Voter ID: ವೋಟರ್ ID ಇದ್ದವರಿಗೆ ರಾತ್ರೋರಾತ್ರಿ ಕೇಂದ್ರದಿಂದ ಹೊಸ ನಿಯಮ, ಈ ತಪ್ಪಿಗೆ ದಂಡದ ಜೊತೆ ಜೈಲು ಶಿಕ್ಷೆ.
ವೋಟರ್ ಕಾರ್ಡ್ ಇದ್ದವರು ಈ ತಪ್ಪು ಮಾಡಿದರೆ ದಂಡದ ಜೊತೆಗೆ ಜೈಲು ಶಿಕ್ಷೆ ಖಚಿತ.
Multiple Voter ID Rule: ಭಾರತೀಯರಿಗೆ Voter ID ಮುಖ್ಯ Identity ದಾಖಲೆಯಾಗಿದೆ. ದೇಶದಲ್ಲಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಕೂಡ Voter ID ದಾಖಲೆಯನ್ನು ಹೊಂದಿರಬೇಕು. ಭಾರತೀಯರಿಗೆ ಮತದಾನ ತಮ್ಮ ಹಕ್ಕಾಗಿರುತ್ತದೆ. ತಮ್ಮ ಹಕ್ಕನ್ನು ಪಡೆಯಲು ಭಾರತದ ಪ್ರತಿ ಪ್ರಜೆ Voter ID ಹೊಂದಿರುವುದು ಕಡ್ಡಾಯ. ಇನ್ನು Election Commission of India ಈ ಮತದಾರರ ಗುರುತಿನ ಚೀಟಿಗೆ ಸಂಬಂಧಿಸಿದಂತೆ ಸಾಕಷ್ಟು ನಿಯಮವನ್ನು ರೂಪಿಸಿದೆ.
Voter ID Importance
ಯಾವುದೇ ವ್ಯಕ್ತಿ Voter ID ಮಾಡಿಸಿದರು ಭಾರತೀಯ ಚುನಾವಣಾ ಆಯೋಗದ ನಿಯಮದ ಪ್ರಕಾರವೇ ಮಾಡಿಸಬೇಕಾಗುತ್ತದೆ. ದೇಶದಲ್ಲಿ 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವರ್ಷದವರು ತಮ್ಮ ಮತ ಚಲಾಯಿಸಲು Voter ID ಹೊಂದಿರುವುದು ಕಡ್ಡಾಯ. Voter ID ಇಲ್ಲದೆ ಇದ್ದರೆ ಆ ವ್ಯಕ್ತಿ ಮತ ಹಾಕುವ ಅರ್ಹತೆಯನ್ನು ಕಳೆದುಕೊಳ್ಳುತ್ತಾನೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ.
ಒಂದಕ್ಕಿಂತ ಹೆಚ್ಚಿನ Voter ID ಹೊಂದುವಂತಿಲ್ಲ
ಇನ್ನು ಭಾರತೀಯ ಪ್ರಜೆಯಾದವರು ಕೇವಲ ಒಂದೇ ಒಂದು ಗುರುತಿನ ಪುರವಣೆಯನ್ನು ಹೊಂದಿರಬೇಕು. Election Commission of India ಒಬ್ಬ ವ್ಯಕ್ತಿಗೆ ಒಂದೇ Voter ID ಯನ್ನು ನೀಡುವಂತೆ ನಿಯಮ ರೂಪಿಸಿದರೆ ಈ ನಿಯಮವನ್ನು ಉಲ್ಲಂಘಿಸಿ ಯಾರಾದರೂ ಒಂದಕ್ಕಿಂತ ಹೆಚ್ಚು Voter ID ಹೊಂದಿದ್ದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.
ದೆಹಲಿ ಸಿಎಂ ಕೇಜ್ರಿವಾಲ್ ಪತ್ನಿ ಸುನೀತಾ ಎರಡು ವಿಭಿನ್ನ ಕ್ಷೇತ್ರಗಳ ಮತದಾನದ ಗುರುತಿನ ಚೀಟಿ ಹೊಂದಿದ್ದಕ್ಕಾಗಿ ದಂಡ ವಿಧಿಸಿದ್ದಾರೆ. ಎರಡು Voter ID ಹೊಂದಿದರೆ ಯಾವ ರೀತಿ ತೊಂದರೆ ಆಗುತ್ತದೆ ಎನ್ನುವ ಬಗ್ಗೆ ಇದೀಗ ಮಾಹಿತಿ ತಿಳಿಯೋಣ.
ಒಂದಕ್ಕಿಂತ ಹೆಚ್ಚು Voter ID ಹೊಂದಿದರೆ ದಂಡದ ಜೊತೆ ಜೈಲು ಶಿಕ್ಷೆ ಖಚಿತ
ಒಂದಕ್ಕಿಂತ ಹೆಚ್ಚು ಪ್ರದೇಶದ ಮತದಾರರ ಗುರುತಿನ ಚೀಟಿಯನ್ನು ಹೊಂದಿರುವುದು ಸೆಕ್ಷನ್ 17 ರ ಉಲ್ಲಂಘನೆಯಾಗಿದೆ. ಒಂದಕ್ಕಿಂತ ಹೆಚ್ಚು Voter ID ಹೊಂದಿದರೆ 1 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಬಹುದು. ನಿಮ್ಮ ಬಳಿಯೂ ಎರಡು ಕಾರ್ಡ್ ಗಳಿದ್ದರೆ ನೀವು ನಿಮ್ಮ ಒಂದು ಹಳೆಯ ಕಾರ್ಡ್ ಅನ್ನು ಮುಚ್ಚಬೇಕು.
ಕೆಲವೊಮ್ಮೆ ಮತದಾನ ಮಾಡಲು ತಿಳಿದಿರುವ ಜನರು ಎರಡು ಮತದಾರರ ಗುರುತಿನ ಚೀಟಿಗಳನ್ನು ಬಳಸುತ್ತಾರೆ. ಭಾರತೀಯ ಚುನಾವಣಾ ಆಯೋಗದ ನಿಯಮಗಳನ್ನು ಅನುಸರಿಸದಿದ್ದರೆ, ಅಂತಹ ಜನರು ದಂಡವನ್ನು ಪಾವತಿಸಬೇಕಾಗಬಹುದು.
ಒಂದಕ್ಕಿಂತ ಹೆಚ್ಚು Voter ID ಇದ್ದರೆ ಏನು ಮಾಡಬೇಕು..?
ನೀವು ಎರಡು ಗುರುತಿನ ಚೀಟಿಗಳನ್ನು ಹೊಂದಿದ್ದರೆ, ಇದಕ್ಕಾಗಿ ನೀವು ಭಾರತದ ಚುನಾವಣಾ ಕಚೇರಿಗೆ ಹೋಗಬೇಕಾಗುತ್ತದೆ. ಇಲ್ಲಿಗೆ ಹೋಗುವ ಮೂಲಕ ನೀವು ನಿಮ್ಮ ಫಾರ್ಮ್ ಸಂಖ್ಯೆ 7 ಅನ್ನು ಭರ್ತಿ ಮಾಡಬೇಕು ಮತ್ತು ಅದನ್ನು ಸಲ್ಲಿಸಬೇಕು.
ಇದಲ್ಲದೆ, ನೀವು ಈ ಫಾರ್ಮ್ ಅನ್ನು SDM, BLO ಕಚೇರಿಯಲ್ಲಿ ಸಲ್ಲಿಸಬೇಕು. ಈ ರೀತಿಯಾಗಿ ಮಾಡುವ ಮೂಲಕ ನೀವು ಹೆಚ್ಚುವರಿ Voter ID ಅನ್ನು ರದ್ದುಮಾಡಿಕೊಳ್ಳಬಹುದು. ನಿಮ್ಮ ಬಳಿ ಒಂದಕ್ಕಿಂತ ಹೆಚ್ಚಿನ Voter ID ಇದ್ದರೆ ಇಂದೇ ಈ ಕೆಲಸ ಮಾಡುವುದು ಉತ್ತಮ.