Divorce Alimony: ಡೈವೋರ್ಸ್ ಕೊಟ್ಟರೆ ಪತ್ನಿ ಜೊತೆಗೆ ಸಾಕು ನಾಯಿಗೂ ಜೀವನಾಂಶ ಕೊಡಬೇಕು, ಹೈಕೋರ್ಟ್ ಮಹತ್ವದ ತೀರ್ಪು.
ಪತ್ನಿ ಜೊತೆಗೆ ಸಾಕು ನಾಯಿಗಳಿಗೂ ಜೀವನಾಂಶ ನೀಡುವಂತೆ ಮುಂಬೈ ನ ಬಾಂದ್ರಾ ಕೋರ್ಟ್ ಆದೇಶ ನೀಡಿದೆ.
Mumbai Bandra Court New Judgement: ಮುಂಬೈ ನ ಬಾಂದ್ರಾ ಕೋರ್ಟ್ ಇದೀಗ ಕುತೂಹಲಕಾರಿ ತೀರ್ಪು ನೀಡಿದೆ. ಗಂಡ ಹೆಂಡತಿ ಬೇರೆಯಾದರೆ ಪತಿ ತನ್ನ ಹೆಂಡತಿಗೆ ಜೀವನಾಂಶ ಕೊಡುವುದು ಸಾಮಾನ್ಯವಾಗಿದೆ. ಆದರೆ ಪತ್ನಿ ಅವರು ಅವರ ಸಾಕು ನಾಯಿಗಳಿಗೆ ವಸತಿ ಕಲ್ಪಿಸುವಂತೆ ಇದೀಗ ಮುಂಬೈ ಕೋರ್ಟ್ ಆದೇಶ ಹೊರಡಿಸಿದೆ. ಈ ತೀರ್ಪು ಎಲ್ಲರಿಗೂ ಸಹ ಕುತೂಹಲ ಮೂಡಿಸಿದೆ.
ಪತ್ನಿ ಜೊತೆ ಸಾಕು ನಾಯಿಗಳಿಗೂ ಜೀವನಾಂಶ
55 ವರ್ಷದ ಮಹಿಳೆಯೊಬ್ಬರು 1986 ರಲ್ಲಿ ವ್ಯತಿಯೊಬ್ಬನ ಜೊತೆಗೆ ವಿವಾಹವಾಗಿದ್ದರು. ಬೆಂಗಳೂರಿನಲ್ಲಿ ಈ ಜೋಡಿ ವ್ಯಾಪಾರ ಮಾಡುತ್ತಾರೆ. ಈ ಜೋಡಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇಬ್ಬರು ಮದುವೆಯಾಗಿ ವಿದೇಶದಲ್ಲಿ ನೆಲೆಸಿದ್ದಾರೆ. ಸಂಸಾರದಲ್ಲಿ ಪತಿ ಪತ್ನಿಯರ ನಡುವೆ ಗಲಾಟೆ, ಜಗಳ ಸಾಮಾನ್ಯವಾಗಿದೆ.
ಅವರಿಬ್ಬರ ಜೀವನದಲ್ಲೂ ಇದೆ ರೀತಿಯಾಗಿತ್ತು.ಈ ಸಂದರ್ಭದಲ್ಲಿ ವ್ಯಾಪಾರದಲ್ಲಿ ನಷ್ಟವನ್ನು ಅನುಭವಿಸಿದ್ದರು. ಇದರಿಂದ ಹತಾಶೆಗೊಂಡು ಪತ್ನಿಗೆ ಕಿರುಕುಳ ಕೊಡಲು ಪತಿ ಆರಂಭಿಸಿದರು. ಇಬ್ಬರ ನಡುವೆ ಮನಸ್ತಾಪ ನಡೆದು ಪತಿ ಅವಳನ್ನು ಬೆಂಗಳೂರಿನಿಂದ ಮುಂಬೈಗೆ ಕಳುಹಿಸಿದ್ದಾನಂತೆ. ಇನ್ನು ಒಟ್ಟಿಗೆ ಇರಲು ಸಾಧ್ಯವಿಲ್ಲ. ನಿನಗೆ ಬದುಕಲು ಬೇಕಾದ ಹಣವನ್ನು ಕಳುಹಿಸುತ್ತೇನೆ ಎಂದಿದ್ದಾನಂತೆ.
ನಂತರ ಪತ್ನಿ ನನಗೆ 55 ವರ್ಷವಾಗಿದೆ, ಉದ್ಯೋಗವಿಲ್ಲ. ತನ್ನನ್ನು ಅವಲಂಭಿಸಿರುವ ಸಾಕುನಾಯಿಗಳನ್ನು ಸಾಕುವುದೇ ಕಷ್ಟವಾಗಿದೆ. ಹೀಗಾಗಿ ಪತಿಯಿಂದ ಜೀವನಾಂಶ ನೀಡುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ತನಗೆ ಯಾವುದೇ ಆದಾಯವಿಲ್ಲದ ಕಾರಣ ತನ್ನ ಗಂಡನ ಜೀವನಾಂಶದಲ್ಲಿ ಜೀವನ ಸಾಗಿಸುವುದರ ಜೊತೆ ತನ್ನೊಂದಿಗೆ ಸಾಕು ನಾಯಿಗಳಿಗೂ ಸೇರಿ ತಿಂಗಳಿಗೆ 70,000 ಕೊಡುವಂತೆ ಪತಿ ಕೋರ್ಟ್ ನಲ್ಲಿ ಕೇಳಿದ್ದಾರಂತೆ.
ಮುಂಬೈ ನ ಬಾಂದ್ರಾ ಕೋರ್ಟ್ ಹೊಸ ತೀರ್ಪು
ಈ ತೀರ್ಪಿನ ಸಂದರ್ಭದಲ್ಲಿ ಮುಂಬೈ ನ ಬಾಂದ್ರಾ ಕೋರ್ಟ್ ನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋಮಲಸಿಂಗ್ ರಜಪೂತ್ ಅವರು ಜೂನ್ 20 ರಂದು ಹೊರಡಿಸಿದ ಆದೇಶ ಕುತೂಹಲಕಾರಿಯಾಗಿದೆ.
ಜನರು ಆರೋಗ್ಯಕರ ಜೀವನ ನಡೆಸಲು ಸಾಕುಪ್ರಾಣಿಗಳು ಸಹಾಯ ಮಾಡುತ್ತವೆ. ಪತ್ನಿ ಜೊತೆಗೆ ಸಾಕುತ್ತಿರುವ ಮೂರೂ ನಾಯಿಗಳಿಗೂ ಜೀವನಾಂಶ ನೀಡುವಂತೆ ಕೋರ್ಟ್ ಆದೇಶ ನೀಡಿದೆ. ಇನ್ನು ರಜಪೂತ್ ಅವರು ಪತ್ನಿಗೆ ಮಾಸಿಕ 50 ಸಾವಿರ ನೀಡುವಂತೆ ಜೂನ್ 20 ರಂದು ಆದೇಶ ಹೊರಡಿಸಿದ್ದಾರೆ.