ ನಿರ್ವಹಣೆಯು ತೆರಿಗೆ ರಿಟರ್ನ್ ಸಲ್ಲಿಸುವಾಗ ಬ್ಯಾಂಕಿಂಗ್ ವಿವರಗಳು ಒಂದೇ ಬ್ಯಾಂಕ್ ಖಾತೆಯಲ್ಲಿ ಲಭ್ಯವಿದ್ದರೆ ತೆರಿಗೆ ಪಾವತಿ ಸುಲಭವಾಗುತ್ತದೆ. ಇನ್ನು ಒಂದು ಉಳಿತಾಯ ಖಾತೆಯನ್ನು ಹೊಂದಿದ್ದರೆ ಹೆಚ್ಚಿನ ಶುಲ್ಕ ಪಾವತಿಯಿಂದ ತಪ್ಪಿಸಿಕೊಳ್ಳಬಹುದು.
ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ ಕಷ್ಟ
ಡೆಬಿಟ್ ಕಾರ್ಡ್, AMC, SMS ಸೇವಾ ಶುಲ್ಕ, ಕನಿಷ್ಠ ಬ್ಯಾಲೆನ್ಸ್ ಇತ್ಯಾದಿಗಳ ಶುಲ್ಕ ಪಾವತಿಯ ಹೊರೆ ಕಡಿಮೆಯಾಗುತ್ತದೆ. ಬಹು ಉಳಿತಾಯ ಖಾತೆಯು CIBIL ರೇಟಿಂಗ್ ಮೇಲೆ ಪರಿಣಾಮವನ್ನ ಬೀರುತ್ತದೆ.
ಇನ್ನು ಎರಡಕ್ಕಿಂತ ಹೆಚ್ಚಿನ ಉಳಿತಾಯ ಖಾತೆಯನ್ನು ಹೊಂದಿದ್ದರೆ ಒಂದು ಉಳಿತಾಯ ಖಾತೆಗೆ TDS ಅನ್ವಯಿಸುವ ಬದಲಾಗಿ ಎಲ್ಲ ಉಳಿತಾಯ ಖಾತೆಗೆ TDS ಅನ್ವಯಿಸುವ ಮೂಲಕ ಕೆಲವೊಮ್ಮೆ ವಂಚನೆಗೆ ಒಳಗಾಗಬೇಕಾಗುತ್ತದೆ. ಹೆಚ್ಚಿನ ಉಳಿತಾಯ ಖಾತೆ ಹೊಂದಿದ್ದಾರೆ ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ ಕಷ್ಟವಾಗುತ್ತದೆ.