Murrah buffalo: ಹಾಲು ಮಾರಾಟ ಮಾಡಿ ಲಕ್ಷ ಲಕ್ಷ ಆದಾಯ ಗಳಿಸಿ, ಈ ಎಮ್ಮೆ ಸಾಕಿದರೆ ದಿನಕ್ಕೆ 30 ಲೀಟರ್ ಹಾಲು ಕೊಡುತ್ತದೆ.
ಈ ತಳಿಯ ಎಮ್ಮೆ ಸಾಕಾಣಿಕೆ ಮಾಡಿದರೆ ಲಕ್ಷ ಲಕ್ಷ ಆದಾಯ ಗಳಿಸಬಹುದು.
Murrah buffalo Business: ಹೆಚ್ಚಾಗಿ ಹಳ್ಳಿ ಪ್ರದೇಶದಲ್ಲಿ ಹಸು ಹಾಗೂ ಎಮ್ಮೆ ಸಾಕೆನಿಕೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ. ಇನ್ನು ಹಸು ಮತ್ತು ಎಮ್ಮೆ ಸಾಕಾಣಿಕೆ ಹಾಲು ಉತ್ಪಾದನೆಗೆ ಉತ್ತಮ ಆಯ್ಕೆ ಎನ್ನಬಹುದು. ಇನ್ನು ಹಸುವಿನ ಹಾಲಿಗೆ ಎಮ್ಮೆಯ ಹಾಲು ತಪ್ಪಾಗಿರುತ್ತದೆ. ಮಾರುಕಟ್ಟೆಯಲ್ಲಿ ಈ ಎಮ್ಮೆಯ ಹಾಲಿಗೆ ಹೆಚ್ಚಿನ ಬೇಡಿಕೆ ಇದೆ ಎನ್ನಬಹುದು.
ಹಸು ಸಾಕಾಣಿಕೆಗಿಂತ ಎಮ್ಮೆ ಸಾಕಾಣಿಕೆಯು ಹೆಚ್ಚಿನ ಲಾಭವನ್ನು ನೀಡುತ್ತದೆ ಎಂದರೆ ತಪ್ಪಗಲಾರದು. ಏಕೆಂದರೆ ಕೆಲವು ತಳಿಯ ಎಮ್ಮೆಯು ದಿನಕ್ಕೆ 30 ಲೀಟರ್ ಗಿಂತಲೂ ಅಧಿಕ ಹಾಲನ್ನು ಕೊಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ನೀವು ಎಮ್ಮೆ ಸಾಕಾಣಿಕೆ ಮಾಡಲು ಬಯಸಿದರೆ ಈ ತಳಿಯ ಎಮ್ಮೆಯ ಸಾಕಾಣಿಕೆ ನಿಮಗೆ ಉತ್ತಮ ಆಯ್ಕೆ ಎನ್ನಬಹುದು.
ಮುರ್ರಾ ಎಮ್ಮೆ ತಳಿ
ನೀವು ಮುರ್ರಾ ಎಮ್ಮೆ (Murrah buffalo) ತಳಿಯನ್ನು ಸಾಕುವುದರಿಂದ ಉತ್ತಮ ಲಾಭ ಪಡೆಯಬಹುದು. ಮುರ್ರಾ ತಳಿಯ ಎಮ್ಮೆಯ ಬಣ್ಣವು ಕಡು ಕಪ್ಪು ಬಣ್ಣವನ್ನು ಹೊಂದಿರುತ್ತದೆ. ಇದಲ್ಲದೇ ಇದರ ಕೊಂಬುಗಳೂ ವಕ್ರವಾಗಿವೆ. ಮುರ್ರಾ ಎಮ್ಮೆ ಸಣ್ಣ ತಲೆ ಮತ್ತು ಉದ್ದವಾದ ಬಾಲವನ್ನು ಹೊಂದಿದೆ. ಅಲ್ಲದೆ ಅದರ ಹಿಂದಿನ ಭಾಗವು ಉತ್ತಮವಾಗಿ ಅಭಿವೃದ್ಧಿಗೊಂಡಿದೆ. ಈ ಎಮ್ಮೆಯ ತಲೆ, ಬಾಲ ಮತ್ತು ಕಾಲುಗಳಲ್ಲಿ ಚಿನ್ನದ ಬಣ್ಣದ ಕೂದಲು ಕೂಡ ಕಂಡುಬರುತ್ತದೆ. ಮುರ್ರಾ ಎಮ್ಮೆಯ ಗರ್ಭಾವಸ್ಥೆಯು ಸುಮಾರು 310 ದಿನಗಳು.
ಈ ಎಮ್ಮೆ ಸಾಕಿದರೆ ದಿನಕ್ಕೆ 30 ಲೀಟರ್ ಹಾಲು ಕೊಡುತ್ತದೆ
ಮುರ್ರಾ ತಳಿಯ ಎಮ್ಮೆ ಹೆಚ್ಚು ಹಾಲು ನೀಡುವ ತಳಿ ಎಂದು ಪರಿಗಣಿಸಲಾಗಿದೆ. ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈ ಜಾನುವಾರು ಸಾಕಲಾಗುತ್ತಿದೆ. ಇದಲ್ಲದೇ ಈ ಎಮ್ಮೆಯ ಹಾಲು ಕೊಡುವ ಸಾಮರ್ಥ್ಯವೂ ಇತರೆ ತಳಿಗಳಿಗಿಂತ ಹೆಚ್ಚಿದೆ.
ಈ ಎಮ್ಮೆ ಪ್ರತಿದಿನ 20 ರಿಂದ 30 ಲೀಟರ್ ಹಾಲು ನೀಡುತ್ತದೆ. ಈ ಎಮ್ಮೆಯ ಹಾಲಿಗೆ ಉತ್ತಮ ಬೇಡಿಕೆ ಮತ್ತು ದುಬಾರಿ ಬೆಲೆ ಸಿಗುತ್ತದೆ. ಮುರ್ರಾ ಎಮ್ಮೆ ಹಾಲಿನ ಬೆಲೆ ಮಾರುಕಟ್ಟೆಯಲ್ಲಿ ಸಾಕಷ್ಟು ಉತ್ತಮವಾಗಿದೆ. ಮಾಹಿತಿ ಪ್ರಕಾರ ಈ ಎಮ್ಮೆಯ ಬೆಲೆ 50 ಸಾವಿರದಿಂದ 2 ಲಕ್ಷ ರೂ. ಆಗಿದೆ.